ಬೆಂಗಳೂರು: ಬಜೆಟ್ ಮಂಡನೆ ಪ್ರಮುಖ ಕೆಲಸ. ನನ್ನ ಬಜೆಟ್ನಲ್ಲಿ ಜನರಿಗೆ ಒದಗಿಸಲಾಗುವ ಮೂಲಭೂತ ಸೌಕರ್ಯದಲ್ಲಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು. ಹಾಗೆಯೇ ಅಧಿಕಾರಿಗಳ ಸಭೆ ಕರೆದು ಖರ್ಚು, ಆದಾಯದ ಬಗ್ಗೆ ಚರ್ಚಿಸಲಾಗುವುದು ಎಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಶ್ರೀನಿವಾಸ್ ಹೇಳಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಗಳು ಇಂದಿನಿಂದ ಅಧಿಕೃತ ಕಾರ್ಯಾಚರಣೆ ಆರಂಭಿಸಿದ್ದು, ಇಂದು ಎಲ್ಲಾ ಸ್ಥಾಯಿ ಸಮಿತಿಗಳ ಕಚೇರಿ ಆರಂಭಕ್ಕೆ ಅದ್ಧೂರಿ ಪೂಜೆ ನಡೆಯಿತು. ಇನ್ನೊಂದೆಡೆ ಬಿಜೆಪಿ ಸರ್ಕಾರ ನೇಮಿಸಿರುವ 20 ನಾಮ ನಿರ್ದೇಶಿತ ಸದಸ್ಯರಿಗೆ ಮೇಯರ್ ಗೌತಮ್ ಕುಮಾರ್ ಪ್ರಮಾಣ ವಚನ ಬೋಧಿಸಿದರು. ಕಚೇರಿ ಪೂಜೆಯ ವೇಳೆ ಪಾಲಿಕೆ ನಿಯಮಗಳನ್ನು ಗಾಳಿಗೆ ತೂರಿದ ಸದಸ್ಯರು ಕಚೇರಿಗಳಲ್ಲಿ ಪ್ಲಾಸ್ಟಿಕ್ ಹೂಗುಚ್ಚ, ಕವರ್‌ಗಳ ಬಳಕೆ ಯಥೇಚ್ಚವಾಗಿ ನಡೆಸಿದರು.
ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳಾ ನಾರಾಯಣಸ್ವಾಮಿ ಮಾತನಾಡಿ, ಕೇವಲ ಕಚೇರಿ ಪೂಜೆಯ ದಿನವಷ್ಟೇ ಅಲ್ಲ, ಎಲ್ಲಾ ದಿನಗಳಲ್ಲಿ ಸಮಿತಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ, ಬಿಬಿಎಂಪಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಿಗಬೇಕಾದ ಎಲ್ಲಾ ಸೌಕರ್ಯಗಳನ್ನು ಕಾಲಕಾಲಕ್ಕೆ ಒದಗಿಸಲಾಗುವುದು ಎಂದರು.