ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಎರಡನೇ ಅಲೆ ಆರ್ಭಟ ಜೋರಾಗಿದೆ. ಯುವ ಸಮುದಾಯದಲ್ಲಿ ಹೆಚ್ಚು ಸೋಂಕು ಲಕ್ಷಣಗಳು ಗೋಚರಿಸುತ್ತಿದೆ. ಈ ವಿಚಾರವನ್ನು ತಜ್ಞರು ಕೂಡ ಖಚಿತಪಡಿಸಿದ್ದು, ಯುವಕ-ಯುವತಿಯರು ಕೋವಿಡ್ ಪರೀಕ್ಷೆಗೆ ಮುಗಿಬೀಳುತ್ತಿದ್ದಾರೆ.
ಬಿಟಿಎಂ ಲೇಔಟ್ನ ಎನ್.ಎಸ್ ಪಾಳ್ಯದಲ್ಲಿ ಕೋವಿಡ್ ಟೆಸ್ಟ್ಗಾಗಿ ಸರತಿ ಸಾಲಿನಲ್ಲಿ ಜನರು ನಿಂತಿದ್ದ ದೃಶ್ಯ ಕಂಡುಬಂತು. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಟೆಸ್ಟಿಂಗ್ಗಾಗಿ ಕ್ಯೂ ಇದ್ದು, ಯುವಕ- ಯುವತಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು.
ಇದನ್ನೂ ಓದಿ: 146 ಜನರಿಗೆ ಕೋವಿಡ್ ಸೋಂಕು: ಖಾನಾಪೂರ ತಾಲೂಕಿನ ಅಬನಾಳಿ ಗ್ರಾಮ ಸೀಲ್ಡೌನ್
ಜನರಲ್ಲಿ ಮೈ-ಕೈ ನೋವು, ಗಂಟಲು ನೋವು, ಕೆಮ್ಮು ಲಕ್ಷಣಗಳು ಕಾಣಿಸಿಕೊಳ್ಳಲು ಶುರುವಾಗಿದೆ. ಹೀಗಾಗಿ ಹೆಚ್ಚು ಹೆಚ್ಚು ಕೋವಿಡ್ ಟೆಸ್ಟ್ ಆಗುತ್ತಿದೆ.