ಬೆಂಗಳೂರು: ಟ್ರಾಫಿಕ್ ನಿಯಮ ಉಲ್ಲಂಘನೆ ಕುರಿತ ಮೋಟಾರು ವಾಹನ ಕಾಯ್ದೆ ತಿದ್ದುಪಡಿಗೆ ಇತ್ತೀಚೆಗಷ್ಟೆ ಕೇಂದ್ರ ಸಚಿವ ಸಂಪುಟದ ಅನುಮೋದನೆ ಸಿಕ್ಕಿದ ಬೆನ್ನಲೇ ಕರ್ನಾಟಕ ಮೋಟಾರ್ ವಾಹನ ಕಾಯ್ದೆದಲ್ಲೂ ತಿದ್ದುಪಡಿ ಮಾಡಿ ಟ್ರಾಫಿಕ್ ಉಲ್ಲಂಘನೆ ಮಾಡಿದ್ರೆ ಸೆಪ್ಟೆಂಬರ್ 1ರಿಂದ ಭಾರಿ ದಂಡವನ್ನ ಅಧಿಕೃತವಾಗಿ ಜಾರಿ ತರಲಾಗುತ್ತಿದೆ.
ಆದ್ರು ವಾಹನ ಸವಾರರ ಹಿತದೃಷ್ಟಿಯಿಂದ ಈಗಾಗ್ಲೇ ಸಿಲಿಕಾನ್ ಸಿಟಿಯ ಪೊಲೀಸರು ಕಳೆದ ಇಪ್ಪತ್ತು ದಿನಗಳಿಂದ ವಾಹನ ಸವಾರರಿಗೆ ಮುಂಜಾಗೃತ ಎಚ್ಚರಿಕೆ ನೀಡಲು ರಸ್ತೆಗೆ ಇಳಿದು ರೂಲ್ಸ್ ಬ್ರೇಕ್ ಮಾಡುವ ವಾಹನ ಸವಾರರನ್ನ ಹಿಡಿದು ಕಾರ್ಯಚರಣೆ ಮಾಡ್ತಿದ್ದಾರೆ.
ಅಷ್ಟು ಮಾತ್ರವಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಮುಂಜಾಗೃತ ಕ್ರಮದ ಸಂದೇಶ, ವಾಹನ ಸವಾರರು ತಪ್ಪು ಮಾಡಿದರೆ ಯಾವೆಲ್ಲಾ ದಂಡ ತೆರಬೇಕಾಗುತ್ತೆ ಅನ್ನೋದನ್ನ ಪೊಲೀಸರೆ ಫ್ಲೇಕ್ಸ್ ಅಳವಡಿಸಿ ಜಾಗೃತಿ ಮೂಡಿಸಿದ್ದಾರೆ.
ಸದ್ಯ ಟ್ರಾಫಿಕ್ ಪೊಲೀಸರು ಅನಿಯಂತ್ರಿತ ಡ್ರೈವಿಂಗ್ ಕೇಸ್, ವಸೂಲಿ ಮಾಡಿದ ಜೀವ ವಿಮೆ ಇಲ್ಲದೆ ವಾಹನ ಚಾಲನೆ ಕೇಸ್ ವಸೂಲಿ, ಚಾಲನೆ ವೇಳೆ ಮೊಬೈಲ್ ಬಳಕೆ, ಮಿತಿ ಮೀರಿದ ಓವರ್ ಲೋಡ್ ವಸ್ತು ಸಾಗಣೆ, ಆ್ಯಂಬುಲೆನ್ಸ್ ನಂತಹ ತುರ್ತು ವಾಹನಗಳಿಗೆ ದಾರಿ ಬೀಡದೆ ಇರುವ ವಾಹನಗಳಿಗೆ ದಂಡ, ಮಧ್ಯ ಸೇವಿಸಿ ಚಾಲನೆ, ಸಿಗ್ನಲ್ ಜಂಪ್, ಒನ್ ವೇ, ಸೀಟ್ ಬೇಲ್ಟ್ ಇಲ್ಲದೇ ಚಾಲನೆ, ಹೆಲ್ಮೇಟ್ ಇಲ್ಲದೇ ಚಾಲನೆ ಮಾಡುವವರನ್ನ ಹಿಡಿದು ದಂಡ ವಸೂಲಿ ಮಾಡ್ತಿದ್ದಾರೆ.
ಮತ್ತೊಂದೆಡೆ ಟ್ರಾಫಿಕ್ನ ಆಯುಕ್ತರು ಕೂಡ ಈ ಟಿವಿ ಭಾರತ್ ಜೊತೆ ಮಾತಾನಾಡುತ್ತ ಈಗಾಗ್ಲೇ ವಾಹನ ಸವಾರರ ಹಿತದೃಷ್ಟಿಯಿಂದ ಮುಂಜಾಗೃತ ಕ್ರಮವಾಗಿ ಎಚ್ಚರಿಕೆ ನೀಡಿ ದಂಡ ವಸೂಲಿ ಮಾಡಲಾಗ್ತಿದೆ. ಮುಂದಿನ ಸೆಪ್ಟೆಂಬರ್ 1ರಿಂದ ಅಧಿಕೃತವಾಗಿ ಅನುಷ್ಠಾನಗೊಳಲ್ಲಿದ್ದು ಒಂದು ವೇಳೆ ವಾಹನ ಸವಾರರು ರೂಲ್ಸ್ ಬ್ರೆಕ್ ಹಾಕಿದ್ರೆ ದಂಡ ಕಟ್ಟಬೇಕಾಗುತ್ತೆಂದು ತಿಳಿಸಿದ್ದಾರೆ.