ಬೆಂಗಳೂರು: ಬಹುರಾಷ್ಟ್ರೀಯ ಸಂಸ್ಥೆಗಳು ನಗರದಲ್ಲಿ ಈ ವರ್ಷ ಪೂರ್ತಿ ವರ್ಕ್ ಫ್ರಂ ಹೋಂ ನೀಡುವುದಕ್ಕೆ ಚಿಂತನೆ ನಡೆಸುತ್ತಿವೆ.
ಪ್ರತಿನಿತ್ಯ ದೇಶದಲ್ಲಿ 50 ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್ಗಳು ಪತ್ತೆಯಾಗುತ್ತಿದ್ದು, ಯಾವುದೇ ಕಾರಣಕ್ಕೂ 2020ರಲ್ಲಿ ಕಚೇರಿ ತೆರೆಯುವುದು ಬೇಡ ಎಂಬ ನಿರ್ಧಾರಕ್ಕೆ ಬಂದಿದೆ.
ಈಟಿವಿ ಭಾರತ ವಿವಿಧ ಸಂಸ್ಥೆಯ ಮಾನವಸಂಪನ್ಮೂಲ ಅಧಿಕಾರಿಗಳೊಂದಿಗೆೆ ಈ ವಿಷಯವಾಗಿ ಚರ್ಚಿಸಿದಾಗ, ವರ್ಕ್ ಫ್ರಂ ಹೋಂನಲ್ಲಿ ನೌಕರರ ಕೆಲಸದ ಗುಣಮಟ್ಟ ಹೆಚ್ಚಿದೆ. ಜೊತೆಗೆ ಸಂಸ್ಥೆಯ ನೌಕರರು ರಜೆ ಪಡೆಯುವುದು ಕಳೆದ 5 ತಿಂಗಳಲ್ಲಿ ಕಡಿಮೆಯಾಗಿದೆ. ಇದು ಸಂಸ್ಥೆಯ ಉತ್ಪನ್ನಕ್ಕೆ ಉತ್ತಮ ಪ್ರತಿಕ್ರಿಯೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜೊತೆಗೆ ವರ್ಕ್ ಫ್ರಂ ಹೋಂ ಬಗ್ಗೆ ಐಟಿ ನೌಕರರು ಹೇಳುವ ಪ್ರಕಾರ, ಕಚೇರಿಯಲ್ಲಿ ಕೆಲಸ ಒಂದು ಪಾಳಿ (ಶಿಫ್ಟ್) ಪ್ರಕಾರ ಇರುತ್ತದೆ 8 ರಿಂದ 9 ಗಂಟೆಯ ಕೆಲಸ ಮುಗಿಸಿ ಮನೆಗೆ ಹೋಗಬಹುದು. ಆದರೆ ಈಗ ನಾವು ಮನೆಯಲ್ಲಿ ಕೆಲಸ ಯಾವುದೇ ಶಿಫ್ಟ್ ಇಲ್ಲದೆ ಕೆಲಸದ ಒತ್ತಡ ಹೆಚ್ಚಿದೆ. ಆದರೆ ಸಂಬಳ ಭತ್ಯೆ ಮಾತ್ರ ಹೆಚ್ಚಳವಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.