ಬೆಂಗಳೂರು: ಕೊರೊನಾ ವೈರಸ್ ಕುರಿತಾಗಿ ಆರೋಗ್ಯ ಇಲಾಖೆ ಮುಂಜಾಗೃತಾ ಕ್ರಮ ತೆಗೆದುಕೊಳ್ಳುವಂತೆ ಜನರಿಗೆ ಸೂಚಿಸುತ್ತಲೇ ಇದೆ. ಆದರೆ ಭಯಭೀತರಾದ ಜನರು ಮಾನಸಿಕ ತಜ್ಞರಿಗೆ ಕರೆ ಮಾಡಿ ಕೌನ್ಸೆಲಿಂಗ್ ಪಡೆದುಕೊಳ್ಳುತ್ತಿದ್ದಾರೆ.
ಹೌದು, ಕೊರೊನಾ ಸೋಂಕಿತರಿಗಿಂದ, ಕೊರೊನಾ ಬಂದರೆ ಏನು ಮಾಡೋದು ಎಂಬ ಚಿಂತೆಯಲ್ಲಿ ಇರುವವರು ಮಾನಸಿಕ ತಜ್ಞರ ಮೊರೆ ಹೋಗಿದ್ದಾರೆ. ಇದುವರೆಗೂ ತಜ್ಞರಿಗೆ ಕರೆ ಮಾಡಿ ಕೌನ್ಸಿಲಿಂಗ್ ಪಡೆದುಕೊಂಡವರ ಸಂಖ್ಯೆ ಬರೋಬ್ಬರಿ 12,500 ಮಂದಿ.
ಸಹಾಯವಾಣಿ ಸಂಖ್ಯೆ 104ರ ಮೂಲಕ ಆಯಾ ಜಿಲ್ಲೆಯ ಮಾನಸಿಕ ಆರೋಗ್ಯ ತಜ್ಞರಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ. ಸದ್ಯ ಶಂಕಿತರು, ಸೋಂಕಿತರು, ಅವರ ಕುಟುಂಬಸ್ಥರು, ಹೋಮ್ ಕ್ವಾರಂಟೈನ್ನಲ್ಲಿ ಇರುವವರು ಎಲ್ಲರಿಗೂ ಇಲಾಖೆಯಿಂದಲೇ ಕರೆ ಮಾಡಿ ಕೌನ್ಸಲಿಂಗ್ ಮಾಡಲಾಗುತ್ತಿದೆ.