ಆನೇಕಲ್: ಹೆತ್ತ ಮಗಳಿಂದಲೇ ತಾಯಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಆನೇಕಲ್ ತಾಲೂಕಿನ ಬಿದರಗುಪ್ಪೆ ಗ್ರಾಮದಲ್ಲಿ ಕೇಳಿ ಬಂದಿದೆ.
ಬಿದರಗುಪ್ಪೆ ಗ್ರಾಮದ ಐವತ್ತು ವರ್ಷದ ಅಮ್ಮಯ್ಯಮ್ಮ ಎಂಬುವವರ ಮೇಲೆ ಅಕ್ಕ ಯಲ್ಲಮ್ಮ, ಮಗಳು ಲತಾ ಮತ್ತು ಬಾಡಿಗೆ ಮನೆಯ ಮಾದೇಶ ಎಂಬುವವರಿಂದ ಕ್ಷುಲ್ಲಕ ಕಾರಣಕ್ಕಾಗಿ ಕಬ್ಬಿಣದ ರಾಡಿನಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.
ಓದಿ: ಸುಲಭ ಶೌಚಾಲಯಕ್ಕೆ ಹೋಗಿದ್ದ ಯುವಕನ ಬರ್ಬರ ಹತ್ಯೆ
ಕತ್ತಿನಲ್ಲಿದ್ದ ಚಿನ್ನದ ಸರ, ಆಭರಣಗಳನ್ನು ಕಿತ್ತು ಹಿಂಸೆ ನೀಡಿದ್ದಾರೆಂದು ಲಗ್ಗೆರೆಯ ಆಸರೆ ವೃದ್ಧಾಶ್ರಮಕ್ಕೆ ತೆರಳಿ ತಮ್ಮ ನೋವನ್ನು ತೋಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆ ಎಚ್ಚೆತ್ತ ಅತ್ತಿಬೆಲೆ ಪೊಲೀಸರು, ಆಸರೆ ಫೌಂಡೇಷನ್ ಕಡೆಯಿಂದ ನೊಂದ ಮಹಿಳೆಯನ್ನ ಕರೆಸಿ ಪ್ರಕರಣ ದಾಖಲಿಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.