ETV Bharat / state

ಎಂಟಿಬಿ ನಾಗರಾಜ್​​ ಸಂಧಾನ ಯತ್ನ ಸಿದ್ದರಾಮಯ್ಯ ನಿವಾಸಕ್ಕೆ ಸ್ಥಳಾಂತರ!

ಎಂಟಿಬಿ ನಿವಾಸದಲ್ಲಿ ಸಚಿವ ಡಿ.ಕೆ.ಶಿವಕುಮಾರ್, ಡಿಸಿಎಂ ಡಾ. ಜಿ.ಪರಮೇಶ್ವರ್ ಅವರು ನಾಲ್ಕು ಗಂಟೆಗೂ ಹೆಚ್ಚು ಕಾಲ ಮನವೊಲಿಕೆಗೆ ಪ್ರಯತ್ನಿಸಿ, ಇದೀಗ ಅವರನ್ನು ಸಿದ್ದರಾಮಯ್ಯ ನಿವಾಸಕ್ಕೆ ಕರೆದುಕೊಂಡು ಬಂದಿದ್ದು ಮನವೊಲಿಸುವ ಕಾರ್ಯ ಮುಂದುವರೆದಿದೆ.

ಎಂಟಿಬಿ ನಾಗರಾಜ್ ಸಂಧಾನ ಯತ್ನ ಸಿದ್ದರಾಮಯ್ಯ ನಿವಾಸಕ್ಕೆ ಸ್ಥಳಾಂತರ
author img

By

Published : Jul 13, 2019, 1:48 PM IST

ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಂಟಿಬಿ ನಾಗರಾಜ್ ಮನವೊಲಿಸುವ ಯತ್ನ ಮತ್ತಷ್ಟು ಮುಂದುವರೆದಿದ್ದು, ಎಂಟಿಬಿ ಅವರನ್ನು ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸ ಕಾವೇರಿಗೆ ಕರೆದುಕೊಂಡು ಬರಲಾಗಿದೆ.

ಇಂದು ಬೆಳಿಗ್ಗೆ ಎಂಟಿಬಿ ನಿವಾಸದಲ್ಲಿ ಸಚಿವ ಡಿ.ಕೆ.ಶಿವಕುಮಾರ್, ಡಿಸಿಎಂ ಡಾ. ಜಿ.ಪರಮೇಶ್ವರ್ ಅವರು ನಾಲ್ಕು ಗಂಟೆಗೂ ಹೆಚ್ಚು ಕಾಲ ಮನವೊಲಿಕೆಗೆ ಪ್ರಯತ್ನಿಸಿ, ಇದೀಗ ಅವರನ್ನು ಸಿದ್ದರಾಮಯ್ಯ ನಿವಾಸಕ್ಕೆ ಕರೆದುಕೊಂಡು ಬಂದಿದ್ದು ಮನವೊಲಿಸುವ ಕಾರ್ಯ ಮುಂದುವರೆದಿದೆ.

ಪರಮೇಶ್ವರ್, ಡಿಕೆಶಿ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಒಟ್ಟಾಗಿ ಎಂಟಿಬಿ ನಾಗರಾಜ್ ಅವರನ್ನು ಸಿದ್ದರಾಮಯ್ಯ ನಿವಾಸಕ್ಕೆ ಕರೆದುಕೊಂಡು ಬಂದಿದ್ದು, ಇನ್ನೂ ಕೆಲಕಾಲ ಚರ್ಚಿಸಿ ಮನವೊಲಿಸುವ ಪ್ರಯತ್ನ ನಡೆಯಲಿದೆ.

ಎಂಟಿಬಿ ನಾಗರಾಜ್ ಸಂಧಾನ ಯತ್ನ ಸಿದ್ದರಾಮಯ್ಯ ನಿವಾಸಕ್ಕೆ ಸ್ಥಳಾಂತರ

ಎಂಟಿಬಿ ತಮ್ಮ ನಿವಾಸದಲ್ಲಿ ಇರುವ ಸಂದರ್ಭದಲ್ಲಿ ಸಿದ್ದರಾಮಯ್ಯ ದೂರವಾಣಿ ಮೂಲಕ ಕರೆ ಮಾಡಿ ಅರ್ಧ ಗಂಟೆಗೂ ಹೆಚ್ಚು ಕಾಲ ಸಮಾಲೋಚಿಸಿದ್ದಾರೆ. ಇದೀಗ ಅದರ ಮುಂದುವರಿದ ಭಾಗವಾಗಿ ಮನೆಯಲ್ಲಿ ಚರ್ಚಿಸುತ್ತಿದ್ದಾರೆ. ನಾಗರಾಜ್ ಅವರೊಂದಿಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಚಿಕ್ಕಬಳ್ಳಾಪುರ ಶಾಸಕ ಡಾ. ಕೆ.ಸುಧಾಕರ್ ಅವರನ್ನು ಕೂಡ ಮನವೊಲಿಸುವ ಯತ್ನ ಆರಂಭವಾಗಲಿದ್ದು, ಅವರನ್ನು ಕೂಡ ಸಿದ್ದರಾಮಯ್ಯ ನಿವಾಸಕ್ಕೆ ಕರೆತರುವ ಕಾರ್ಯ ಆಗಲಿದೆ. ಈ ನಿಟ್ಟಿನಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಕಾರ್ಯಪ್ರವೃತ್ತರಾಗಿದ್ದಾರೆ.

ಇತ್ತ ಮಾಧ್ಯಮದೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗೂಂಡೂರಾವ್, ಎಂಟಿಬಿ ಈಗ ಸಿದ್ದರಾಮಯ್ಯ ‌ಅವರನ್ನು ಭೇಟಿ ಮಾಡಿದ್ದಾರೆ. ಸುಧಾಕರ್ ಅವರು ಸಿದ್ದರಾಮಯ್ಯರನ್ನು‌ ಭೇಟಿ ಮಾಡ್ತಾರೆ. ವಿಶ್ವಾಸಮತವನ್ನು ನಾವು ಸಾಬೀತು‌ಪಡಿಸುತ್ತೇವೆ ಎಂದರು.

ರೆಸಾರ್ಟ್​ನಲ್ಲಿ ಇರಬೇಕು ಎಂಬುದು ನಮ್ಮ ಆಸೆ ಅಲ್ಲ. ಆದರೆ ಬಿಜೆಪಿಯವರು ನಮ್ಮ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡ್ತಾನೆ ಇದಾರೆ. ಹಾಗಾಗಿ ನಮ್ಮ ಶಾಸಕರು‌ ಒಂದೇ ಕಡೆ ಇರಲಿ ಎಂದು ರೆಸಾರ್ಟ್​ನಲ್ಲಿದ್ದೇವೆ ಎಂದರು.

Intro:newsBody:ಎಂ ಟಿ ಬಿ ನಾಗರಾಜ್ ಸಂಧಾನ ಯತ್ನ ಸಿದ್ದರಾಮಯ್ಯ ನಿವಾಸಕ್ಕೆ ಸ್ಥಳಾಂತರ

ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಂಟಿಬಿ ನಾಗರಾಜ್ ಮನವೊಲಿಸುವ ಯತ್ನ ಮತ್ತಷ್ಟು ಮುಂದುವರಿದಿದ್ದು ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸ ಕಾವೇರಿಗೆ ಕರೆದುಕೊಂಡು ಬರಲಾಗಿದೆ.
ಇಂದು ಬೆಳಿಗ್ಗೆ ಎಂಟಿಬಿ ನಿವಾಸದಲ್ಲಿ ಸಚಿವ ಡಿಕೆ ಶಿವಕುಮಾರ್ ಡಿಸಿಎಂ ಡಾ ಜಿ ಪರಮೇಶ್ವರ್ ಅವರು ನಾಲ್ಕು ಗಂಟೆಗೂ ಹೆಚ್ಚು ಕಾಲ ಮನವೊಲಿಕೆಗೆ ಪ್ರಯತ್ನಿಸಿ ಇದೀಗ ಅವರನ್ನು ಸಿದ್ದರಾಮಯ್ಯ ನಿವಾಸಕ್ಕೆ ಕರೆದುಕೊಂಡು ಬಂದಿದ್ದು ಮನವೊಲಿಸುವ ಕಾರ್ಯ ಮುಂದುವರಿದಿದೆ.
ಪರಮೇಶ್ವರ್ ಡಿಕೆಶಿ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಒಟ್ಟಾಗಿ ಎಂಟಿಬಿ ನಾಗರಾಜ್ ಅವರನ್ನು ಸಿದ್ದರಾಮಯ್ಯ ನಿವಾಸಕ್ಕೆ ಕರೆದುಕೊಂಡು ಬಂದಿದ್ದು, ಇನ್ನೂ ಕೆಲಕಾಲ ಚರ್ಚಿಸಿ ಮನವೊಲಿಸುವ ಪ್ರಯತ್ನ ಮುಂದುವರಿಸುವ ಕಾರ್ಯ ಆಗಲಿದೆ.
ಎಂಟಿಬಿ ತಮ್ಮ ನಿವಾಸದಲ್ಲಿ ಇರುವ ಸಂದರ್ಭದಲ್ಲಿ ಸಿದ್ದರಾಮಯ್ಯ ದೂರವಾಣಿ ಮೂಲಕ ಕರೆ ಮಾಡಿ ಅರ್ಧಗಂಟೆಗೂ ಹೆಚ್ಚು ಕಾಲ ಸಮಾಲೋಚಿಸಿ ದ್ದಾರೆ. ಇದೀಗ ಅದರ ಮುಂದುವರಿದ ಭಾಗವಾಗಿ ಮನೆಯಲ್ಲಿ ಚರ್ಚಿಸುತ್ತಿದ್ದಾರೆ.
ನಾಗರಾಜ್ ಅವರೊಂದಿಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಚಿಕ್ಕಬಳ್ಳಾಪುರ ಶಾಸಕ ಡಾ ಕೆ ಸುಧಾಕರ್ ಅವರನ್ನು ಕೂಡ ಮನವೊಲಿಸುವ ಯತ್ನ ಆರಂಭವಾಗಲಿದ್ದು ಅವರನ್ನು ಕೂಡ ಸಿದ್ದರಾಮಯ್ಯ ನಿವಾಸಕ್ಕೆ ಕರೆತರುವ ಕಾರ್ಯ ಆಗಲಿದೆ. ಈ ನಿಟ್ಟಿನಲ್ಲಿ ಕೆಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಕಾರ್ಯಪ್ರವೃತ್ತರಾಗಿದ್ದಾರೆ.
ರೆಸಾರ್ಟ್ನಲ್ಲಿ ಇರಬೇಕು ಎಂಬುದು ನಮ್ಮ ಆಸೆ ಅಲ್ಲ
ಸಿದ್ದರಾಮಯ್ಯ ನಿವಾಸ ಮುಂಭಾಗ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗೂಂಡೂರಾವ್, 3 ಪಕ್ಷಗಳ‌ ರೇಸಾರ್ಟ್ ವಾಸ್ತವ್ಯ ಹೂಡಿದ್ದಾರೆ. ರೇಸಾರ್ಟ್ ಲಿ ಇರ್ಬೇಕು ಅಂತಾ ನಮಗೆ ಎನಿಲ್ಲಾ. ಬಿಜೆಪಿಯವರು ಸೆಳೆಯುವಂತಹ ಪ್ರಯತ್ನ‌ ಮಾಡ್ತಾನೆ ಇದಾರೆ. ಹಾಗಾಗಿ ನಮ್ಮ‌ ಶಾಸಕರು‌ ಒಂದೆ ಕಡೆ ಇರಲಿ ಎಂದು ರೇಸಾರ್ಟ್ ನಲ್ಲಿದ್ದೇವೆ. ಎಂಟಿಬಿ ಈಗ ಸಿದ್ದರಾಮಯ್ಯ ‌ಸಾಹೇಬ್ರನ್ನಾ ಭೇಟಿ ಮಾಡಿದ್ದಾರೆ. ಸುಧಾಕರ್ ಅವ್ರೂ‌ ಕೂಡ ಸಿದ್ದರಾಮಯ್ಯ ಅವ್ರನ್ನಾ‌ ಭೇಟಿ ಮಾಡ್ತಾರೆ. ವಿಶ್ವಾಸಮತ ನಾವು ಸಾಬೀತು‌ ಪಡಿಸುತ್ತೇವೆ. ಬಿಜೆಪಿ ಅವ್ರಿಗೆ ಅವಿಶ್ವಾಸಮತ ಮಂಡಿಸೋದಕ್ಕೆ‌ ಸಾಧ್ಯವಾಗಿಲ್ಲಾ. ನಾವು ವಿಶ್ವಾಸ ಮತ ಸಾಬೀತು‌ ಪಡಿಸುತ್ತೇವೆ ಎಂದರು.
ಎಂಟಿಬಿ ಸಿದ್ದರಾಮಯ್ಯ ಸಿಎಂ ಆಗಬೇಕು ಅನ್ನುವ ವಿಚಾರ, ಅದೆಲ್ಲಾ ಊಹಾಪೋಹ. ನಾವು ವಿಶ್ವಾಸಮತ ಸಾಬೀತು‌ಪಡಿಸುತ್ತೇವೆ. ಸ್ಪೀಕರ್ ಸೋಮವಾರ ದಿನಾಂಕ‌ ನಿಗದಿ ಪಡಿಸಲಿದ್ದಾರೆ ಎಂದರು.
ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಜತೆ ಕೃಷ್ಣ ಭೈರೇಗೌಡ, ಜಮಿರ್ ಅಹಮದ್ ಇದ್ದರು.Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.