ಬೆಂಗಳೂರು: ಅಪಾರ್ಟ್ಮೆಂಟ್ನಿಂದ ತಾಯಿ-ಮಗು ಬಿದ್ದು ಸಾವನ್ನಪ್ಪಿರುವ ಘಟನೆ ಆರ್ಟಿ ನಗರದ ವೈಟ್ ಹೌಸ್ನಲ್ಲಿ ನಡೆದಿದೆ.
ಭಾವನ (29) ವರ್ಷ ಹಾಗೂ 2 ವರ್ಷದ ದೇವಂತ್ ಮೃತ ದುರ್ದೈವಿಗಳು. ಸಂಜೆ ಅಪಾರ್ಟ್ಮೆಂಟ್ನ 7ನೇ ಮಹಡಿಯಿಂದ ಎರಡು ವರ್ಷದ ಕಂದಮ್ಮ ಹಾಗೂ ಭಾವನ ಏಕಾಏಕಿ ಕೆಳಗೆ ಬಿದಿದ್ದಾರೆ. ತಕ್ಷಣ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಆರ್ಟಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದ್ಯ ಭಾವನಾ ಪತಿಯನ್ನ ವಶಕ್ಕೆ ಪಡೆದು ಆರ್ಟಿ ನಗರ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಭಾವನಾ ಮತ್ತು ಮಗು ದೇವಂತ್ ಸಾವಿಗೆ ಇಬ್ಬರ ನಡುವಿನ ಜಗಳವೇ ಕಾರಣ ಅನ್ನೋದು ಮೆಲ್ನೋಟಕ್ಕೆ ಬೆಳಕಿಗೆ ಬಂದಿದೆ.
ಪತಿ ಹರಿಹಂಥ್ ಪದೇ ಪದೇ ಪತ್ನಿಯನ್ನ ಹಿಯಾಳಿಸಿ, ಹಣ ತೆಗೆದುಕೊಂಡು ಬರುವಂತೆ ಹೇಳುತ್ವಿತಿದ್ಚಾದ ಎನ್ನಲಾಗಿದೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಭಾವನ ಸಹೋದರಿಯರು ಆರೋಪ ಮಾಡಿದ್ದಾರೆ.