ETV Bharat / state

ಕಾಂಗ್ರೆಸ್ ಪರವಾಗಿದ್ದ ದಲಿತರು ವಿವಿಧ ರಾಜಕೀಯ ಕಾರಣಗಳಿಂದ ಗುಂಪುಗಳಾಗಿ ವಿಭಜನೆ: ಮುನಿಯಪ್ಪ

ಹೈಕಮಾಂಡ್ ಯಾವ ಕ್ಷೇತ್ರ ಹೇಳುತ್ತದೆಯೋ ಅಲ್ಲಿ ಸ್ಪರ್ಧೆ ಮಾಡ್ತೇನೆ. ನಾನು ಎಐಸಿಸಿ ಸಮಿತಿಯಲ್ಲಿ ಇದ್ದು ಇಂಥದ್ದೇ ಕ್ಷೇತ್ರ ಕೊಡಿ ಎಂದು ಹೇಳೋದು ಸರಿಯಲ್ಲ ಎಂದು ಕೆ ಎಚ್​ ಮುನಿಯಪ್ಪ ಹೇಳಿದರು.

KN_BNG
ಕೆಎಚ್ ಮುನಿಯಪ್ಪ
author img

By

Published : Nov 22, 2022, 6:03 PM IST

ಬೆಂಗಳೂರು: ಕಾಂಗ್ರೆಸ್ ಪರವಾಗಿದ್ದ ದಲಿತ ಸಮುದಾಯಗಳು ವಿವಿಧ ರಾಜಕೀಯ ಕಾರಣಗಳಿಂದ ಗುಂಪುಗಳಾಗಿ ವಿಂಗಡನೆಗೊಂಡಿವೆ ಎಂದು ಕೇಂದ್ರದ ಮಾಜಿ ಸಚಿವ ಕೆಎಚ್ ಮುನಿಯಪ್ಪ ತಿಳಿಸಿದ್ದಾರೆ.

ಬೆಂಗಳೂರಿನ ಸಂಜಯನಗರ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ದಲಿತ ಸಮಾಜ ಒಗ್ಗಟ್ಟಾಗಿ ಸೇರಬೇಕಿದೆ. ಮೂಲತಃ ದಲಿತ ಸಮುದಾಯ ಕಾಂಗ್ರೆಸ್ ಪರವಾಗಿ ಇದ್ದ ಸಮುದಾಯ. ರಾಜಕೀಯ ಕಾರಣಗಳಿಂದ ಗುಂಪುಗಳಾಗಿ ವಿಂಗಡಣೆ ಆಗಿದೆ. ಇದು ಸರಿಯಲ್ಲ ಅಂತ ನಾನೂ ಪರಮೇಶ್ವರ್ ಒಟ್ಟಾಗಿ ಸೇರಿ ದೊಡ್ಡ ಮಟ್ಟದಲ್ಲಿ ದಲಿತ ಸಮಾವೇಶ ಆಯೋಜನೆಗೆ ನಿರ್ಧಾರ ಮಾಡಿದ್ದೇವೆ. ಇದರಿಂದ ಕಾಂಗ್ರೆಸ್​ಗೆ ಶಕ್ತಿ ಬರುತ್ತದೆ ಎಂದರು.

ಬಳಿಕ ಸಿದ್ದರಾಮಯ್ಯ ಕಾಲದಲ್ಲಿ ಆದ ಯೋಜನೆಗಳು ಬಹಳ ಇವೆ. 28-30 ಸಾವಿರದಷ್ಟು ದೊಡ್ಡ ಮೊತ್ತದ ಅನುದಾನ ಬಜೆಟ್​ನಲ್ಲಿ ನೀಡಲಾಗಿತ್ತು. ಈಗ ಬಜೆಟ್ ಗಾತ್ರದ ಆಧಾರದ ಮೇಲೆ 42 ಸಾವಿರ ಕೋಟಿ ಎಸ್​ಸಿ ಎಸ್​ಟಿ ಸಮುದಾಯಕ್ಕೆ ಮೀಸಲು ಇಡಬೇಕಿತ್ತು. ಇದನ್ನು ಬೇರೆಕಡೆ ಬಿಜೆಪಿ ಸರ್ಕಾರ ಡೈವರ್ಟ್ ಮಾಡ್ತಾ ಇದೆ ಎಂದು ಆರೋಪಿಸಿದರು.

ನಾನು ಯಾವುದೇ ಕ್ಷೇತ್ರದ ಬಗ್ಗೆ ನಮೂದಿಸಿಲ್ಲ. ಹೈಕಮಾಂಡ್ ಯಾವ ಕ್ಷೇತ್ರ ಹೇಳುತ್ತದೆಯೋ ಅಲ್ಲಿ ಸ್ಪರ್ಧೆ ಮಾಡ್ತೇನೆ. ನಾನು ಎಐಸಿಸಿ ಸಮಿತಿಯಲ್ಲಿ ಇದ್ದು ಇಂಥದ್ದೇ ಕ್ಷೇತ್ರ ಕೊಡಿ ಅಂತ ಹೇಳೋದು ಸರಿಯಲ್ಲ. ಹೈಕಮಾಂಡ್ ಯಾವ ಕೆಲಸ ಹೇಳಿದರೂ ಮಾಡಲು ನಾನು ಸಿದ್ದ. ಸಿದ್ದರಾಮಯ್ಯ ಸ್ಪರ್ಧೆ ಮಾಡೋದು ಬೇಡ ಎಂಬುದು ಸಂತೋಷ ಲಾಡ್ ವೈಯಕ್ತಿಕ ಸಲಹೆ. ಸರ್ಕಾರ ಬಂದ ಮೇಲೆ ಸಿಎಂ ಮಾಡಿ ಬಳಿಕ ಕೆಲವರನ್ನು ವಿಧಾನಸಭೆಗೆ ಕಳುಹಿಸಿದ ಉದಾಹರಣೆಯೂ ಇದೆ. ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ.

ಚುನಾವಣೆ ಸಮಿತಿಯಲ್ಲಿ ಚರ್ಚಿಸಿ ಅಭ್ಯರ್ಥಿಗಳ ತೀರ್ಮಾನ: ಟಿಕೆಟ್ ನೀಡುವುದಕ್ಕೆ ಕೇಂದ್ರ ಚುನಾವಣಾ ಸಮಿತಿ ಇದೆ. ಅಲ್ಲಿ ಚರ್ಚೆಯಾದ ಬಳಿಕ ಟಿಕೆಟ್ ಯಾರಿಗೆ ಕೊಡಬೇಕು ಎಂಬುದು ತೀರ್ಮಾನ ಆಗುತ್ತದೆ. ಸಿದ್ದರಾಮಯ್ಯ ಡಿಕೆಶಿವಕುಮಾರ್ ಒಟ್ಟಿಗೇ ಇದ್ದು, ಒಟ್ಟಿಗೇ ಕೆಲಸ ಮಾಡ್ತಿದ್ದಾರೆ. ಸಿದ್ದರಾಮಯ್ಯ ಡಿಕೆಶಿ ಝಟಾಪಟಿ ಅನ್ನೋದು ಕೇವಲ ಮಾಧ್ಯಮಗಳ ಸೃಷ್ಟಿ ಎಂದರು.

ಬಳಿಕ ಐಕ್ಯತಾ ಸಮಾವೇಶ ತಯಾರಿ ವಿಚಾರ ಮಾತನಾಡಿ, ಎಲ್ಲ ಒಗ್ಗಟ್ಟಿನಿಂದ ತಯಾರಿ ಮಾಡುತ್ತಿದ್ದೇವೆ. ಎಸ್ಸಿ ಮತ್ತು ಎಸ್ಟಿ ಒಟ್ಟು ಸೇರಿಸಲು ಪ್ರಯತ್ನ ಮಾಡುತ್ತಿದ್ದೇವೆ. ರಾಜಕೀಯ ಕೆಲ ಕಾರಣಗಳಿಂದ ದೂರ ಆಗಿದ್ವಿ. ಎಲ್ಲ ದಲಿತ ಮುಖಂಡರು ಒಟ್ಟಾಗಿ ಸಭೆ ಮಾಡಿದ್ದೇವೆ. ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಕಾಂಗ್ರೆಸ್​ಗೆ ಶಕ್ತಿ ಬರಲು ಸಮಾವೇಶ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ಕಾಲದಲ್ಲಿ ಅನೇಕ ಕಾರ್ಯಕ್ರಮ ಕೊಟ್ಟಿದ್ದಾರೆ. ದಲಿತರಿಗೆ ಹಲವು ಕಾರ್ಯಕ್ರಮ ನೀಡಿದ್ದಾರೆ. ದಲಿತರಿಗೆ ಪ್ರತ್ಯೇಕ ಬಜೆಟ್ ಮೂಡಿಸಿದ್ದಾರೆ. ಅಲ್ಲದೇ 30 ಸಾವಿರ ಕೋಟಿ ಬಜೆಟ್​ನಲ್ಲಿ ಮೀಸಲು‌ ಇಟ್ಟಿದ್ದರು.

ಆದರೆ ಈ ಸರ್ಕಾರ ಹಣ ಖರ್ಚು ಮಾಡುತ್ತಿಲ್ಲ. ಸದನದಲ್ಲಿ ಈ ಬಗ್ಗೆ ಸಿದ್ದರಾಮಯ್ಯ ಕೂಡ ಪ್ರಶ್ನೆ ಮಾಡಿದರು. ಹಾಗಾಗಿ ದಲಿತರ ಸಂಘಟನೆ ಮಾಡಬೇಕಿದೆ. ಮತ್ತೆ ಎಲ್ಲ ಕಾರ್ಯಕ್ರಮ ಜಾರಿ‌ ಮಾಡಬೇಕಿದೆ. ಅದಕ್ಕೆ ಕಾಂಗ್ರೆಸ್ ಸರ್ಕಾರ ಬರಬೇಕು. ಆ ನಿಟ್ಟಿನಲ್ಲಿ ಸಮುದಾಯ ಒಗ್ಗೂಡಿಸುವ ಪ್ರಯತ್ನ ‌ಮಾಡುತ್ತಿದ್ದೇವೆ ಎಂದು ಹೇಳಿದರು.

ಮೊನ್ನೆ ಸಭೆಗೆ ಜಾರಕಿಹೊಳಿ ಬರಬೇಕಿತ್ತು: ಸತೀಶ್ ಜಾರಕಿಹೊಳಿ‌ ಮುನಿಸಿಕೊಂಡ ವಿಚಾರ ಮಾತನಾಡಿ, ಮೊನ್ನೆ ಸಭೆಗೆ ಜಾರಕಿಹೊಳಿ ಬರಬೇಕಿತ್ತು. ಆದ್ರೆ ವೈಯಕ್ತಿಕ ಕೆಲಸ ಇತ್ತು ಹಾಗಾಗಿ ಸಭೆಗೆ ಬಂದಿಲ್ಲ. ನಮ್ಮ ಜೊತೆ ಸತೀಶ್ ಜಾರಕಿಹೊಳಿ ಇದ್ದಾರೆ. ಪಕ್ಷ ಅವರ ಬೆನ್ನಿಗೆ ನಿಂತಿಲ್ಲ ಅಂತ ಮುನಿಸಿಕೊಂಡಿಲ್ಲ. ಮುಂದಿನ ಎಲ್ಲ ಸಭೆಗೆ ಸತೀಶ್ ಬರ್ತಾರೆ. ಅವತ್ತು ಅನಿವಾರ್ಯ ಕಾರಣ ಇತ್ತು ಹಾಗಾಗಿ ಬಂದಿಲ್ಲ ಎಂದು ಸತೀಶ್ ಗೈರು ಸಮರ್ಥಿಸಿಕೊಂಡರು.

ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆಗೆ ಮುನಿಯಪ್ಪ ಅವರ ಮುನಿಸು ಇದೆ. ಆ ಕಾರಣಕ್ಕೆ ಸ್ಪರ್ಧೆ ಮಾಡುವುದು ಬೇಡಾ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಸಿದ್ದರಾಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡಲಿ. ನನಗೆ ಯಾವುದೇ ಕಾರಣಕ್ಕೂ ಮುನಿಸಿಲ್ಲ. ನಾನು ಅವರು ಕೋಲಾರಕ್ಕೆ ಬರುವುದನ್ನು ಸ್ವಾಗತ ಮಾಡುತ್ತೇನೆ. ಅಲ್ಲಿರುವ ಸಂದರ್ಭದ ಪರಿಸ್ಥಿತಿ ಬಗ್ಗೆ ತಿಳಿಸಿದ್ದೇನೆ ಎಂದರು.

ದಲಿತ ಸಿಎಂ ವಿಚಾರವಾಗಿ ನಾನು ರೇಸ್​ನಲ್ಲಿ ಇಲ್ಲ. ಮೊದಲು ಪಕ್ಷ ಅಧಿಕಾರಕ್ಕೆ ಬರಬೇಕು. ಆಮೇಲೆ ಹೈಕಮಾಂಡ್ ನಿರ್ಧಾರ ಮಾಡುತ್ತೆ. ನಮ್ಮಲ್ಲಿ ಒಬ್ಬರೇ ಸಿಎಂ ಆಗೋದು ಎಂದು ಹೇಳಿದರು.

ಇದನ್ನೂ ಓದಿ: ಹಿಂದುಳಿದ ವರ್ಗಕ್ಕೆ ಮೀಸಲಾತಿ ಹೆಚ್ಚಳ: ಬಿಜೆಪಿಗೆ ಸೇರಿದ 300ಕ್ಕೂ ಅಧಿಕ ಗ್ರಾಮಸ್ಥರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.