ETV Bharat / state

ಚುನಾವಣಾ ಅಕ್ರಮ ಆರೋಪ: ಅನರ್ಹ ಶಾಸಕ ಮುನಿರತ್ನ ಅರ್ಜಿ ವಜಾ - ನಕಲಿ ಮತದಾರರ ಗುರುತಿಸ ಚೀಟಿ ಪ್ರಕರಣ

ಆರೋಪ ಮುಕ್ತಗೊಳಿಸುವಂತೆ ಅನರ್ಹ ಶಾಸಕ ಮುನಿರತ್ನ ಸಲ್ಲಿಸಿದ ಮನವಿಯನ್ನು ಹೈಕೋರ್ಟ್​ ವಜಾಗೊಳಿಸಿದೆ. ವಿಚಾರಣೆ ನಡೆಸುವಂತೆ ಮಧ್ಯಂತರ ಆದೇಶ ನೀಡಿದೆ.

Munirat's petition dismissed by court
ಚುನಾವಣಾ ಅಕ್ರಮ ಆರೋಪ
author img

By

Published : Apr 28, 2020, 11:12 PM IST

ಬೆಂಗಳೂರು: ನಕಲಿ ಮತದಾರರ ಗುರುತಿನ ಚೀಟಿ ಪತ್ತೆ ಪ್ರಕರಣದಲ್ಲಿ ಯಾವುದೇ ಪಾತ್ರವಿಲ್ಲದ ತಮ್ಮನ್ನು ಆರೋಪ ಮುಕ್ತಗೊಳಿಸಬೇಕು ಎಂದು ಕೋರಿದ್ದ, ಅನರ್ಹ ಶಾಸಕ ಮುನಿರತ್ನ ಮನವಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ. ವಿಚಾರಣೆಯನ್ನು ಎದುರಿಸಲೇಬೇಕು ಎಂದು ಹೈಕೋರ್ಟ್‌ ಮಧ್ಯಂತರ ಆದೇಶ ನೀಡಿದೆ.

Munirat's petition dismissed by court
ಚುನಾವಣಾ ಅಕ್ರಮ ಆರೋಪ

2018ರಲ್ಲಿ ನಡೆದ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಮುನಿರತ್ನ ಆಯ್ಕೆಯನ್ನು ಅಸಿಂಧುಗೊಳಿಸಿ ಎಂದು, ಬಿಜೆಪಿಯ ಪರಾಜಿತ ಅಭ್ಯರ್ಥಿ ಮುನಿರಾಜುಗೌಡ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಗಳ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರ ಏಕಸದಸ್ಯ ಪೀಠ, ವಿಚಾರಣೆ ಮುಂದುವರೆಸಬೇಕೆಂಬ ಮಧ್ಯಂತರ ಆದೇಶ ಹೊರಡಿಸಿದೆ. ಆದೇಶದಲ್ಲಿ ಮುನಿರಾಜು ಗೌಡ ಅವರು ತಮ್ಮ ಚುನಾವಣಾ ತಕರಾರು ಅರ್ಜಿಯ ವಾದ ಪತ್ರವನ್ನು ತಿದ್ದುಪಡಿ ಮಾಡಲು ಮತ್ತು ಹೊಸ ದಾಖಲೆಗಳನ್ನು ಸಲ್ಲಿಸಲು ಅವಕಾಶ ನೀಡಿದೆ. ಆದರೆ, ಮೂಲ ಅರ್ಜಿಯಲ್ಲಿ ಮುನಿರಾಜು ಗೌಡ ಅವರನ್ನು ಚುನಾಯಿತ ಅಭ್ಯರ್ಥಿ ಎಂದು ಘೋಷಿಸಲು ನಿರ್ದೇಶಿಸಬೇಕು ಎಂಬ ಮನವಿ ತಿರಸ್ಕರಿಸಿದೆ.

ಅರ್ಜಿಯಲ್ಲಿ ಕಾಣಿಸಿರುವ ಹೆಚ್ಚಿನ ಪ್ರಮಾಣದ ಸಾಕ್ಷ್ಯಗಳ ವಿಚಾರಣೆಗೆ ಬಹುಕಾಲ ಹಿಡಿಯಬಹುದು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನಪ್ರತಿನಿಧಿ ಇಲ್ಲದೇ ಕ್ಷೇತ್ರವನ್ನು ಖಾಲಿ ಉಳಿಸುವುದು ಸಂವಿಧಾನದ ಮೂಲ ಸ್ವರೂಪಕ್ಕೆ ತಕ್ಕುದಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ. ಕ್ಷೇತ್ರಕ್ಕೆ ಚುನಾವಣೆ ನಡೆಸಬೇಕು ಎಂಬುದನ್ನು ಚುನಾವಣಾ ಆಯೋಗಕ್ಕೆ ಸೂಚ್ಯವಾಗಿ ತಿಳಿಸಿದೆ. ಇದರಿಂದಾಗಿ ಉಪ ಚುನಾವಣೆಗೆ ಇದ್ದ ಅಡ್ಡಿ ನಿವಾರಣೆಯಾಗಿದ್ದು, ಚುನಾವಣೆ ನಡೆಸಲು ಆಯೋಗ ಸ್ವತಂತ್ರಗೊಂಡಂತಾಗಿದೆ. ಈವರೆಗೆ ಪ್ರಕರಣ ಕೋರ್ಟ್‌ನಲ್ಲಿದೆ ಎಂಬ ಕಾರಣಕ್ಕೆ ಆಯೋಗ ಚುನಾವಣೆಯನ್ನು ತಡೆ ಹಿಡಿದಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.