ಬೆಂಗಳೂರು: ಏಕಾಂಗಿಯಾಗಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಾತನಾಡಿಸಲು ರಾಯಚೂರು ಸಂಸದ ಬಿ.ವಿ ನಾಯಕ್ ಆಗಮಿಸಿದ್ದು, ಭೇಟಿ ನಂತರ ಸಿಎಂ ಜತೆ ಕೂಡ ಸಮಾಲೋಚಿಸಿದರು.
ನಗರಕ್ಕೆ ಆಗಮಿಸಿ ರಮೇಶ್ ಭೇಟಿ ಮಾಡಿದ ನಾಯಕ್, ಸತೀಶ್ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ ನಡುವೆ ಸಾಮರಸ್ಯ ಮೂಡಿಸುವ ಯತ್ನ ಮಾಡಿದರು. ಇಬ್ಬರ ನಡುವೆ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಮಾತುಕತೆ ನಡೆಸಲು ಆಗಮಿಸಿದ ನಾಯಕ್ ಈ ನಿಟ್ಟಿನಲ್ಲಿ ಒಂದಿಷ್ಟು ಸಫಲತೆ ಕೂಡ ಸಾಧಿಸಿದ್ದಾರೆ ಎನ್ನಲಾಗಿದೆ.
ರಮೇಶ್ ಜಾರಕಿಹೊಳಿ ಮನವೊಲಿಕೆಗೆ ಆಗಮಿಸಿದ ಬಿ.ವಿ. ನಾಯಕ್ ಜತೆ ಸತೀಶ್ ಜಾರಕಿಹೊಳಿ ಕೂಡ ಇದ್ದರು. ಕುಟುಂಬ ಒಡೆಯುವ ಕೆಲಸ ಕೆಲ ನಾಯಕರಿಂದ ನಡೆಯುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ನಿಮ್ಮ ಕುಟುಂಬಕ್ಕೆ ತಮ್ಮದೇ ಆದ ರಾಜಕೀಯ ಇತಿಹಾಸ ಇದೆ. ಅದನ್ನ ಸಹೋದರರಲ್ಲಿ ಬಿರುಕು ತಂದು ರಾಜಕೀಯ ಲಾಭ ಪಡೆಯಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ. ನಿಮಗೆ ಸಚಿವ ಸ್ಥಾನ ಕೊಡ್ತೀವಿ ಅಂತ ಹೇಳುತ್ತಿದ್ದಾರೆ. ಪಕ್ಷ ಬಿಡುವುದು ಬೇಡ ನಿಮ್ಮಲ್ಲಿ ಇರೋ ಸಮಸ್ಯೆ ಬಗೆಹರಿಸಿಕೊಂಡು ಹೋಗಿ ಎಂದು ನಾಯಕ್ ಸಲಹೆ ನೀಡಿದರು. ಸರ್ಕಾರಕ್ಕೆ ಆತಂಕವಿಲ್ಲ
ನೀವು ಪಕ್ಷ ಬಿಡುವುದರಿಂದ ಸರ್ಕಾರ ಕ್ಕೆ ತೊಂದರೆ ಆಗಲ್ಲ. ಬಿಜೆಪಿಗೆ ಹೋದ್ರೆ ನಿಮ್ಮನ್ನ ಮೂಲೆಗುಂಪು ಮಾಡ್ತಾರೆ ಎಚ್ಚರಿಕೆಯಿಂದ ರಾಜಕೀಯ ನಿರ್ಧಾರ ತೆಗೆದುಕೊಳ್ಳಿ. ಇಷ್ಟು ಮಾತನಾಡಿದ್ರು ಮೌನವಹಿಸಿದ ರಮೇಶ್ ಜಾರಕಿಹೊಳಿ ಬಂದವರಿಗೆ ನೇರವಾಗಿ ವಿವರಿಸಿದ್ದಾರೆ ಎನ್ನಲಾಗಿದೆ.
ಸಿಎಂ ಭೇಟಿ:
ರಮೇಶ್ ಜಾರಕಿಹೊಳಿ ಭೇಟಿ ಬೆನ್ನೆಲ್ಲೆ ಬಿ ಬಿ ನಾಯಕ್ ನೇರವಾಗಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಹೆಚ್ಡಿಕೆ ಭೇಟಿಯಾದ ಬಿ ವಿ ನಾಯಕ್ ಅವರು ರಮೇಶ್ ಜಾರಕಿಹೊಳಿ ನಡೆ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸಿದರು. ರಾಯಚೂರು ಕಾಂಗ್ರೆಸ್ ಶಾಸಕರನ್ನು ರಮೇಶ್ ಜಾರಕಿಹೊಳಿ ಸೆಳೆಯುವ ಪ್ರಯತ್ನ ಮಾಡಿದ್ದರು. ಹೀಗಾಗಿ ಪ್ರಯತ್ನಕ್ಕೆ ಬ್ರೇಕ್ ಹಾಕಲು ಬಿ ವಿ ನಾಯಕ್ ಜೊತೆ ಸಿಎಂ ಚರ್ಚಿಸಿದರು. ಇದಾದ ಬಳಿಕ ಬಿ ವಿ ನಾಯಕ್ ಮೂಲಕ ರಮೇಶ್ ಜಾರಕಿಹೊಳಿ ಸಂಧಾನಕ್ಕೆ ಸಿಎಂ ಮುಂದಾಗಿದ್ದು ಇಂದಿನ ಭೇಟಿ ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದ್ದಾರೆ.