ETV Bharat / state

ಯಡಿಯೂರಪ್ಪ ಕೊಟ್ಟ ಆ ಭರವಸೆಗೆ ಎಂಟಿಬಿ ನಾಗರಾಜ್‌ ಫುಲ್‌ಖುಷ್‌..!

ಎಂಟಿಬಿ ನಾಗರಾಜ್ ಅವರ ಮನವೊಲಿಸಿದ ಸಿಎಂ ಬಿಎಸ್​ವೈ ಅವರು, ಸಚಿವ ಸ್ಥಾನದ ಬದಲು ಪಕ್ಷದಲ್ಲಿ ಗೌರವಯುತ ಸ್ಥಾನ ನೀಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಎಂಟಿಬಿ ಸಿಟ್ಟು ಶಮನವಾಗಿದೆ ಎಂದು ಹೇಳಲಾಗ್ತಿದೆ.

author img

By

Published : Feb 3, 2020, 9:01 PM IST

MTB Nagaraj Statement about Cabinet expansion
ಅನರ್ಹ ಶಾಸಕ ಎಂಟಿಬಿ ನಾಗರಾಜ್

ಬೆಂಗಳೂರು: ಉಪ ಚುನಾವಣೆಯಲ್ಲಿ ಸೋತ ಇಬ್ಬರು ಅನರ್ಹ ಶಾಸಕರು ಇದೀಗ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಮತ್ತು ಆಡಳಿತಾರೂಢ ಪಕ್ಷಕ್ಕೆ ನುಂಗಲಾರದ ಬಿಸಿ ತುಪ್ಪವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಎಂಟಿಬಿ ನಾಗರಾಜ್ ಅವರ ಮನವೊಲಿಸಿದ ಸಿಎಂ ಬಿಎಸ್​ವೈ ಅವರು, ಸಚಿವ ಸ್ಥಾನದ ಬದಲು ಪಕ್ಷದಲ್ಲಿ ಗೌರವಯುತ ಸ್ಥಾನ ನೀಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಎಂಟಿಬಿ ನಾಗರಾಜ್ ಸಿಟ್ಟು ಶಮನವಾಗಿದೆ ಎಂದು ಹೇಳಲಾಗ್ತಿದೆ.

ಸಿಎಂ ಯಡಿಯೂರಪ್ಪ ಮಾಜಿ ಸಚಿವ ಎಂಟಿಬಿ ನಾಗರಾಜ್‌ಗೆ ಕೊಟ್ಟ ಆ ಭರವಸೆ ಏನು?

ಈ ಕುರಿತು ಮಾತನಾಡಿದ ಎಂಟಿಬಿ ನಾಗರಾಜ್, ನಿನ್ನೆ ಮುಖ್ಯಮಂತ್ರಿಯವರ ಜೊತೆ 35 ನಿಮಿಷಗಳ ಕಾಲ ಚರ್ಚೆ ಮಾಡಿದ್ದೇನೆ. ಸಂಪುಟ ವಿಸ್ತರಣೆ ಬಳಿಕ ಉನ್ನತ ಸ್ಥಾನಮಾನ ನೀಡಲಾಗುತ್ತೆ. ಕೆಲ ಕಾಲ ಕಾಯಿರಿ ಎಂದು ಭರವಸೆ ನೀಡಿದ್ದಾರೆ ಎಂದರು. ಮೇ ಅಥವಾ ಜೂನ್ ತಿಂಗಳಲ್ಲಿ ಏಳು ಎಂಎಲ್​​ಸಿ ಸ್ಥಾನಗಳು ತೆರವಾಗಲಿವೆ. ಆಗ ಸೋತ ನನಗೂ ಮತ್ತು ಹೆಚ್​. ವಿಶ್ವನಾಥ್ ಅವರಿಗೂ ಸ್ಥಾನ ನೀಡಿ ಮಂತ್ರಿ ಮಾಡೋದಾಗಿ ಸಿಎಂ ಭರವಸೆ ನೀಡಿದ್ದಾರೆ. ಆರ್​.ಶಂಕರ್ ಸೇರಿ ನಮ್ಮಿಬ್ಬರಿಗೂ ಮೇ ಅಥವಾ ಜೂನ್​​ನಲ್ಲಿ ಸ್ಥಾನಮಾನ ನೀಡಲಿದ್ದಾರೆ‌ ಎಂದರು.

ಈಗ ಗೆದ್ದ 10 ಜನ ಶಾಸಕರು ಮತ್ತು ಬಿಜೆಪಿಯ ಮೂವರು ಶಾಸಕರನ್ನು ಮಂತ್ರಿ ಮಾಡಲಿದ್ದಾರೆ‌. ಯಡಿಯೂರಪ್ಪ ನಮ್ಮ ನಾಯಕರು. ನಾವು ಅವರನ್ನು ನಂಬಿ ರಾಜೀನಾಮೆ ನೀಡಿ ಬಂದಿದ್ದೇವೆ. ಅವರು ಮಾತು ನೀಡಿದ್ದಾರೆ, ಅದರಂತೆ ನಡೆದುಕೊಳ್ಳಲಿದ್ದಾರೆ. ನಮಗೆ ಬಿಎಸ್​ವೈ ಮೇಲೆ ಯಾವುದೇ ಅನುಮಾನವಿಲ್ಲ. ಈವರೆಗೂ ನಮ್ಮ ಕೆಲಸಗಳನ್ನು ಮಾಡಿ ಕೊಟ್ಟಿದ್ದಾರೆ. ಇದೊಂದು ಕೆಲಸ ಬಾಕಿ ಇದ್ದು, ಅದು ಕೂಡ ಶೀಘ್ರದಲ್ಲಿ ಆಗಲಿದೆ ಎಂದರು.

Intro:ಹೊಸಕೋಟೆ:

ಸಿಎಂ ಭರವಸೆಗೆ ತಣ್ಣಗಾದ ಎಂಟಿಬಿ‌ ನಾಗರಾಜ್.

ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ ಬಿಜೆಪಿಗೆ ಬಂದು ಉಪಚುನಾವಣೆಯಲ್ಲಿ ಸೋತ ಇಬ್ಬರು ಅನರ್ಹ ಶಾಸಕರು ಇದೀಗ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪಗೆ ಮತ್ತು ಆಡಳಿತಾರೂಢ ಪಕ್ಷಕ್ಕೆ ನುಂಗಲಾರದ ತುತ್ತಾಗಿದ್ದರು ಈ ಹಿನ್ನೆಲೆಯಲ್ಲಿ ಎಂಟಿಬಿ ಮನವೊಲಿಸಿದ ಸಿಎಂ ಸಚಿವ ಸ್ಥಾನ ಬದಲು ಪಕ್ಷದಲ್ಲಿ ಗೌರವಯುತ ಸ್ಥಾನ ನೀಡುವ ಭರವಸೆ ನೀಡಿದ್ದಾರೆ ಎಂದರು.ಇದರಿಂದಾಗಿ ಎಂಟಿಬಿ ನಾಗರಾಜ್ ಸಿಟ್ಟು ಶಮನವಾಗಿದೆ ಎನ್ನಲಾಗಿದೆ.

Body:ಇಂದು ಹೊಸಕೋಟೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಎಂಟಿಬಿ ನಾಗರಜ್,ನೆನ್ನೆ ಸಿಎಂ ಯಡಿಯೂರಪ್ಪ ಜೊತೆ 35 ನಿಮಿಷಗಳ ಕಾಲ ಚರ್ಚೆ ಮಾಡಿದ್ದೇನೆ.ಸಂಪುಟ ವಿಸ್ತರಣೆ ಬಳಿಕ ಉನ್ನತ ಸ್ಥಾನಮಾನ ನೀಡಲಾಗುವುದು ಕೆಲಕಾಲ ಕಾಯಿರಿ ಎಂದು ಸಿಎಂ ಭರವಸೆ ನೀಡಿದ್ದಾರೆ. Conclusion:
ಮೇ ಜೂನ್ ನಲ್ಲಿ 7 ಎಂಎಲ್ ಸಿ ಸ್ಥಾನಗಳು ತರವಾಗಲಿವೆ ಆಗ ಸೋತ ನಾನಗೂ ಮತ್ತು ವಿಶ್ಚನಾಥ್ ಗೂ ಸ್ಥಾನ ನೀಡಿ ಮಂತ್ರಿ ಮಾಡೋದಾಗಿ ಸಿಎಂ ಭರವಸೆ ನೀಡಿದ್ದಾರೆ.ಶಂಕರ್ ಸೇರಿದಂತೆ ನಮ್ಮ ಇಬ್ಬರಿಗೂ ಮೇ ಅಥವ ಜೂನ್ ನಲ್ಲಿ ನಮಗೆ ಸ್ಥಾನಮಾನ ನೀಡಲಿದ್ದಾರೆ‌ ಎಂದರು.
ಈಗ ಗೆದ್ದ 10 ಜನ ಶಾಸಕರು ಮತ್ತು ಬಿಜೆಪಿಯ ಮೂವರು ಶಾಸಕರನ್ನ ಮಂತ್ರಿ ಮಾಡಲಿದ್ದಾರೆ‌.
ಯಡಿಯೂರಪ್ಪ ನಮ್ಮ ನಾಯಕರು ನಾವು ಅವರನ್ನು ನಂಬಿ ರಾಜೀನಾಮೆ ನೀಡಿ ಬಂದಿದ್ದೆವೆ. ಸಿಎಂ ಮಾತು ನೀಡಿದ್ದಾರೆ ಅದರಂತೆ ನಡೆದುಕೊಳ್ಳಲಿದ್ದಾರೆ. ನಮಗೆ ಸಿಎಂ ಮೇಲೆ ಯಾವುದೇ ಅನುಮಾನ ಇಲ್ಲ.ಇದುವರೆಗೂ ನಮ್ಮ ಕೆಲಸಗಳನ್ನು ಮಾಡಿ ಕೊಟ್ಟಿದ್ದಾರೆ. ಇದೊಂದು ಕೆಲಸ ಬಾಕಿ ಇದೆ, ಅದು ಕೂಡ ಶೀಘ್ರದಲ್ಲಿ ಆಗಲಿದೆ ಎಂದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.