ETV Bharat / state

ರಾಜ್ಯದ ಕೋವಿಡ್​ ಸ್ಥಿತಿ ಅಧ್ಯಯನಕ್ಕೆ ಕನಿಷ್ಠ ಒಂದು ಸಮಿತಿಯನ್ನೂ ಕೇಂದ್ರ ಕಳಿಸಿಲ್ಲ: ಕಾಂಗ್ರೆಸ್​​ - ರಾಜ್ಯಸಭೆ ಸದಸ್ಯ ಜಿ.ಸಿ. ಚಂದ್ರಶೇಖರ್

ರಾಜ್ಯದ ಕೋವಿಡ್​ ಪರಿಸ್ಥಿತಿ ಅಧ್ಯಯನಕ್ಕೆ ಕೇಂದ್ರ ಸರ್ಕಾರ ಕನಿಷ್ಠ ಒಂದು ಸಮಿತಿಯನ್ನು ಕಳಿಸುವ ಕಾರ್ಯ ಮಾಡಿಲ್ಲ ಎಂದು ರಾಜ್ಯಸಭೆ ಸದಸ್ಯ ಜಿ.ಸಿ.ಚಂದ್ರಶೇಖರ್ ಹೇಳಿದರು.

Bangalore
ರಾಜ್ಯಸಭೆ ಸದಸ್ಯ ಜಿ.ಸಿ. ಚಂದ್ರಶೇಖರ್ ಸುದ್ದಿಗೋಷ್ಠಿ
author img

By

Published : May 20, 2021, 10:10 AM IST

ಬೆಂಗಳೂರು: ರಾಜ್ಯ ಕೋವಿಡ್ ಪ್ರಕರಣಗಳಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಇಲ್ಲಿನ ಪರಿಸ್ಥಿತಿ ಅಧ್ಯಯನಕ್ಕೆ ಕೇಂದ್ರ ಸರ್ಕಾರ ಕನಿಷ್ಠ ಒಂದು ಸಮಿತಿಯನ್ನು ಕಳಿಸುವ ಕಾರ್ಯ ಮಾಡಿಲ್ಲ ಎಂದು ರಾಜ್ಯಸಭೆ ಸದಸ್ಯ ಜಿ.ಸಿ.ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.

ರಾಜ್ಯಸಭೆ ಸದಸ್ಯ ಜಿ.ಸಿ.ಚಂದ್ರಶೇಖರ್

ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ ವಿಫಲ:

ಬೆಂಗಳೂರಿನ ಕುಡಿಯನ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸಂಸದರಾದ ಡಿ.ಕೆ.ಸುರೇಶ್, ನಾಸಿರ್ ಹುಸೇನ್, ಎಲ್.ಹನುಮಂತಯ್ಯ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ. ರಾಜ್ಯ ಕೋವಿಡ್​​ನಲ್ಲಿ ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಕೋವಿಡ್ ಪರಿಸ್ಥಿತಿ, ಸೌಲಭ್ಯಗಳಿಗಾಗಿ ಕೇಂದ್ರ ಸರ್ಕಾರ ಒಂದು ಕಮಿಟಿಯನ್ನ ಕಳಿಸಬೇಕು. ಆದರೆ ಕೇಂದ್ರ ಸರ್ಕಾರ ಚುನಾವಣೆ ಫಲಿತಾಂಶದ ನಂತರ ಆದ ಘಟನೆಯ ತನಿಖೆಗೆ ಪಶ್ಚಿಮ ಬಂಗಾಳಕ್ಕೆ ಕಮಿಟಿ ಕಳಿಸುತ್ತದೆ. ಇದು ಕೇಂದ್ರ ಸರ್ಕಾರದ ಮೊದಲ ಆದ್ಯತೆ ಎಂದರು.

ಡಿಸಿಗಳಿಗೆ ಮಾತನಾಡಲು ಬಿಟ್ಟಿಲ್ಲ:

ನಿನ್ನೆ ಪ್ರಧಾನಿ ಜಿಲ್ಲಾಧಿಕಾರಿಗಳ ಜೊತೆ ಸಂವಾದ ನಡೆಸಿದ್ದಾರೆ. ಆದರೆ ಅಲ್ಲಿ ಮಾತನಾಡಲು ಬಿಟ್ಟಿಲ್ಲ. ಕೇವಲ ಗೌರವ್ ಗುಪ್ತಾ ಅವರನ್ನ ಮಾತ್ರ ಬಿಟ್ಟಿದ್ದಾರೆ. ಪಾಪ ಗೌರವ್ ಗುಪ್ತಾ ಏನು ಹೇಳ್ತಾರೆ. ಎಲ್ಲಾ ಡಿಸಿಗಳ ಪರವಾಗಿ ಅವರನ್ನ ಬಿಟ್ಟಿದ್ದಾರೆ. ನಾವು ಚೆನ್ನಾಗಿ ಕೆಲಸ ಮಾಡ್ತಿದ್ದೇವೆ ಅಂತ ಹೇಳಿಸಿದ್ದಾರೆ. ಗನ್ ಪಾಯಿಂಟ್ ಇಟ್ಟು ಹೇಳಿ ಅಂದ್ರೆ ಏನ್ ಹೇಳ್ತಾರೆ. ಇದು ರಾಜ್ಯ ಸರ್ಕಾರ ನಿನ್ನೆ ಮಾಡಿರುವ ಕಥೆ. ಸರ್ಕಾರ ಚೆನ್ನಾಗಿ ಪರಿಸ್ಥಿತಿ ನಿರ್ವಹಿಸುತ್ತಿದೆ ಅನ್ನೋದನ್ನ ಬಿಂಬಿಸಿದ್ದಾರೆ ಎಂದರು.

ಚುನಾವಣೆಯತ್ತ ಗಮನ ಹರಿಸಿದ್ರು:

ಯುಕೆ ಜನಸಂಖ್ಯೆ 6.7 ಕೋಟಿ ಮಾತ್ರ. ಆದರೆ ಅವರು 1.3 ಕೋಟಿ ಲಸಿಕೆಗೆ ಆರ್ಡರ್ ಮಾಡ್ತಾರೆ. ಆದರೆ ನಮ್ಮ ದೇಶದಲ್ಲಿ 140 ಕೋಟಿ ಜನಸಂಖ್ಯೆಯಿದೆ. ಆದರೆ ಲಸಿಕೆ ಖರೀದಿಸಿದ್ದು 1.1 ಕೋಟಿ ಮಾತ್ರ. ಯುಕೆ ಶೇ. 53ರಷ್ಟು ಲಸಿಕೆಯನ್ನು ಜನರಿಗೆ ಕೊಟ್ಟಿದೆ. ಯುಎಸ್ ಶೇ. 55ರಷ್ಟು ತನ್ನ ದೇಶದ ಜನರಿಗೆ ಲಸಿಕೆ ಕೊಟ್ಟಿದೆ. ನಮ್ಮ ದೇಶದಲ್ಲಿ ಕೇವಲ ಶೇ‌. 2ರಷ್ಟು ಮಂದಿಗೂ ಲಸಿಕೆ ಕೊಟ್ಟಿಲ್ಲ. ಇವರಿಗೆ ನಮ್ಮವರಿಗೆ ಲಸಿಕೆ ಕೊಡೋದು ಬೇಕಿರಲಿಲ್ಲ. ಚುನಾವಣೆಯತ್ತ ಗಮನ ಹರಿಸಿದ್ರು. ಲಸಿಕೆಯನ್ನ ಬೇರೆಯವರಿಗೆ ರಫ್ತು ಮಾಡಿದ್ರು. ಇವತ್ತು ಕೋವಿಡ್ ಪರಿಸ್ಥಿತಿ ದೇಶದಲ್ಲಿ ಹೇಗಿದೆ. 2 ಲಕ್ಷ ಕೋಟಿ ಇದ್ದ ಸಾಲ 4 ಲಕ್ಷ ಕೋಟಿಗೆ ಏರಿದೆ. ರಾಜ್ಯ ವೇತನ ಕೊಡೋಕೆ ಬಿಲ್ಡಿಂಗ್ ಅಡವಿಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನ್ಯಾಯಾಧೀಶರನ್ನ ಲೇವಡಿ ಮಾಡ್ತಾರೆ:

ರಾಜ್ಯದಲ್ಲಿ 6.5 ಲಕ್ಷ ಸಕ್ರಿಯ ಪ್ರಕರಣಗಳಿವೆ. ಪ್ರಸ್ತುತ ಪರಿಸ್ಥಿತಿಯಂತೆ ಹೋದ್ರೆ 50 ಕೋಟಿ ಜನರಿಗೆ ಲಸಿಕೆ ಕೊಡಲು ನಾಲ್ಕು ವರ್ಷ ಬೇಕು. ಸದಾನಂದಗೌಡರೇ ನ್ಯಾಯಾಧೀಶರನ್ನ ಲೇವಡಿ ಮಾಡ್ತಾರೆ. ತಮ್ಮ ತಪ್ಪನ್ನ ಅವರು ಅರಿಯಬೇಕಿತ್ತು. ಬೇರೆ ರಾಜ್ಯಗಳಿಗೆ ಎಷ್ಟು ರೆಮ್​​ಡಿಸಿವಿರ್ ಕೊಟ್ರು. ನಮ್ಮ ರಾಜ್ಯಕ್ಕೆ ಎಷ್ಟು ಕೊಟ್ರು ಅವರೇ ಯೋಚಿಸಲಿ. 25,486 ವಯಲ್ಸ್ ಮಾತ್ರ ರೆಮ್​​ಡಿಸಿವಿರ್ ಬಂದಿದೆ. ಗುಜರಾತ್​ಗೆ 1.53 ಲಕ್ಷ ವಯಲ್ಸ್ ಹೋಗಿದೆ. ಯುಪಿಗೆ 1.28 ಲಕ್ಷ ವಯಲ್ಸ್ ಕೊಟ್ಟಿದ್ದಾರೆ. ರಾಸಾಯನಿಕ ಸಚಿವರಿಗೆ ಇದು ಗೊತ್ತಾಗಲಿಲ್ವೇ? 1 ಪಿಪಿಎ ಕಿಟ್​​ ಖರೀದಿಗೆ 1350 ರೂ. ಕೊಡಲು ಹೊರಟಿದ್ದರು. ಕಡಿಮೆ ಬೆಲೆಗೆ ಬಂದ ಸಂಸ್ಥೆಗಳನ್ನ ತಿರಸ್ಕರಿಸಿದ್ದರು. ಆದರೆ ಅಧಿಕಾರಿಗಳು ಈ ಟೆಂಡರ್ ಒಪ್ಪಲಿಲ್ಲ. ಹಾಗಾಗಿ ನಾಲ್ಕು ಬಾರಿ ಟೆಂಡರ್ ಕ್ಯಾನ್ಸಲ್ ಮಾಡಿದ್ದಾರೆ. ಎಂತಹ ಪಿಪಿಎ ಕಿಟ್ ಇದ್ರೂ ಅದಕ್ಕೆ 500 ರೂ. ಅಷ್ಟೇ ಬೆಲೆ ಎಂದರು.

ಮೃತ ಕೊರೊನಾ ವಾರಿಯರ್​ಗಳಿಗೆ ಪರಿಹಾರ ನೀಡಬೇಕು:

ಸಂಸದ ಡಾ. ಎಲ್.ಹನುಮಂತಯ್ಯ ಮಾತನಾಡಿ, ಕೋವಿಡ್ ಎರಡನೇ ಅಲೆ ತೀವ್ರವಾಗಿ ಇದೆ. ಕೋವಿಡ್ ಕಾರಣದಿಂದ ಶಿಕ್ಷಕರು, ಆಶಾ ಕಾರ್ಯಕರ್ತೆಯರು ಸತ್ತಿದ್ದಾರೆ. ಅವರಿಗೆ ಪರಿಹಾರ ನೀಡಬೇಕು. ಆಂಧ್ರ ಪ್ರದೇಶದಲ್ಲಿ ಮೊದಲ ಕಂತು 10 ಸಾವಿರ ಕೊಟ್ಟಿದ್ದಾರೆ. ತಮಿಳುನಾಡಿನಲ್ಲಿ ಎರಡನೇ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಕೇರಳ ಸರ್ಕಾರ ಹಲವಾರು ಪ್ಯಾಕೇಜ್ ಘೋಷಣೆ ಮಾಡಿದೆ.

ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮನಮೋಹನ್ ಸಿಂಗ್ ಅವರು ಬರೆದ ಪತ್ರಕ್ಕೆ ಇವರು ಪ್ರತಿಕ್ರಿಯೆ ನೀಡಿಲ್ಲ. ರಾಜ್ಯ ಸರ್ಕಾರಕ್ಕೆ ನಾವು ಒತ್ತಾಯ ಮಾಡುತ್ತೇವೆ. ಡಾಕ್ಟರ್, ನರ್ಸ್, ಶಿಕ್ಷಕರು, ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ಒಂದು ಲಕ್ಷ ರೂ. ನೀಡಬೇಕು. ಸರ್ಕಾರ ಬಿಡುಗಡೆ ಮಾಡಿರುವ ಎರಡು ಸಾವಿರ ಯಾರಿಗೂ ಸಾಕಾಗುವುದಿಲ್ಲ. ಪ್ರಾಣ ಕಳೆದುಕೊಂಡಿರುವವರ ಕುಟುಂಬಗಳಿಗೆ ಇದು ಉಪಯೋಗ ಇಲ್ಲ. ಕೇರಳ, ತಮಿಳುನಾಡು, ಆಂಧ್ರ ಪ್ರದೇಶದ ರೀತಿಯಲ್ಲಿ ನಮ್ಮ ಸರ್ಕಾರ ಸಹಾಯ ಮಾಡಬೇಕು. ಅಲ್ಲದೇ ಕೋವಿಡ್ ಸಂಕಷ್ಟದ ಕಾಲದಲ್ಲಿ ಎಲ್ಲಾ ಅಸಂಘಟಿತ ವಲಯದ ಕಾರ್ಮಿಕರಿಗೆ 6 ಸಾವಿರ ರೂ. ಧನಸಹಾಯ ನೀಡಬೇಕು ಎಂದು ಒತ್ತಾಯಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.