ಬೆಂಗಳೂರು: ವಿಧಾನ ಸಭೆಯಿಂದ ವಿಧಾನ ಪರಿಷತ್ಗೆ ಚುನಾಯಿತರಾದ ಮುನಿರಾಜು ಗೌಡ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ವಿಧಾನ ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಕೇಸರಿ ಶಾಲು ಧರಿಸಿ ಆಗಮಿಸಿದ ನೂತನ ಸದಸ್ಯ ತುಳಸಿ ಮುನಿರಾಜು ಗೌಡ ಗಮನ ಸೆಳೆದರು. ನಂತರ ಸಭಾಪತಿ ಬಸವರಾಜ ಹೊರಟ್ಟಿ ಪ್ರಮಾಣವಚನ ಬೋಧಿಸಿದರು. ಬಳಿಕ ಸಂವಿಧಾನದ ಪುಸ್ತಕವನ್ನು ಸಭಾಪತಿಗಳು ನೂತನ ಸದಸ್ಯರಿಗೆ ನೀಡಿದರು. ಪ್ರಮಾಣ ವಚನದ ನಂತರ ಪ್ರತಿಪಕ್ಷದ ಸಾಲಿನಲ್ಲಿ ತೆರಳಿ ಸದಸ್ಯರನ್ನು ಪರಿಚಯಿಸಿಕೊಂಡರು.
ಆಡಳಿತ ಪಕ್ಷದ ಸದಸ್ಯರಿಂದ ಅಭಿನಂದನೆ ಸ್ವೀಕರಿಸಿ ಬಳಿಕ, ಕಂದಾಯ ಸಚಿವ ಆರ್. ಅಶೋಕ್ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು. ನಂತರ ತಮಗೆ ನಿಗದಿಪಡಿಸಿದ್ದ ಆಸನದಲ್ಲಿ ಆಸೀನರಾದರು.