ETV Bharat / state

ಬೆಂಗಳೂರು: ಬಿಲ್ಡಿಂಗ್​​​​​ನಿಂದ ಕಂದಮ್ಮನನ್ನ ಕೆಳಕ್ಕೆ ಎಸೆದು ಹತ್ಯೆ ಮಾಡಿದ ತಾಯಿ! - ಸಂಪಂಗಿರಾಮನಗರದ ಆದಿತ್ಯ ಅಪಾರ್ಟ್​ಮೆಂಟ್

ಬೆಂಗಳೂರಲ್ಲಿ ಹೃದಯ ವಿದ್ರಾವಕ ಘಟನೆ - ಬುದ್ದಿಮಾಂದ್ಯ ಎಂದು ಜನ್ಮಕೊಟ್ಟ ತಾಯಿಯಿಂದಲೇ ಮಗುವಿನ ಹತ್ಯೆ

Mother Killed son in Bengaluru
Mother Killed son in Bengaluru
author img

By

Published : Aug 5, 2022, 12:17 PM IST

Updated : Aug 5, 2022, 3:55 PM IST

ಬೆಂಗಳೂರು: ಹೆತ್ತ ತಾಯಿಯೇ ಮಗುವನ್ನು ಐದನೇ‌ ಮಹಡಿಯಿಂದ ಎಸೆದು ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ರಾಜಧಾನಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಆಗಸ್ಟ್ 4ರಂದು ಸಂಪಂಗಿರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ತಾಯಿ ಸುಷ್ಮಾ ಎಂಬವರು ತನ್ನ 5 ವರ್ಷದ ಹೆಣ್ಣು ಮಗು ದ್ವಿತಿಯನ್ನು ಎಸೆದು ತಾನೂ ಸಹ ಆತ್ಮಹತ್ಯೆಗೆ ವಿಫಲ ಯತ್ನ ನಡೆಸಿರುವುದು ಗೊತ್ತಾಗಿದೆ. ಪತಿ ಕಿರಣ್ ನೀಡಿದ ದೂರಿನ ಮೇರೆಗೆ ಪತ್ನಿ ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು‌ ಪೊಲೀಸರು ತಿಳಿಸಿದ್ದಾರೆ.

ಸಂಪಂಗಿರಾಮನಗರದ ಆದಿತ್ಯ ಅಪಾರ್ಟ್​ಮೆಂಟ್ ನಾಲ್ಕನೇ‌ ಮಹಡಿಯ ಮನೆಯೊಂದರಲ್ಲಿ ಇವರು ವಾಸವಾಗಿದ್ದರು.‌ ಕಿರಣ್ ಸಾಫ್ಟ್​​ವೇರ್ ಇಂಜಿನಿಯರ್ ಆಗಿದ್ದು, ಸುಷ್ಮಾ ಡೆಂಟಿಸ್ಟ್ ‌ಪ್ಯಾಕ್ಟಿಸ್ ಮಾಡುತ್ತಿದ್ದರು. ಇವರ ಮಗು ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತಿತ್ತು. ಬುದ್ಧಿಮಾಂದ್ಯತೆ ಮಗು ಎಂದು ಆರೋಪಿಸಿ ಕಳೆದ ಮೂರು ತಿಂಗಳ ಹಿಂದೆಯೇ ರೈಲ್ವೆ ಸ್ಟೇಷನ್​ನಲ್ಲಿ ಮಗುವನ್ನು ಬಿಟ್ಟು ತಾಯಿ ಬಂದಿದ್ದರು.

ಸಿಸಿಟಿವಿ ದೃಶ್ಯ

ತಂದೆ ಕಿರಣ್, ಮಗುವನ್ನು ಹುಡುಕಿ ಕರೆದುಕೊಂಡು ಬಂದಿದ್ದರು. ನಿನ್ನೆ ಮಧ್ಯಾಹ್ನ ನಾಲ್ಕನೇ‌ ಮಹಡಿಯಿಂದ ವಸ್ತು ಬಿಸಾಕುವ ಹಾಗೇ ಮಗುವನ್ನು ಎಸೆದಿರುವ ಭಯಾನಕ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.

ಇದನ್ನು ಓದಿ: ಮಂಗಳೂರನ್ನೇ ಬೆಚ್ಚಿ ಬೀಳಿಸಿದ 1994ರ ನಾಲ್ವರ ಹತ್ಯೆ: ಅಪರಾಧಿಗೆ ಬಿಡುಗಡೆ ಭಾಗ್ಯ, ಕುಟುಂಬಸ್ಥರ ವಿರೋಧ

Last Updated : Aug 5, 2022, 3:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.