ಬೆಂಗಳೂರು: ರಾಜ್ಯಸಭೆ ಟಿಕೆಟ್ ನೀಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವ ಹಿರಿಯ ಚಿತ್ರನಟ, ಮಾಜಿ ವಿಧಾನ ಪರಿಷತ್ ಸದಸ್ಯ ಮುಖ್ಯಮಂತ್ರಿ ಚಂದ್ರು ಇಂದು 'ಆಮ್ ಆದ್ಮಿ' ಪಕ್ಷ ಸೇರ್ಪಡೆಯಾಗಿದ್ದಾರೆ. ಖಾಸಗಿ ಹೋಟೆಲ್ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಆಪ್ನ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರ ಸಮ್ಮುಖದಲ್ಲಿ ಅವರು ಪಕ್ಷಕ್ಕೆ ಸೇರಿದ್ದಾರೆ.
-
Welcome to the newest member of AAP, Mukhyamantri Chandru @mukhyamantri_c!
— AAP Bengaluru (@AAPBangalore) June 7, 2022 " class="align-text-top noRightClick twitterSection" data="
ಎಎಪಿ ಕುಟುಂಬ ಸೇರಿದ ಹೊಸ ಸದಸ್ಯ ಶ್ರೀ ಮುಖ್ಯಮಂತ್ರಿ ಚಂದ್ರು ಅವರಿಗೆ ಪ್ರೀತಿಯ ಸ್ವಾಗತ @aapkaprithvi @Nimmabhaskar22 @MohanDasari_ pic.twitter.com/5ew0MOLmIN
">Welcome to the newest member of AAP, Mukhyamantri Chandru @mukhyamantri_c!
— AAP Bengaluru (@AAPBangalore) June 7, 2022
ಎಎಪಿ ಕುಟುಂಬ ಸೇರಿದ ಹೊಸ ಸದಸ್ಯ ಶ್ರೀ ಮುಖ್ಯಮಂತ್ರಿ ಚಂದ್ರು ಅವರಿಗೆ ಪ್ರೀತಿಯ ಸ್ವಾಗತ @aapkaprithvi @Nimmabhaskar22 @MohanDasari_ pic.twitter.com/5ew0MOLmINWelcome to the newest member of AAP, Mukhyamantri Chandru @mukhyamantri_c!
— AAP Bengaluru (@AAPBangalore) June 7, 2022
ಎಎಪಿ ಕುಟುಂಬ ಸೇರಿದ ಹೊಸ ಸದಸ್ಯ ಶ್ರೀ ಮುಖ್ಯಮಂತ್ರಿ ಚಂದ್ರು ಅವರಿಗೆ ಪ್ರೀತಿಯ ಸ್ವಾಗತ @aapkaprithvi @Nimmabhaskar22 @MohanDasari_ pic.twitter.com/5ew0MOLmIN
ಮುಖ್ಯಮಂತ್ರಿ ಚಂದ್ರು ಆಮ್ ಆದ್ಮಿ ಪಕ್ಷ ಸೇರ್ಪಡೆಯಾಗಿರುವುದಕ್ಕೆ ಸಂಬಂಧಿಸಿದಂತೆ ಎಎಪಿ ಬೆಂಗಳೂರು ಘಟಕ ಟ್ವೀಟ್ ಮಾಡಿದ್ದು, ಕರ್ನಾಟಕದ ಸಾರ್ವಕಾಲಿಕ ಮುಖ್ಯಮಂತ್ರಿ ಈಗ ಆಮ್ ಆದ್ಮಿ ಆಗಿದ್ದಾರೆ. ನಮ್ಮ ಕುಟುಂಬಕ್ಕೆ ಸ್ವಾಗತ ಮುಖ್ಯಮಂತ್ರಿಗಳೇ! ಎಂದು ಆಪ್ ಬರೆದುಕೊಂಡಿದೆ. ಪಕ್ಷ ಸೇರ್ಪಡೆ ವೇಳೆ ಎಎಪಿ ಪಕ್ಷದ ಸಿದ್ಧಾಂತಗಳನ್ನ ಮೆಚ್ಚಿ ತಾವು ಸೇರ್ಪಡೆಯಾಗುತ್ತಿರುವುದಾಗಿ ಚಂದ್ರು ತಿಳಿಸಿದ್ದಾರೆ. ಈ ವೇಳೆ ಮಾಜಿ ಐಪಿಎಸ್ ಅಧಿಕಾರಿ, ಆಪ್ ಮುಖಂಡ ಭಾಸ್ಕರ್ ರಾವ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
-
Look what our new member @mukhyamantri_c has to say
— AAP Bengaluru (@AAPBangalore) June 7, 2022 " class="align-text-top noRightClick twitterSection" data="
ನಮ್ಮ ಹೊಸ ಸದಸ್ಯ ಶ್ರೀ ಮುಖ್ಯಮಂತ್ರಿ ಚಂದ್ರು ಅವರ ಎರಡು ಮಾತು @MohanDasari_ https://t.co/2lvfnEMOR6
">Look what our new member @mukhyamantri_c has to say
— AAP Bengaluru (@AAPBangalore) June 7, 2022
ನಮ್ಮ ಹೊಸ ಸದಸ್ಯ ಶ್ರೀ ಮುಖ್ಯಮಂತ್ರಿ ಚಂದ್ರು ಅವರ ಎರಡು ಮಾತು @MohanDasari_ https://t.co/2lvfnEMOR6Look what our new member @mukhyamantri_c has to say
— AAP Bengaluru (@AAPBangalore) June 7, 2022
ನಮ್ಮ ಹೊಸ ಸದಸ್ಯ ಶ್ರೀ ಮುಖ್ಯಮಂತ್ರಿ ಚಂದ್ರು ಅವರ ಎರಡು ಮಾತು @MohanDasari_ https://t.co/2lvfnEMOR6
ಕಳೆದ ಕೆಲ ದಿನಗಳ ಹಿಂದೆ ಕಾಂಗ್ರೆಸ್ ತೊರೆದಿದ್ದ ಮುಖ್ಯಮಂತ್ರಿ ಚಂದ್ರು ಅವರನ್ನು ಆಪ್ನ ಪೃಥ್ವಿ ರೆಡ್ಡಿ ಮತ್ತು ಇತರ ಪ್ರಮುಖರು ಭೇಟಿ ಮಾಡಿ ಪಕ್ಷ ಸೇರಲು ಮನವೊಲಿಸಿದ್ದರು. ಇದಕ್ಕೆ ಸ್ಪಂದಿಸಿ ಪಕ್ಷ ಸೇರುವ ಭರವಸೆ ನೀಡಿದ್ದರು.
ಈ ಹಿಂದೆ ಬಿಜೆಪಿಯಲ್ಲಿ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದ ಮುಖ್ಯಮಂತ್ರಿ ಚಂದ್ರು, 2008ರಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕವಾಗಿದ್ದರು. ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ಪಕ್ಷ ಆಡಳಿತದ ಚುಕ್ಕಾಣಿ ಹಿಡಿದಾಗ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಮಾತನಾಡಿ ಕಾಂಗ್ರೆಸ್ ಪಕ್ಷ ಸೇರಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಒಂದು ವರ್ಷದ ಅವಧಿಗೆ ಮುಂದುವರೆದಿದ್ದರು.
ಕಾಂಗ್ರೆಸ್ ಪಕ್ಷದಲ್ಲಿ ಸೂಕ್ತ ಸ್ಥಾನಮಾನದ ನಿರೀಕ್ಷೆಯಲ್ಲಿದ್ದ ಮುಖ್ಯಮಂತ್ರಿ ಚಂದ್ರು ಅವರು ರಾಜ್ಯಸಭೆ ಅಥವಾ ವಿಧಾನ ಪರಿಷತ್ ಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಅಂತಿಮವಾಗಿ ರಾಜ್ಯಸಭೆ ಮತ್ತು ವಿಧಾನ ಪರಿಷತ್ನಲ್ಲಿ ಟಿಕೆಟ್ ನೀಡದಿರುವುದಕ್ಕೆ ಬೇಸತ್ತು ಪಕ್ಷಕ್ಕೆ ಗುಡ್ ಬೈ ಹೇಳಿದ್ದರು.