ಬೆಂಗಳೂರು: ಅಧಿವೇಶನಕ್ಕೂ ಮುನ್ನ ಅತೃಪ್ತ ಕಾಂಗ್ರೆಸ್ ಶಾಸಕ ಮುನಿರತ್ನ ಬೆಂಗಳೂರಿನಿಂದ ಹೊರ ರಾಜ್ಯಕ್ಕೆ ಹೊರಟಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ಥಾಣದಿಂದ 12 ಗಂಟೆ ವಿಮಾನದಲ್ಲಿ ಬೆಂಗಳೂರಿನಿಂದ ಪ್ರಯಾಣ ಬೆಳೆಸಿದ್ರು. ನಿನ್ನೆ ಸಂಜೆ ಸ್ಪೀಕರ್ ಭೇಟಿಯಾಗಲು ಹೈದರಾಬಾದ್ನಿಂದ ಬೆಂಗಳೂರಿಗೆ ಬಂದಿದ್ದ ಶಾಸಕ ಮುನಿರತ್ನಗೆ ವಿಪ್ ಜಾರಿ ಮಾಡಿದ್ದರೂ ಅಧಿವೇಶನಕ್ಕೆ ಹಾಜರಾಗಿಲ್ಲ.
ಮುಂಬೈ ಅಥವಾ ಹೈದರಾಬಾದ್ಗೆ ಪ್ರಯಾಣ ಬೆಳೆಸಿರುವ ಸಾಧ್ಯತೆಯಿದೆ. ವಿಪ್ ಗೆ ಹೆದರದೇ ಕಾನೂನು ಹೋರಾಟ ನಡಸುತ್ತೇವೆ ಎಂದು ಹೇಳ್ತಾ ಇದ್ರು. ಇದೀಗ ಮುನಿರತ್ನ ಬೆಂಗಳೂರಿಂದ ಹೊರಟಿರುವುದರಿಂದ ಅತೃಪ್ತ ಶಾಸಕರು ಅಧಿವೇಶನಕ್ಕೆ ಹಾಜರಾಗುವುದು ಅನುಮಾನ ಮೂಡಿಸಿದೆ.