ಬೆಂಗಳೂರು: ಇತ್ತೀಚಿಗೆ ಹುತಾತ್ಮರಾದ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅವರ ಹೆಸರನ್ನು ಆನೇಕಲ್ ತಾಲೂಕಿನ ಜಿಗಣಿ ಪ್ರದೇಶದ ಮುಖ್ಯರಸ್ತೆಗೆ ನಾಮಕರಣಗೊಳಿಸುವ ಮೂಲಕ ಗೌರವ ಸಲ್ಲಿಸಬೇಕು ಎಂದು ಸಿಎಂ ಮತ್ತು ಡಿಸಿಎಂ ಅವರಿಗೆ ವಿನಂತಿಸುತ್ತೇನೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
-
ಇತ್ತೀಚೆಗಷ್ಟೇ ಜಮ್ಮು-ಕಾಶ್ಮೀರದ ರಜೌರಿ ಪ್ರದೇಶದಲ್ಲಿ ಉಗ್ರಗಾಮಿಗಳೊಂದಿಗಿನ ಕದನದಲ್ಲಿ ವೀರಮರಣ ಹೊಂದಿದ ಬೆಂಗಳೂರಿನ ಕ್ಯಾಪ್ಟನ್ ಎಂ ವಿ ಪ್ರಾಂಜಲ್ ರವರ ಸಾಹಸ, ಶೌರ್ಯ, ಅಪರಿಮಿತ ದೇಶಭಕ್ತಿ ನಮ್ಮೆಲ್ಲರಿಗೂ ಮಾದರಿ. ರಾಷ್ಟ್ರಸೇವೆಗೆ ತನ್ನ ಜೀವವನ್ನೇ ಮುಡಿಪಾಗಿಟ್ಟ ಹುತಾತ್ಮ ಯೋಧ ಕ್ಯಾ. ಎಂ ವಿ ಪ್ರಾಂಜಲ್ ರವರ ಸ್ಮರಣಾರ್ಥ & ಅವರಿಗೆ… https://t.co/jyD1MGlsI7
— Tejasvi Surya (@Tejasvi_Surya) December 2, 2023 " class="align-text-top noRightClick twitterSection" data="
">ಇತ್ತೀಚೆಗಷ್ಟೇ ಜಮ್ಮು-ಕಾಶ್ಮೀರದ ರಜೌರಿ ಪ್ರದೇಶದಲ್ಲಿ ಉಗ್ರಗಾಮಿಗಳೊಂದಿಗಿನ ಕದನದಲ್ಲಿ ವೀರಮರಣ ಹೊಂದಿದ ಬೆಂಗಳೂರಿನ ಕ್ಯಾಪ್ಟನ್ ಎಂ ವಿ ಪ್ರಾಂಜಲ್ ರವರ ಸಾಹಸ, ಶೌರ್ಯ, ಅಪರಿಮಿತ ದೇಶಭಕ್ತಿ ನಮ್ಮೆಲ್ಲರಿಗೂ ಮಾದರಿ. ರಾಷ್ಟ್ರಸೇವೆಗೆ ತನ್ನ ಜೀವವನ್ನೇ ಮುಡಿಪಾಗಿಟ್ಟ ಹುತಾತ್ಮ ಯೋಧ ಕ್ಯಾ. ಎಂ ವಿ ಪ್ರಾಂಜಲ್ ರವರ ಸ್ಮರಣಾರ್ಥ & ಅವರಿಗೆ… https://t.co/jyD1MGlsI7
— Tejasvi Surya (@Tejasvi_Surya) December 2, 2023ಇತ್ತೀಚೆಗಷ್ಟೇ ಜಮ್ಮು-ಕಾಶ್ಮೀರದ ರಜೌರಿ ಪ್ರದೇಶದಲ್ಲಿ ಉಗ್ರಗಾಮಿಗಳೊಂದಿಗಿನ ಕದನದಲ್ಲಿ ವೀರಮರಣ ಹೊಂದಿದ ಬೆಂಗಳೂರಿನ ಕ್ಯಾಪ್ಟನ್ ಎಂ ವಿ ಪ್ರಾಂಜಲ್ ರವರ ಸಾಹಸ, ಶೌರ್ಯ, ಅಪರಿಮಿತ ದೇಶಭಕ್ತಿ ನಮ್ಮೆಲ್ಲರಿಗೂ ಮಾದರಿ. ರಾಷ್ಟ್ರಸೇವೆಗೆ ತನ್ನ ಜೀವವನ್ನೇ ಮುಡಿಪಾಗಿಟ್ಟ ಹುತಾತ್ಮ ಯೋಧ ಕ್ಯಾ. ಎಂ ವಿ ಪ್ರಾಂಜಲ್ ರವರ ಸ್ಮರಣಾರ್ಥ & ಅವರಿಗೆ… https://t.co/jyD1MGlsI7
— Tejasvi Surya (@Tejasvi_Surya) December 2, 2023
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಇತ್ತೀಚೆಗಷ್ಟೆ ಜಮ್ಮು- ಕಾಶ್ಮೀರದ ರಜೌರಿ ಪ್ರದೇಶದಲ್ಲಿ ಉಗ್ರಗಾಮಿಗಳೊಂದಿಗಿನ ಕದನದಲ್ಲಿ ವೀರಮರಣ ಹೊಂದಿದ ಬೆಂಗಳೂರಿನ ಕ್ಯಾಪ್ಟನ್ ಎಂ ವಿ ಪ್ರಾಂಜಲ್ ಅವರ ಸಾಹಸ, ಶೌರ್ಯ, ಅಪರಿಮಿತ ದೇಶಭಕ್ತಿ ನಮ್ಮೆಲ್ಲರಿಗೂ ಮಾದರಿ. ರಾಷ್ಟ್ರಸೇವೆಗೆ ತನ್ನ ಜೀವವನ್ನೇ ಮುಡಿಪಾಗಿಟ್ಟ ಹುತಾತ್ಮ ಯೋಧ ಕ್ಯಾ. ಎಂ ವಿ ಪ್ರಾಂಜಲ್ ಅವರ ಸ್ಮರಣಾರ್ಥ ಮತ್ತು ಅವರಿಗೆ ಗೌರವವನ್ನು ಸೂಚಿಸುವ ನಿಟ್ಟಿನಲ್ಲಿ ಆನೇಕಲ್ ತಾಲೂಕಿನ ಜಿಗಣಿ ಪ್ರದೇಶದ ಮುಖ್ಯರಸ್ತೆಗೆ, ಕ್ಯಾ.ಎಂ ವಿ ಪ್ರಾಂಜಲ್ ಹೆಸರನ್ನು ನಾಮಕರಣಗೊಳಿಸುವ ಮೂಲಕ ಗೌರವ ಸಲ್ಲಿಸಬೇಕು ಎಂದು ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಲ್ಲಿ ವಿನಂತಿಸುತ್ತೇನೆ ಎಂದಿದ್ದಾರೆ.
ಘಟನೆ ಸಂಭವಿಸಿದ ನಂತರ ಇರುವಂತಹ ಭಾವನಾತ್ಮಕ ಕಾಳಜಿ ಕೆಲ ದಿನಗಳ ನಂತರ ಇತರ ವಿಷಯಗಳ ನಡುವೆ ಮರೆಯುವ ಸಂಭವ ಹೆಚ್ಚಿಗೆ ಇರುವುದರಿಂದ, ಯುವ ಪೀಳಿಗೆಗೆ ಪ್ರಾಂಜಲ್ ಅವರಂತಹ ವೀರಯೋಧರ ಮಾದರಿ, ಸ್ಮರಣೆಯ ಅವಶ್ಯಕತೆ ಇದೆ. ಸರ್ಕಾರವು ಆನೇಕಲ್ನ ಜಿಗಣಿ ಮುಖ್ಯ ರಸ್ತೆಗೆ ಹುತಾತ್ಮ ಕ್ಯಾ ಎಂ ವಿ ಪ್ರಾಂಜಲ್ ಅವರ ಹೆಸರನ್ನು ನಾಮಕರಣಗೊಳಿಸಿ ಅವರ ಹೆಸರನ್ನು ಚಿರಸ್ಥಾಯಿಯಾಗಿಸುವಂತೆ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಶಾಲೆಗಳಿಗೆ ಬಾಂಬ್ ಬೆದರಿಕೆ ಇ- ಮೇಲ್ ಪ್ರಕರಣ: ಇಂದು ಎಂದಿನಂತೆ ಕಾರ್ಯನಿರ್ವಹಿಸುತ್ತಿರುವ ಶಾಲೆಗಳು
ಹುತಾತ್ಮ ಯೋಧನ ಕುಟುಂಬಕ್ಕೆ ₹50 ಲಕ್ಷ ಪರಿಹಾರ ಘೋಷಿಸಿದ್ದ ಸಿಎಂ: ನ. 22 ರಂದು ಜಮ್ಮು ಕಾಶ್ಮೀರದ ರಜೌರಿಯಲ್ಲಿ ಭಯೋತ್ಪಾದಕರು ಹಾಗೂ ಸೈನಿಕರ ಮಧ್ಯೆ ನಡೆದ ಗುಂಡಿನ ದಾಳಿಯಲ್ಲಿ ಯೋಧ ಕ್ಯಾಪ್ಟನ್ ಪ್ರಾಂಜಲ್ ಅವರು ಹುತಾತ್ಮರಾಗಿದ್ದರು. ಹುತಾತ್ಮರಾದ ಯೋಧ ಕ್ಯಾಪ್ಟನ್ ಪ್ರಾಂಜಲ್ ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 50 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದರು.
63ನೇ ರಾಷ್ಟ್ರೀಯ ರೈಫಲ್ಸ್ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್(28) ಮಂಗಳೂರಿನಲ್ಲಿಯೇ ಹುಟ್ಟಿ ಬಾಲ್ಯ ಕಳೆದು ಬಳಿಕ ಭಾರತೀಯ ಸೇನಾಪಡೆ ಸೇರಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಾಂಜಲ್ ಮಂಗಳೂರಿನ ಎಂಆರ್ ಪಿಎಲ್ ನಿವೃತ್ತ ಎಂಡಿ ವೆಂಕಟೇಶ್ ಹಾಗೂ ಅನುರಾಧ ದಂಪತಿಯ ಏಕೈಕ ಪುತ್ರ. ಎಂಆರ್ ಪಿಎಲ್ ಡೆಲ್ಲಿ ಸ್ಕೂಲ್‌ನಲ್ಲಿ ಎಲ್‌ಕೆಜಿಯಿಂದ 10ನೇ ತರಗತಿಯವರೆಗೆ ವಿದ್ಯಾಭ್ಯಾಸ ಪಡೆದ ಇವರು, ನಗರದ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದಿದ್ದರು. ಬಳಿಕ ಮಧ್ಯಪ್ರದೇಶದ ಮಿಲಿಟರಿ ಕಾಲೇಜ್ ಆಫ್ ಟೆಲಿಕಮ್ಯುನಿಕೇಷನ್‌ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ಮಿಲಿಟರಿಗೆ ಸೇರಿದ್ದರು.