ETV Bharat / state

Shakti Scheme: ಶಕ್ತಿ ಯೋಜನೆಯಡಿ 18 ದಿನದಲ್ಲಿ 9 ಕೋಟಿಗೂ ಹೆಚ್ಚು ಮಹಿಳೆಯರ ಪ್ರಯಾಣ; ಉಚಿತ ಟಿಕೆಟ್ ಮೌಲ್ಯ ₹222 ಕೋಟಿ!

ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾ ಬಳಿಕ ಒಟ್ಟು 9,46,35,508 ಮಹಿಳಾ ಪ್ರಯಾಣಿಕರು ಸರ್ಕಾರಿ ಬಸ್​ಗಳಲ್ಲಿ ಪ್ರಯಾಣಿಸಿದ್ದಾರೆ. ಇದರ ಒಟ್ಟು ಟಿಕೆಟ್ ಮೌಲ್ಯ 222,00,79,232 ರೂಪಾಯಿ.

Shakti Scheme
ಶಕ್ತಿ ಯೋಜನೆ
author img

By

Published : Jun 29, 2023, 4:40 PM IST

ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿ ನಿನ್ನೆ ಒಂದೇ ದಿನ 60.78 ಲಕ್ಷ ಮಹಿಳಾ ಪ್ರಯಾಣಿಕರು ಸರ್ಕಾರಿ ಬಸ್​​ಗಳಲ್ಲಿ ಸಂಚರಿಸಿದ್ದಾರೆ. ಇದರ ಟಿಕೆಟ್ ಮೌಲ್ಯ 13.64 ಲಕ್ಷ ರೂ.ಗಳಾಗಿದ್ದು, ಯೋಜನೆ ಜಾರಿಯಾದ ದಿನದಿಂದ ಇಲ್ಲಿಯವರೆಗೂ ಮಹಿಳಾ ಪ್ರಯಾಣಿಕರ ಉಚಿತ ಟಿಕೆಟ್ ಮೌಲ್ಯ 222 ಕೋಟಿ ರೂಪಾಯಿಗಳಾಗಿದೆ.

ಜೂನ್ 28ರಂದು ಕೆಎಸ್ಆರ್​ಟಿಸಿ ಬಸ್​​ಗಳಲ್ಲಿ 17,97,487 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, 4,88,17,069 ಟಿಕೆಟ್ ಮೌಲ್ಯವಾಗಿದೆ. ಬಿಎಂಟಿಸಿಯಲ್ಲಿ 19,85,022 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ಉಚಿತ ಟಿಕೆಟ್ ಮೌಲ್ಯ 2,52,51,690 ರೂ.ಗಳಾಗಿದೆ. ವಾಯುವ್ಯ ಕರ್ನಾಟಕ ಸಾರಿಗೆಯಲ್ಲಿ 14,61,168 ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡಿದ್ದು, ಟಿಕೆಟ್ ಮೌಲ್ಯ 3,57,51,650 ರೂ.ಗಳಾಗಿದೆ. ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಬಸ್​​ಗಳಲ್ಲಿ 8,36,562 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಇವರ ಟಿಕೆಟ್ ಮೌಲ್ಯ 2,66,22,130 ರೂ.ಗಳಾಗಿದೆ. ಒಟ್ಟು ನಿನ್ನೆ ಒಂದೇ ದಿನ ನಾಲ್ಕು ನಿಗಮಗಳ ಬಸ್​​ಗಳಲ್ಲಿ ಒಟ್ಟೂ 60,78,239 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಇವರ ಉಚಿತ ಟಿಕೆಟ್ ಮೌಲ್ಯ 13,64,42,539 ರೂ.ಗಳಾಗಿದೆ.

ಕಳೆದ 18 ದಿನಗಳಲ್ಲಿ ನಾಲ್ಕು ನಿಗಮಗಳಿಂದ ಒಟ್ಟು 9,46,35,508 ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡಿದ್ದು, ಇದರ ಒಟ್ಟು ಟಿಕೆಟ್ ಮೌಲ್ಯ 222,00,79,232 ರೂ.ಗಳಾಗಿದೆ. ಇಷ್ಟೂ ಮೊತ್ತವನ್ನು ರಾಜ್ಯ ಸರ್ಕಾರ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಪಾವತಿ ಮಾಡಬೇಕಾಗಿದ್ದು, ಬಜೆಟ್​​ನಲ್ಲಿ ಹಣಕಾಸು ಪೂರೈಸಲು ಅನುದಾನ ಮೀಸಲಿಡಲಿದೆ.

ರಾಜ್ಯ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಲ್ಲಿಯೂ ಪ್ರತಿ ದಿನ ಪ್ರಯಾಣ ಮಾಡುವ ಪ್ರಯಾಣಿಕರಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಶೇಕಡಾ 50ರಷ್ಟು ದಾಟುತ್ತಿದೆ. ನಿನ್ನೆಯ ಅಂಕಿ ಅಂಶದ ಪ್ರಕಾರ ಹೇಳುವುದಾದರೆ ನಾಲ್ಕು ನಿಗಮಗಳಿಂದ ಒಟ್ಟು 1,10,85,049 ಪ್ರಯಾಣಿಕರು ಪ್ರಯಾಣ ಮಾಡಿದ್ದರೆ, ಇದರಲ್ಲಿ 60,78,239 ಮಹಿಳಾ ಪ್ರಯಾಣಿಕರಿದ್ದಾರೆ. ಶೇಕಡಾ 55ರಷ್ಟು ಮಹಿಳೆಯರು ಸಾರಿಗೆ ಸಂಸ್ಥೆಯ ಬಸ್​​ಗಳಲ್ಲಿ ಪ್ರಯಾಣಿಸಿದ ವರದಿ ದಾಖಲಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯನ್ನು ಜೂನ್ 11ರಿಂದ ಜಾರಿಗೆ ತರಲಾಗಿದೆ. ಶಕ್ತಿ ಯೋಜನೆಗೆ ರಾಜ್ಯದ ಮಹಿಳೆಯರು ಸರ್ಕಾರ ನೀಡಿರುವ ಯಾವುದಾದರೂ ಗುರುತಿನ ಚೀಟಿ ತೋರಿಸಿ ಉಚಿತ ಟಿಕೆಟ್ ಪಡೆದ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಸಾಮಾನ್ಯ ಸಾರಿಗೆ, ನಗರ ಸಾರಿಗೆ ಮತ್ತು ವೇಗದೂತ ಬಸ್ ಗಳಲ್ಲಿ ಪ್ರಯಾಣ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅದರಂತೆ ಯೋಜನೆ ಜಾರಿಯಾದ ದಿನದಿಂದಲೇ ರಾಜ್ಯದ ಸಾರಿಗೆ ನಿಗಮಗಳ ಬಸ್​ಗಳು ಜನರಿಂದ ತುಂಬಿ ತುಳುಕುತ್ತಿವೆ. ಅಂತರ್ ನಗರ ಬಸ್​ಗಳಿಗೆ ಹೆಚ್ಚಿನ ಬೇಡಿಕೆ ಇದೆ. ನಗರ ಸಾರಿಗೆಯಲ್ಲಿಯೂ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ.

ಇದನ್ನೂ ಓದಿ: ಶಕ್ತಿ ಯೋಜನೆ: ವಾಯವ್ಯ ಸಾರಿಗೆಯಲ್ಲಿ ₹2 ಕೋಟಿಗೂ ಹೆಚ್ಚು ಮಹಿಳೆಯರ ಪ್ರಯಾಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.