ETV Bharat / state

ಮಿಸೆಸ್ ಇಂಡಿಯಾ ಕರ್ನಾಟಕ: ರ್‍ಯಾಂಪ್ ಮೇಲೆ ವಿವಾಹಿತ ಮಹಿಳೆಯರ ನಡಿಗೆ - Bangalore latest update news

ವಿವಾಹಿತ ಮಹಿಳೆಯರಿಗಾಗಿಯೇ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಪ್ರತಿಭಾ ಸೌನ್​ಶಿಮನ್ ನೇತೃತ್ವದಲ್ಲಿ ಮಿಸೆಸ್ ಇಂಡಿಯಾ ಕರ್ನಾಟಕ ಪೆಸೆಂಟ್ 2020 -21 ಆಡಿಷನ್​ ಆಯೋಜಿಸಲಾಗಿತ್ತು.

Mrs. India Karnataka Peasant Audition
ಮಿಸೆಸ್ ಇಂಡಿಯಾ ಕರ್ನಾಟಕ ಪೆಸೆಂಟ್ ಆಡಿಷನ್
author img

By

Published : Apr 6, 2021, 10:35 AM IST

ಬೆಂಗಳೂರು: ವಿವಾಹಕ್ಕೂ ಮೊದಲು ಯುವತಿಯರು ಬ್ಯೂಟಿ ಪೆಸೆಂಟ್​​​​ನಂತಹ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಾರೆ. ಆದ್ರೆ ಮದುವೆ ನಂತರ ಸಂಸಾರ, ಮನೆ- ಮಕ್ಕಳು ಅಂತ ಅವರು ಸಮಯ ಕಳೆಯುತ್ತಾರೆ. ಕೆಲವರು ವಿವಾಹದ ನಂತರವೂ ಏನಾದ್ರೂ ಸಾಧಿಸಬೇಕು ಅಂದುಕೊಂಡರೂ ಸಮಯದ ಅಭಾವದಿಂದ ಉತ್ಸಾಹ ಕಳೆದುಕೊಳ್ಳುತ್ತಾರೆ. ಹೀಗಾಗಿ ಸಾಧಿಸುವ ಛಲ ಇರುವ ವಿವಾಹಿತ ಮಹಿಳೆಯರಿಗಾಗಿಯೇ ನಗರದ ಖಾಸಗಿ ಹೋಟೆಲ್​ನಲ್ಲಿ ಪ್ರತಿಭಾ ಸೌನ್​ಶಿಮನ್ ನೇತೃತ್ವದಲ್ಲಿ ಮಿಸೆಸ್ ಇಂಡಿಯಾ ಕರ್ನಾಟಕ ಪೆಸೆಂಟ್ 2020 -21 ಆಡಿಷನ್​ ಆಯೋಜಿಸಲಾಗಿತ್ತು.

ಮಿಸೆಸ್ ಇಂಡಿಯಾ ಕರ್ನಾಟಕ ಪೆಸೆಂಟ್ ಆಡಿಷನ್

ಈ ಆಡಿಷನ್​ನಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಮಹಿಳೆಯರು ಸ್ಪರ್ಧಿಸಿದ್ದರು. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಬಂದ ಮಹಿಳೆಯರಿಗೆ ಕೆಂಪು ಬಣ್ಣದ ಉಡುಪು ಧರಿಸಬೇಕೆಂದು ಥೀಮ್ ನೀಡಲಾಗಿತ್ತು. ಅದರಂತೆ ಮಹಿಳೆಯರು ಆಕರ್ಷಕ ಕೆಂಪು ಬಣ್ಣದ ಉಡುಪುಗಳನ್ನು ಧರಿಸಿ ರ್ಯಾಂಪ್ ಮೇಲೆ‌ ಕ್ಯಾಟ್ ವಾಕ್ ಮಾಡಿದರು.

ಆಡಿಷನ್​​ನಲ್ಲಿ ಎಲ್ಲಾ ರೀತಿಯ ಕೋವಿಡ್ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಈ ಆಡಿಷನ್​ನಲ್ಲಿ ಆಯ್ಕೆಯಾದವರು ಮುಂದಿನ ಹಂತಕ್ಕೆ ಹೋಗಲಿದ್ದಾರೆ. ಮಿಸೆಸ್ ಇಂಡಿಯಾಗೆ ಸ್ಪರ್ಧೆಗೆ ಭಾಗವಹಿಸಲು ಸತತ ಮೂರು ದಿನಗಳ ಕಾಲ ಎಲ್ಲಾ ರೀತಿ ತಯಾರಿ ನಡೆಸಲಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.