ETV Bharat / state

ನೈತಿಕ ಮೌಲ್ಯಗಳನ್ನು ಎಚ್ಚರದಿಂದ ಕಾಪಾಡಿಕೊಳ್ಳಬೇಕು: ನೂತನ ಶಾಸಕರಿಗೆ ವೀರಪ್ಪ ಮೊಯ್ಲಿ ಸಲಹೆ

author img

By

Published : Jun 28, 2023, 10:51 PM IST

ನೈತಿಕ ಮೌಲ್ಯಗಳನ್ನು ಎಚ್ಚರದಿಂದ ಕಾಪಾಡಿಕೊಳ್ಳಬೇಕು ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ನೂತನ ಶಾಸಕರಿಗೆ ಆಯೋಜಿಸಿದ್ದ ತರಬೇತಿ ಶಿಬಿರದಲ್ಲಿ ಸಲಹೆ ನೀಡಿದರು.

Moral values should be carefully maintained
ನೈತಿಕ ಮೌಲ್ಯಗಳನ್ನು ಎಚ್ಚರದಿಂದ ಕಾಪಾಡಿಕೊಳ್ಳಬೇಕು: ನೂತನ ಶಾಸಕರಿಗೆ ಮಾಜಿ ಸಿಎಂ ವೀರಪ್ಪ ಮೊಯಿಲಿ ಸಲಹೆ

ಬೆಂಗಳೂರು: ''ಶಾಸಕರಾದವರು ನಿಷ್ಪಕ್ಷಪಾತ ಮನೋಭಾವವನ್ನು ಹೊಂದಿರುವುದಲ್ಲದೇ ನೈತಿಕ ಮೌಲ್ಯಗಳನ್ನು ಎಚ್ಚರದಿಂದ ಕಾಪಾಡಿಕೊಳ್ಳಬೇಕಾಗುತ್ತದೆ'' ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಹೇಳಿದರು. ನೆಲಮಂಗಲದ ಕ್ಷೇಮವನದಲ್ಲಿ 16ನೇ ವಿಧಾನಸಭೆಗೆ ನೂತನವಾಗಿ ಆಯ್ಕೆಯಾಗಿರುವ ಸದಸ್ಯರುಗಳಿಗೆ ಆಯೋಜಿಸಲಾಗಿದ್ದ "ತರಬೇತಿ ಶಿಬಿರ"ದ ಮೂರನೇ ದಿನವಾದ ಇಂದು "ವಿಧಾನ ಮಂಡಲದ ಸಮಿತಿಗಳು, ಅವುಗಳಲ್ಲಿ ಸದಸ್ಯರುಗಳ ಪರಿಣಾಮಕಾರಿ ಭಾಗವಹಿಸುವಿಕೆ ಮತ್ತು ಸಮಿತಿ ಪದ್ಧತಿಯನ್ನು ಬಲಿಷ್ಠಗೊಳಿಸುವಿಕೆ" ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಅವರು, ಪ್ರಜಾಪ್ರಭುತ್ವ ಉಳಿಯಬೇಕಾದಲ್ಲಿ ಅದರ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಮುಖ್ಯಮಂತ್ರಿ ಚಂದ್ರು
ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮುಖ್ಯಮಂತ್ರಿ ಚಂದ್ರು ಮಾತನಾಡಿದರು.

''ವಿಧಾನ ಮಂಡಲದ ಎಲ್ಲಾ ಸಮಿತಿಗಳು ಉತ್ತಮವಾದವುಗಳೇ ಆಗಿರುತ್ತವೆ. ಶಾಸಕರುಗಳಾದ ತಾವುಗಳು ಮಂತ್ರಿಯಾಗಿ ಒಂದೇ ಕ್ಷೇತ್ರಕ್ಕೆ ಸೀಮಿತವಾಗಿ ಕಾರ್ಯನಿರ್ವಹಿಸದೇ ಸಮಿತಿಯಲ್ಲಿ ಅಧ್ಯಯನಶೀಲರಾಗಿ ಕಾರ್ಯನಿರ್ವಹಿಸುವುದರಿಂದ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆಂದು ಹಾಗೂ ವಿವಿಧ ಕ್ಷೇತ್ರಗಳಲ್ಲಿ ತಾವುಗಳು ಶಾಸಕರಾಗಿ ಕಾರ್ಯಾಂಗ ಮತ್ತು ನ್ಯಾಯಾಂಗವು ಸಮನ್ವಯತೆಯಿಂದ ಕಾರ್ಯನಿರ್ವಹಿಸುವಾಗ ವಿಶಾಲವಾದ ಅವಕಾಶಗಳು ಇರುತ್ತದೆ'' ಎಂದರು.

ಮಾದರಿ ಶಾಸಕರಾಗುವಂತೆ ಸಲಹೆ: ''ಸರ್ಕಾರದ ವಿವಿಧ ಇಲಾಖೆಗಳು ಸಮಿತಿಗೆ ಒದಗಿಸುವ ಮಾಹಿತಿಯು ಅತ್ಯಂತ ಪ್ರಮುಖ ದಾಖಲೆಯಾಗಿದ್ದು, ಅವುಗಳನ್ನು ಅಧ್ಯಯನ ಮಾಡುವಂತೆ ಸಲಹೆ ನೀಡಿದರು. ಸಮಯವನ್ನು ವ್ಯರ್ಥ ಮಾಡದೇ ಗ್ರಂಥಾಲಯಕ್ಕೆ ಹೋಗಿ ಅಧ್ಯಯನ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳುವಂತೆ ತಿಳಿ ಹೇಳಿದರು. ಸಾರ್ವಜನಿಕರ ಸೇವಕರಾಗಿರುವ ತಾವುಗಳು ಮಾದರಿ ಶಾಸಕರಾಗಬೇಕೆಂದು ತಿಳಿಸುತ್ತಾ ಆದರ್ಶ ಮತ್ತು ನೆಮ್ಮದಿಯ ಬದಕು ತಮ್ಮದಾಗಲಿ'' ಎಂದು ನುಡಿದರು.

"Cyber Safety and Security for Elected Representatives'' ಎಂಬ ವಿಷಯದ ಬಗ್ಗೆ ಡಾ.ಜಿ.ಅನಂತ ಪ್ರಭು ಅವರು ಮಾತನಾಡಿ, ''ಇಂದಿನ ಆಧುನಿಕ ಯುಗದಲ್ಲಿ ಮೊಬೈಲ್, ಲ್ಯಾಪಟಾಪ್ ಮುಂತಾದ ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆ ಅನಿವಾರ್ಯವಾಗಿದ್ದು, ಅವುಗಳನ್ನು ಅತ್ಯಂತ ಜಾಗ್ರತೆಯಿಂದ ಬಳಸಬೇಕೆಂದು ಪ್ರಾತ್ಯಕ್ಷಿಕೆಯ ಮೂಲಕ ಮಾನ್ಯ ಸದಸ್ಯರಿಗೆ ಮನದಟ್ಟಾಗುವಂತೆ ವಿವರಿಸಿದರು. ದಿನದಿಂದ ದಿನಕ್ಕೆ ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು, ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸುವಾಗ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ತಿಳಿಸಿದರು.

ಯು.ಟಿ. ಖಾದರ್
ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರನ್ನು ಸನ್ಮಾನಿಸಲಾಯಿತು.

ಶಾಸಕಾಂಗ- ಪತ್ರಿಕಾರಂಗದ ಸಂಬಂಧ: ''ಶಾಸಕಾಂಗ- ಪತ್ರಿಕಾರಂಗದ ಸಂಬಂಧಗಳು'' ಎಂಬ ವಿಷಯದ ಬಗ್ಗೆ ಪಿ.ಆರ್.ಎಸ್. ಸಂಸ್ಥೆ, ನವದೆಹಲಿಯ ಪ್ರತಿನಿಧಿಯಾದ ಚಕ್ಷು ರಾಯ್ ಅವರು ಮಾತನಾಡಿ, ಶಾಸನ ರಚನಾ ಕಾರ್ಯದಲ್ಲಿ ಶಾಸಕರ ಸಾಂವಿಧಾನಿಕ ಪಾತ್ರ ಮತ್ತು ಜವಾಬ್ದಾರಿಯ ಬಗ್ಗೆ ವಿವರಿಸಿದರು.
ಸದನವು ಉತ್ತಮವಾಗಿ ನಡೆಯುವಲ್ಲಿ ಶಾಸಕರ ಕೊಡುಗೆಗಳು ಪರಿಣಾಮಕಾರಿಯಾಗಿರುತ್ತದೆ. ಶಾಸಕರು ಮಾಧ್ಯಮದವರೊಂದಿಗೆ ರಚನಾತ್ಮಕ ಸಂಬಂಧವನ್ನು ಹೊಂದಿರಬೇಕೆಂದು ತಿಳಿಸಿದರು.
ಸದಸ್ಯರುಗಳು ಸದನದ ಕಾರ್ಯಕಲಾಪಗಳಲ್ಲಿ ಭಾಗವಹಿಸುವಿಕೆಯು ರಾಜ್ಯದ ಸಮಗ್ರ ಅಭಿವೃದ್ಧಿಯ ಮೇಲೆ ಪರಿಣಾಮ ಬೀರುವುದರಿಂದ ಶಾಸಕರು ಅತ್ಯಂತ ಜಾಗರೂಕತೆಯಿಂದ ಮಾತನಾಡಬೇಕು ಎಂದು ಸಲಹೆ ನೀಡಿದರು.

ಶಾಸನ ಸಭೆಯಲ್ಲಿ ಕರ್ತವ್ಯದ ಹಾಸ್ಯಭರಿತ ನಿರ್ವಹಣೆ: ''ಶಾಸನ ಸಭೆಯಲ್ಲಿ ಕರ್ತವ್ಯದ ಹಾಸ್ಯಭರಿತ ನಿರ್ವಹಣೆ" ಎಂಬ ವಿಷಯದ ಬಗ್ಗೆ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಹಾಸ್ಯದ ಮೊತ್ತವನ್ನು ವಿವರಿಸಿದರು. ಸದಸ್ಯರು ಸಮಯಪ್ರಜ್ಞೆ, ಸಂದರ್ಭ ಪ್ರಜ್ಞೆಯಿಂದ ಹಾಸ್ಯ ಮಿಶ್ರಿತವಾಗಿ ಸದನದ ಚರ್ಚೆಯಲ್ಲಿ ಪಾಲ್ಗೊಳ್ಳಬೇಕು ಸಲಹೆ ನೀಡಿದರು. ಸದಸ್ಯರು ತಮ್ಮ ಉತ್ತಮ ನಡವಳಿಕೆ, ನಗು ಮುಖ ಮತ್ತು ಶುದ್ಧ ಭಾಷೆಯನ್ನು ಬಳಸುವುದರ ಮೂಲಕ ಜನಮನ್ನಣೆ ಗಳಿಸಲು ಸಾಧ್ಯವೆಂದು ತಿಳಿಸಿದರು.

ಸದಸ್ಯರು ಮಾತನಾಡುವಾಗ ಭಾಷೆಯ ಮೇಲೆ ಹಿಡಿತವಿಟ್ಟುಕೊಂಡು ಹಿರಿಯರಿಗೆ ಗೌರವ ನೀಡುತ್ತಾ ಮಾತನಾಡಬೇಕೆಂದು ಮತ್ತು ಕನ್ನಡ ಭಾಷೆಯನ್ನು ಎಚ್ಚರಿಕೆಯಿಂದ ಬಳಸುವಂತೆ ಸಲಹೆ ನೀಡಿದರು. ಸಮಯೋಚಿತವಾದ ಹಾಸ್ಯದಿಂದ ಎಂತಹ ಗಂಭೀರ ಪರಿಸ್ಥಿತಿಯನ್ನು ತಿಳಿಗೊಳಿಸಬಹುದೆಂದು ಹಲವು ಉದಾಹರಣೆಗಳೊಂದಿಗೆ ಶಾಸಕರಿಗೆ ಮನದಟ್ಟು ಮಾಡಿಕೊಟ್ಟರು. ಇದಾದ ನಂತರ, ಮೂರು ದಿನಗಳಿಂದ ತರಬೇತಿ ಶಿಬಿರದಲ್ಲಿ ಪಾಲ್ಗೊಂಡ ಸದಸ್ಯರು ತಮ್ಮ ಅನುಭವ, ಅನಿಸಿಕೆಗಳನ್ನು ಹಂಚಿಕೊಂಡರು. ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರನ್ನು ನೂತನ ಶಾಸಕರು ಸನ್ಮಾನಿಸಿದರು.

ಇದನ್ನೂ ಓದಿ: Bengaluru-Mysuru Expressway: ಜುಲೈ 1ರಿಂದ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ವೇಯಲ್ಲಿ 2ನೇ ಟೋಲ್ ಆರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.