ETV Bharat / state

ಸಿಲಿಕಾನ್‌ ಸಿಟಿಯಲ್ಲಿ ಪುಡಿರೌಡಿಗಳಿಗೂ ಸಿಗ್ತಿವೆ ಕಂಟ್ರಿಮೇಡ್‌ ಪಿಸ್ತೂಲ್..

ಬಿಹಾರ, ಉತ್ತರ ಪ್ರದೇಶದಿಂದ ‌ಕಡಿಮೆ ಬೆಲೆಗೆ ಕಂಟ್ರಿಮೇಡ್​ ಪಿಸ್ತೂಲ್​ಗಳು ರವಾನೆಯಾಗುತ್ತಿವೆ. 25 ರಿಂದ 30 ಸಾವಿರಕ್ಕೆ ರೌಡಿಶೀಟರ್​ಗಳಿಗೆ, ಪುಂಡರಿಗೆ ಮಾರಾಟ ಮಾಡುತ್ತಿದ್ದ ವಿಚಾರ ಬಯಲಾಗಿದೆ. ಸದ್ಯ ಪೊಲೀಸರು ಆರೋಪಿಗಳ ಜಾಡು ಹಿಡಿದು ತನಿಖೆ ಮುಂದುವರೆಸಿದ್ದಾರೆ.

ಪುಡಿರೌಡಿಗಳ ಕೈಗೂ ಸಿಗ್ತಿವೆ ಕಂಟ್ರಿಮೇಡ್​ ಪಿಸ್ತೂಲ್
pistol case registered in Bangalore
author img

By

Published : Feb 3, 2020, 5:18 PM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಂಟ್ರಿಮೇಡ್​ ಪಿಸ್ತೂಲ್​​ಗಳ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಗರದಲ್ಲಿ ಅಕ್ರಮವಾಗಿ ಗನ್ ಸಪ್ಲೈಯರ್​ಗಳ ಮೇಲೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಕೆಲದಿನಗಳ ಹಿಂದೆ ಸುದ್ದಗುಂಟೆಪಾಳ್ಯದಲ್ಲಿ ವಿಧ್ವಂಸಕ ಕೃತ್ಯ ವೆಸಗಲು ಸಿದ್ದನಿದ್ದ ಮೆಹಬೂಬ್ ಪಾಷಾ ಎಂಬ ಶಂಕಿತ ಉಗ್ರ ಆತನ ಮೇಲೆ ಪೊಲೀಸರು ದಾಳಿ ನಡೆಸಿ ಮೂರು ಪಿಸ್ತೂಲ್​, 60 ಸಜೀವ ಗುಂಡು ಪತ್ತೆ ಮಾಡಿದ್ದಾರೆ. ಕಳೆದ ಗುರುವಾರ ಬಾಗಲೂರು ರೌಡಿಯೊಬ್ಬನ ಬಳಿ 1 ಪಿಸ್ತೂಲ್​, 7 ಜೀವಂತ ಗುಂಡುಗಳೊಂದಿಗೆ ರೌಡಿ ಫಯಾಜುಲ್ಲಾ ಪೊಲೀಸರ ಬೀಟ್​ ವೇಳೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿ ಬಿದ್ದಿದ್ದ. ಹಾಗಾಗಿ ಉದ್ಯಾನನಗರಿಯಲ್ಲಿ ಪಿಸ್ತೂಲ್​ಗಳು ಎಲ್ಲಿಂದ ಸರಬರಾಜಾಗುತ್ತಿವೆ ಎಂಬುದರ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದರು.

ಬಿಹಾರ, ಉತ್ತರ ಪ್ರದೇಶದಿಂದ ‌ಕಡಿಮೆ ಬೆಲೆಗೆ ಕಂಟ್ರಿಮೇಡ್​ ಪಿಸ್ತೂಲ್​ಗಳು ರವಾನೆಯಾಗುತ್ತಿವೆ. 25 ರಿಂದ 30 ಸಾವಿರಕ್ಕೆ ರೌಡಿಶೀಟರ್​ಗಳಿಗೆ, ಪುಂಡರಿಗೆ ಮಾರಾಟ ಮಾಡುತ್ತಿದ್ದ ವಿಚಾರ ಬಯಲಾಗಿದೆ. ಸದ್ಯ ಪೊಲೀಸರು ಆರೋಪಿಗಳ ಜಾಡು ಹಿಡಿದು ತನಿಖೆ ಮುಂದುವರೆಸಿದ್ದಾರೆ.

ಹತ್ತಾರು ಪ್ರಕರಣಗಳು ದಾಖಲು: ನಗರ ಪೊಲೀಸರು ಈವರೆಗೆ ಆರ್ಮ್ಸ್​ ಬಳಕೆ ಮತ್ತು ಅಕ್ರಮವಾಗಿ ಆಯುಧಗಳನ್ನ ಹೊಂದಿರುವ ಕುರಿತಂತೆ 22ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ.13 ಪಿಸ್ತೂಲ್​, 1 ಎಸ್​ಬಿಬಿಎಲ್​, 2 ಏರ್​ಗನ್​ಗಳು,130 ರೌಂಡ್​ ಜೀವಂತ ಗುಂಡು ಸಹ ಪತ್ತೆಯಾಗಿವೆ. ಈಗಾಗಲೇ 30ಕ್ಕೂ ಅಧಿಕ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

Intro:ಪುಡಿರೌಡಿ ಕೈಗೂ ಸಿಗ್ತಿದೆ ಕಂಟ್ರಿಮೇಡ್​ ಪಿಸ್ತೂಲ್​
ಆರ್ಮ್ಸ್​ ಕೇಸ್​ಗಳು ಖಾಕಿಗು ಸವಾಲು

ಸಿಲಿಕಾನ್ ಸಿಟಿಯಲ್ಲಿ ಮಚ್ಚು ಲಾಂಗ್ ಡ್ರಾಗರ್ ಬಳಕೆ ಮಾಡುವರ ಸಂಖ್ಯೆ ಮೊದಲು ಜಾಸ್ತಿಯಾಗಿತ್ತು‌. ಆದರೆ ಇದೀಗ ಸಿಲಿಕಾನ್ ಸಿಟಿಯಲ್ಲಿ ಪೊಲಿಸರಿಗೆ ಕಂಟ್ರಿಮೇಡ್​ ಪಿಸ್ತೂಲ್​ ಗಳು ಹೆಚ್ಚು ಹೆಚ್ವು ಜಪ್ತಿಯಾಗಿದೆ. ಸದ್ಯ ನಗರದಲ್ಲಿ ಪಿಸ್ತೂಲ್, ಗನ್​​ ಬಳಕೆ ಕೇಸ್​ಗಳು ಹೆಚ್ಚಾಗ್ತಿದ್ದು ಗನ್ ಸಫ್ಲೆಯರ್ಗಳ ಮೇಲೆ ಪೊಲಿಸರು ನಿಗಾ ಇಟ್ಟಿದ್ದಾರೆ..

ಇತ್ತೀಚಿಗೆ ಸುದ್ದಗುಂಟೆಪಾಳ್ಯದಲ್ಲಿ ರಾಜ್ಯ ವಿಧ್ವಂಸಕ ಕೃತ್ಯ ವೆಸಗಲು ಮೆಹಬೂಬ್ ಪಾಷಾ ರೆಡಿಯಾಗಿದ್ದಾಗ ಪೊಲೀಸರು ದಾಳಿ‌ಮಾಡಿ
ಶಂಕಿತ ಉಗ್ರ ಬಳಿ ಮೂರು ಪಿಸ್ತೂಲ್​, 60 ಸಜೀವ ಗುಂಡುಗಳು ಪತ್ತೆ ಮಾಡಿದ್ದರು. ಆದಾದ ನಂತ್ರ‌ಕಳೆದ ಗುರುವಾರ ಬಾಗಲೂರು ಬಳಿ ರೌಡಿ ಬಳಿ ‌1 ಪಿಸ್ತೂಲ್​,7 ಜೀವಂತ ಗುಂಡುಗಳೊಂದಿಗೆ ರೌಡಿ ಫಯಾಜುಲ್ಲಾ ಪೊಲೀಸರ ಬೀಟ್​ ವೇಳೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿದ್ದ.

ಹೀಗಾಗಿ ಉದ್ಯಾನನಗರಿಗೆ ಎಲ್ಲಿಂದ ಬರುತ್ತೆ ಈ ಪಿಸ್ತೂಲ್​ಗಳು. ಅನ್ನೋದ್ರ ಬೆನ್ನತ್ತಿದ ಪೊಲೀಸರಿಗೆ ಪ್ರಾಥಮಿಕ ತನಿಖೆ ವೇಳೆ
ಬಿಹಾರ ಮತ್ತು ಉತ್ತರ ಪ್ರದೇಶದಿಂದ ‌ಕಡಿಮೆ ಬೆಲೆಗೆ ಕಂಟ್ರಿಮೇಡ್​ ಪಿಸ್ತೂಲ್​ಗಳು ರವಾನೆಯಾಗಿ ಇಲ್ಲಿ 25 ರಿಂದ 30 ಸಾವಿರಕ್ಕೆ
ರೌಡಿಶೀಟರ್​ಗಳು, ಪುಂಡರಿಗೆ ಮಾರಾಟ ಮಾಡ್ತಿದ್ದು ಹಿಗಾಗಿ
ದಿನಗೂಲಿ ಕೆಲಸ ಹರಸಿ ಬರುವ ಕಾರ್ಮಿಕರು ಪಿಸ್ತೂಲ್ ಖರೀದಿ ಮಾಡುವ ವಿಚಾರ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದ್ದು ಸದ್ಯ ಪೊಲೀಸರು ಆರೋಪಿಗಳ ಜಾಡು ಹಿಡಿದು ತನೀಖೆ ಮುಂದುವರೆಸಿದ್ದಾರೆ

ಕಳೆದ ಒಂದು ವರ್ಷದಲ್ಲಿ ದಾಖಲಾಗಿದೆ ಹತ್ತಾರು ಕೇಸ್​ಗಳು.

ಇನ್ನು ನಗರ ಪೊಲೀಸರು ಇಲ್ಲಿಯವರೆಗೆ ಆರ್ಮ್ಸ್​ ಬಳಕೆ ಮತ್ತು ಅಕ್ರಮವಾಗಿ ಹೊಂದಿದ 22ಕ್ಕು ಹೆಚ್ಚು ಕೇಸ್​ಗಳು ದಾಖಲು ಮಾಡಿ 13 ಪಿಸ್ತೂಲ್​, 1 ಎಸ್​ಬಿಬಿಎಲ್​, 2 ಏರ್​ಗನ್​ಗಳು,
130 ರೌಂಡ್​ ಜೀವಂತ ಗುಂಡುಗಳು ಸಹ ಪತ್ತೆ ಮಾಡಿ 30ಕ್ಕು ಅಧಿಕ ಆರೋಪಿಗಳನ್ನ ಬಂಧಿಸಿದ್ದಾರೆ. ಸದ್ಯ ಆರ್ಮ್ಸ್​ ಕೇಸ್​ಗಳು ಖಾಕಿಗೆ ಸವಾಲಾಗ್ತಿದ್ದು ಇದರ ಬಗ್ಗೆ ಸಿಸಿಬಿ ಸಂಪೂರ್ಣ ವಾಗಿ‌ನಿಗಾ ಇಟ್ಟಿದ್ದಾರೆ.

Body:KN_BNG_05_GUN_7204498Conclusion:KN_BNG_05_GUN_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.