ಬೆಂಗಳೂರು: 40, 50 ರೂಪಾಯಿಗೆ ಹಾಡಹಗಲೇ ನೆತ್ತರು ಹರಿದಿದೆ. ನಗರದ ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಬೆಚ್ಚಿಬೀಳಿಸುವ ಪ್ರಕರಣ ನಡೆದಿದೆ.
16 ವರ್ಷದ ಮಹಮ್ಮದ್ ವಾಸಿಂ ಕೊಲೆಯಾಗಿರುವ ಬಾಲಕ. ಡಿಜೆ ಹಳ್ಳಿಯ ಮೋದಿ ರಸ್ತೆಯಲ್ಲಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಮಹಮ್ಮದ್ ವಾಸಿಂ ಸ್ನೇಹಿತರು ಮೂವರು ಗಾಡಿಯಲ್ಲಿ ಬಂದು ಕೊಲೆಯಾದ ಬಾಲಕನ ಬಳಿ 40 , 50, ರೂಪಾಯಿ ಕೊಡುವಂತೆ ಕೇಳಿದ್ದರು. ಇದಕ್ಕೆ ಮಹಮ್ಮದ ಹಣ ಇಲ್ಲವೆಂದು ಹೇಳಿದ್ದಾನೆ. ಇಷ್ಟಕ್ಕೆ ಕೆರಳಿದ ದುಷ್ಕರ್ಮಿಗಳು ಬೈಕ್ನಿಂದ ಕೆಳಗಿಳಿದು ಚಾಕುವಿನಿಂದ ಮಹಮ್ಮದ್ ವಾಸಿಂ ಎದೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.
ವಿಚಾರ ತಿಳಿದು ಘಟನಾ ಸ್ಥಳಕ್ಕೆ ಪೂರ್ವ ವಿಭಾಗ ಡಿಸಿಪಿ ಡಾ. ಶರಣಪ್ಪ ಭೇಟಿ ನಿಡಿ ಪರಿಶೀಲಿಸಿದ್ದಾರೆ. ಹಾಗೆಯೇ ಆರೋಪಿಗಳು ಗಾಂಜಾ ಮತ್ತಿನಲ್ಲಿ ಈ ರೀತಿ ಮಾಡಿರುವ ಶಂಕೆ ಕೂಡ ಪೊಲೀಸರಿಗೆ ವ್ಯಕ್ತವಾಗಿದೆ. ಸದ್ಯ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ಮುಂದುವರೆದಿದೆ.