ETV Bharat / state

ಬೆಡ್ ಬ್ಲಾಕಿಂಗ್​​ನಲ್ಲಿ ಶಾಸಕ ಸತೀಶ್ ರೆಡ್ಡಿಯನ್ನ ಟಾರ್ಗೆಟ್ ಮಾಡಿದ್ರು : ಸಂಸದ ತೇಜಸ್ವಿ ಸೂರ್ಯ

ಸರ್ಕಾರಕ್ಕೆ ಕೆಟ್ಟ ಹೆಸರು ತರುವ ನಿಟ್ಟಿನಲ್ಲಿ ಸತೀಶ್ ರೆಡ್ಡಿ ಮತ್ತು ರವಿ ಸುಬ್ರಮಣ್ಯ ಅವರನ್ನ ಟಾರ್ಗೆಟ್ ಮಾಡಲಾಯಿತು. ಮೂರ್ನಾಲ್ಕು ಬಾರಿ ಶಾಸಕರಾಗಿ ರಾಜಕೀಯದಲ್ಲಿ ಅಸ್ತಿತ್ವ ಬೆಳೆಸಿಕೊಂಡವರು. ಹೀಗಾಗಿ, ವಿರೋಧಿಗಳ ಅಪಪ್ರಚಾರದಿಂದ ಅವರನ್ನ ಅಲುಗಾಡಿಸಲು ಸಾಧ್ಯವಿಲ್ಲ..

mp-tejaswi-surya
ಸಂಸದ ತೇಜಸ್ವಿ ಸೂರ್ಯ
author img

By

Published : Jun 25, 2021, 8:14 PM IST

ಬೆಂಗಳೂರು : ಬೆಡ್ ಬ್ಲಾಕಿಂಗ್ ಹಗರಣ ಬಯಲು ಮಾಡಿದ್ದು ಸಾಮಾನ್ಯ ಜನರಿಗೆ ನೇರವಾಗಿ ಸೌಲಭ್ಯ ದೊರೆಯಲಿ ಎಂದು. ಆದರೆ, ಶಾಸಕ ಸತೀಶ್ ರೆಡ್ಡಿ ಮೇಲೆ ವಿನಾಕಾರಣ ಆರೋಪ ಮಾಡುವ ಹುನ್ನಾರ ಮುಂದುವರೆದಿದ್ದು, ಈ ಆರೋಪ ಸಲ್ಲದು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ಬನ್ನೇರುಘಟ್ಟ ರಸ್ತೆಯ ಅರಿಕೆರೆ ವಾರ್ಡ್ ನಂ.193ರ ಹುಳಿಮಾವು ಜನತೆಗೆ ದಿನಸಿ ಕಿಟ್ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.

ಬೆಡ್ ಬ್ಲಾಕಿಂಗ್​​ನಲ್ಲಿ ಶಾಸಕ ಸತೀಶ್ ರೆಡ್ಡಿಯನ್ನ ಟಾರ್ಗೆಟ್ ಮಾಡಿದ್ರು: ಸಂಸದ ತೇಜಸ್ವಿ ಸೂರ್ಯ

ಬೆಡ್ ಬ್ಲಾಕಿಂಗ್ ಹೊರತೆಗೆಯುವ ಉದ್ದೇಶದಿಂದ ನಮ್ಮ ಜೊತೆ ಸತೀಶ್ ರೆಡ್ಡಿ ಮತ್ತಿಬ್ಬರು ಶಾಸಕರು ನಮ್ಮ ಜೊತೆ ಬಂದರು. ಆದರೆ, ಸತೀಶ್ ರೆಡ್ಡಿಯ ಜನಪ್ರಿಯತೆ ಸಹಿಸದೆ ಹೀಗೆ ಹುರುಳಿಲ್ಲದ ಆರೋಪದ ನೆಪ ಮಾಡಿ ವ್ಯಕ್ತಿತ್ವ ಕುಗ್ಗಿಸುವ ಕೆಲಸ ಮಾಡಲಾಗುತ್ತಿದೆ ಎಂದರು. ಸರ್ಕಾರಕ್ಕೆ ಕೆಟ್ಟ ಹೆಸರು ತರುವ ನಿಟ್ಟಿನಲ್ಲಿ ಸತೀಶ್ ರೆಡ್ಡಿ ಮತ್ತು ರವಿ ಸುಬ್ರಮಣ್ಯ ಅವರನ್ನ ಟಾರ್ಗೆಟ್ ಮಾಡಲಾಯಿತು ಎಂದರು.

ಇದನ್ನೂ ಓದಿ: ತುರ್ತುಪರಿಸ್ಥಿತಿ ಹೇರಿದ್ದನ್ನು ವಿರೋಧಿಸಿ ಬಿಜೆಪಿ ಕರಾಳ ದಿನ ಆಚರಣೆ : ಜೈಲುವಾಸ ನೆನೆದ ಸಚಿವ ಅಶೋಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.