ಬೆಂಗಳೂರು : ಬೇರೆ ರಾಜ್ಯಗಳಿಂದ ಬರುವವರ ಬಗ್ಗೆ ಹೆಚ್ಚಿನ ನಿಗಾ ಇಡುತ್ತಿದ್ದೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಹಾರಾಷ್ಟ್ರದಿಂದ ಬರುವವರಲ್ಲಿ ಹೆಚ್ಚು ಸೋಂಕು ಕಂಡು ಬರುತ್ತಿದೆ. ಹಾಗಾಗಿ ಆ ರಾಜ್ಯದಿಂದ ಬರುವವರಿಗೆ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಇರುತ್ತದೆ ಎಂದರು.
ಮಹಾರಾಷ್ಟ್ರ ಗಡಿಭಾಗ ಸಂಪರ್ಕಿಸುವ ರಸ್ತೆಗಳ ವ್ಯಾಪ್ತಿಯಲ್ಲಿ 60 ಪೊಲೀಸ್ ಸ್ಟೇಷನ್ ಬರುತ್ತವೆ. ಸಾಂಸ್ಥಿಕ ಕ್ವಾರಂಟೈನ್ ತಪ್ಪಿಸಿಕೊಳ್ಳಲು ಆ ರಾಜ್ಯದಿಂದ ಬರುವವರಿಗೆ ಸಾಧ್ಯವಿಲ್ಲ. ಜಿಲ್ಲಾ ಮಟ್ಟದ ಚೆಕ್ ಪೋಸ್ಟ್ಗಳನ್ನು ಮಹಾರಾಷ್ಟ್ರ ಗಡಿಭಾಗಕ್ಕೆ ಶಿಫ್ಟ್ ಮಾಡುತ್ತಿದ್ದೇವೆ ಎಂದು ಹೇಳಿದರು.
ಮಹಾರಾಷ್ಟ್ರದಿಂದ ಬರುವವರ ಸಂಖ್ಯೆ ಹೆಚ್ಚಿದ್ದು, ಸೋಂಕು ಕೂಡ ಜಾಸ್ತಿ ಇದೆ. ಕಾಲು ದಾರಿಯಲ್ಲಿ ಬರುವವರು, ಎತ್ತಿನ ಗಾಡಿಯಲ್ಲಿ ಬರುವ ಮೇಲೆ ನಿಗಾ ಇಡಬೇಕು. ಕಾಲುದಾರಿಗಳನ್ನು ಪತ್ತೆ ಮಾಡಿ ಗಸ್ತು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.