ETV Bharat / state

ಧರ್ಮೇಗೌಡರ ಸಾವನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು: ರೇಣುಕಾಚಾರ್ಯ - ಉಪಸಭಾಪತಿ ಧರ್ಮೇಗೌಡ ಆತ್ಮಹತ್ಯೆ

ಯಾರೇ ಆಗಲಿ ಇಂತಹ ಪ್ರಯತ್ನ ಮಾಡಬಾರದು. ಸಾವಿನ ವಿಚಾರದಲ್ಲಿ ಕೀಳುಮಟ್ಟದ ರಾಜಕಾರಣ ಬೇಡ. ಅವರನ್ನು ಬಲವಂತವಾಗಿ ಬಿಜೆಪಿಯವರು ಕೂರಿಸಿಲ್ಲ. ಸಂಪ್ರದಾಯ ಹಾಳು ಮಾಡಿದ್ದು ಕಾಂಗ್ರೆಸ್​​ನವರು ಎಂದು ರೇಣುಕಾಚಾರ್ಯ ದೂರಿದರು.

mp-renukacharya-talk-about-vice-president-dharmegowda-death
ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ
author img

By

Published : Dec 29, 2020, 8:21 PM IST

ಬೆಂಗಳೂರು: ಉಪಸಭಾಪತಿ ಧರ್ಮೇಗೌಡರ ಸಾವನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದ್ದಾರೆ.

ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ

ವಿಧಾನಸೌಧದಲ್ಲಿ ಮಾತನಾಡಿದ ಅವರು, ಉಪಸಭಾಪತಿ ಧರ್ಮೇಗೌಡ ಆತ್ಮಹತ್ಯೆ ಬಗ್ಗೆ ಪ್ರತಿಕ್ರಿಯಿಸಿದರು. ಅವರು ಈ ರೀತಿ ಮಾಡಿಕೊಂಡಿದ್ದು ಸರಿಯಲ್ಲ. ಸಮಸ್ಯೆ ಇದ್ದರೆ ಕುಟುಂಬದ ಜೊತೆ ಹಂಚಿಕೊಳ್ಳಬೇಕು. ಆಗಿರುವ ಘಟನೆ ತುಂಬಾ ನೋವು ತಂದಿದ್ದು, ಅವರ ಕುಟುಂಬಕ್ಕೆ ನೋವು ತಡೆಯುವ ಶಕ್ತಿ ಸಿಗಲಿ.

ಓದಿ: ಹುಟ್ಟೂರಲ್ಲಿ ಧರ್ಮೇಗೌಡರ ಅಂತ್ಯ ಸಂಸ್ಕಾರ: ಪುತ್ರನಿಂದ ತಂದೆಯ ಚಿತೆಗೆ ಅಗ್ನಿಸ್ಪರ್ಶ

ಯಾರೇ ಆಗಲಿ ಇಂತಹ ಪ್ರಯತ್ನ ಮಾಡಬಾರದು. ಸಾವಿನ ವಿಚಾರದಲ್ಲಿ ಕೀಳುಮಟ್ಟದ ರಾಜಕಾರಣ ಬೇಡ. ಅವರನ್ನ ಬಲವಂತವಾಗಿ ಬಿಜೆಪಿಯವರು ಕೂರಿಸಿಲ್ಲ. ಸಂಪ್ರದಾಯ ಹಾಳು ಮಾಡಿದ್ದು ಕಾಂಗ್ರೆಸ್​​ನವರು ಎಂದು ದೂರಿದರು.

ಸಿದ್ದರಾಮಯ್ಯ ವಿರುದ್ಧ ಕಿಡಿ:

ಮಾಜಿ ಸಿಎಂ ಸಿದ್ದರಾಮಯ್ಯ ಬೀಫ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕ್ಷುಲ್ಲಕ ಹೇಳಿಕೆಗಳನ್ನು ಕೊಡಬಾರದು. ದನದ ಮಾಂಸ ತಿಂತೀನಿ ಅಂತಾ ಹೇಳ್ತಾರೆ. ಏನ್ ಬೇಕಾದ್ರೂ ತಿನ್ನಿ ನೀವು. ವೋಟ್ ಬ್ಯಾಂಕ್​​ಗೋಸ್ಕರ ಹಿಂದೂಗಳ ಭಾವನೆಗೆ ಧಕ್ಕೆ ತರಬೇಡಿ ಎಂದು ಕಿಡಿಕಾರಿದರು.

ಧರ್ಮಸ್ಥಳಕ್ಕೆ ಹೋಗಿ ಮೀನು ತಿಂದಿದ್ದಕ್ಕೆ ತಕ್ಕ ಪಾಠ ಕಲಿತ್ರಿ. ಹನುಮ ಹುಟ್ಟಿದ್ದು ಗೊತ್ತಾ ಅಂತಾ ಕೇಳ್ತೀರಿ. ಟಿಪ್ಪು ಯಾವಾಗ ಹುಟ್ಟಿದ್ದು ಅಂತಾ ಗೊತ್ತಿಲ್ಲದೆ ಅವರ ಜಯಂತಿ ಆಚರಿಸುತ್ತೀರಿ. ಸಿದ್ದರಾಮಯ್ಯ ಬಹುಸಂಖ್ಯಾತರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.