ETV Bharat / state

ಬಿಜೆಪಿಯಲ್ಲಿ ಪರಿಷತ್ ಟಿಕೆಟ್ ಲಾಬಿ ಆರಂಭ: ಸಿಎಂ ಭೇಟಿ ಮಾಡಿದ ಎಂಟಿಬಿ ನಾಗರಾಜ್​

ವಿಧಾನ ಪರಿಷತ್ ಚುನಾವಣಾ ದಿನಾಂಕ ಪ್ರಕಟಗೊಳ್ಳುತ್ತಿದ್ದಂತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿಗೆ ಬಂದವರಿಂದ ಮತ್ತೆ ಲಾಬಿ ಶುರುವಾಗಿದೆ. ಇಂದು ಬೆಳಗ್ಗೆಯೇ ಸಿಎಂ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ್ದ ಮಾಜಿ ಶಾಸಕ ಎಂಟಿಬಿ ನಾಗರಾಜ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದರು.

MTB Nagaraj
ಎಂಟಿಬಿ ನಾಗರಾಜ್
author img

By

Published : Jun 10, 2020, 1:05 PM IST

ಬೆಂಗಳೂರು: ವಿಧಾನಪರಿಷತ್​ನ ಏಳು ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳಿಂದ ಲಾಬಿ ಆರಂಭವಾಗಿದೆ. ಆಕಾಂಕ್ಷಿಗಳು ಟಿಕೆಟ್​ಗಾಗಿ ಸಿಎಂ ಮುಂದೆ ಬೇಡಿಕೆ ಸಲ್ಲಿಸುತ್ತಿದ್ದಾರೆ. ಇದರಲ್ಲಿ ಪ್ರಮುಖವಾಗಿ ವಲಸಿಗರ ಒತ್ತಡವೇ ಹೆಚ್ಚಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಎಂಟಿಬಿ ನಾಗರಾಜ್​

ವಿಧಾನ ಪರಿಷತ್ ಚುನಾವಣಾ ದಿನಾಂಕ ಪ್ರಕಟಗೊಳ್ಳುತ್ತಿದ್ದಂತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿಗೆ ಬಂದವರಿಂದ ಮತ್ತೆ ಲಾಬಿ ಶುರುವಾಗಿದೆ. ಬೆಳಗ್ಗೆಯೇ ಸಿಎಂ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ್ದ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಎಂಟಿಬಿ ನಾಗರಾಜ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾದರು. ರಾಜಕೀಯ ಭವಿಷ್ಯದ ಕುರಿತು ಮಾತುಕತೆ ನಡೆಸಿದರು. ಬಿಜೆಪಿಗೆ ನಾಲ್ಕು ಸ್ಥಾನಗಳು ಪರಿಷತ್ ಚುನಾವಣೆಯಲ್ಲಿ ಸಿಗಲಿದ್ದು, ತಮಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.

ಸರ್ಕಾರ ರಚನೆಯಲ್ಲಿ ಮುಖ್ಯಪಾತ್ರ ವಹಿಸಿದ ನಮ್ಮ ಕಡೆಗಣನೆ ಸಲ್ಲದು, ನನ್ನ ಜೊತೆ ವಿಶ್ವನಾಥ್ ಕೊಡುಗೆ ಸಹ ಇದೆ. ನಾವಿಬ್ಬರೂ ಚುನಾವಣೆಯಲ್ಲಿ ಬೇರೆ ಬೇರೆ ಕಾರಣಗಳಿಂದ ಸೋತಿರಬಹುದು. ಆದರೆ ಪರಿಷತ್ ಟಿಕೆಟ್ ನೀಡಿ ಸಚಿವ ಸ್ಥಾನ ನೀಡಬೇಕು ಎಂದು ಮನವಿ ಮಾಡಿ ಸಿಎಂ ಕಚೇರಿಯಿಂದ ನಿರ್ಗಮಿಸಿದರು.

ಸಿಎಂ ಭೇಟಿ ನಂತರ ಮಾತನಾಡಿದ ಎಂಟಿಬಿ ನಾಗರಾಜ್, ಪರಿಷತ್ ಸ್ಥಾನದ ಟಿಕೆಟ್​ಗಾಗಿ ಬಂದಿರಲಿಲ್ಲ, ಕ್ಷೇತ್ರದ ಅಭಿವೃದ್ಧಿ ವಿಚಾರಗಳ ಸಂಬಂಧ ಸಿಎಂ ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ ಎಂದರು. ಯಡಿಯೂರಪ್ಪ ಹಾಗೂ ಪಕ್ಷದ ಹೈಕಮಾಂಡ್​ಗೆ ಎಲ್ಲವೂ ಗೊತ್ತಿದೆ. ಈ ಸಂಬಂಧ ಮಾತುಕತೆ, ಚರ್ಚೆ ಎಲ್ಲವೂ ಮುಗಿದಿದೆ, ಇನ್ನೇನಿದ್ದರೂ ಎಲ್ಲವನ್ನೂ ಯಡಿಯೂರಪ್ಪ ಹಾಗೂ ಪಕ್ಷದ ಹೈಕಮಾಂಡ್​ಗೆ ಬಿಟ್ಟಿದ್ದೇವೆ. ಅವರು ಯಾವ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ನಮ್ಮ ಸಹಮತ ಇದೆ ಎಂದರು. ಸಚಿವರಾಗಲು ಕಾಲಾವಕಾಶ ಕೂಡಿ ಬರಬೇಕು. ಅವಕಾಶಕ್ಕಾಗಿ ಕಾದು ನೋಡುತ್ತೇನೆ ಎಂದು ಸಚಿವ ಸ್ಥಾನದ ಅಪೇಕ್ಷೆಯನ್ನು ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.