ETV Bharat / state

ಮೂರು ತಿಂಗಳಿನಿಂದ ಮಾಸಿಕ 10 ಸಾವಿರ ಕೋಟಿ ದಾಟಿದ ಜಿಎಸ್‌ಟಿ ಸಂಗ್ರಹ: ಸಿಎಂ ಬೊಮ್ಮಾಯಿ ಸಂತಸ

10 ಸಾವಿರ ಕೋಟಿ ರೂಪಾಯಿ ದಾಟಿದ ರಾಜ್ಯದ ಜಿಎಸ್​ಟಿ ಮಾಸಿಕ ಸಂಗ್ರಹ- ಸಿಎಂ ಬೊಮ್ಮಾಯಿ ಟ್ವೀಟ್ ಮೂಲಕ ಮಾಹಿತಿ- ಜಿಎಸ್‌ಟಿ ಸಂಗ್ರಹ ಶೇ.30ರಷ್ಟು ಹೆಚ್ಚಳ

CM Bommai
ಸಿಎಂ ಬೊಮ್ಮಾಯಿ ಸಂತಸ
author img

By

Published : Jan 4, 2023, 7:41 PM IST

ಬೆಂಗಳೂರು: ದೇಶಕ್ಕೆ ಕರ್ನಾಟಕದ ಆರ್ಥಿಕ ಕೊಡುಗೆ ಹೆಚ್ಚಾಗಿದೆ. ರಾಜ್ಯದ ಜಿಎಸ್‌ಟಿ ಸಂಗ್ರಹ ಮೂರು ತಿಂಗಳಿನಿಂದ ಸತತವಾಗಿ 10 ಸಾವಿರ ಕೋಟಿ ರೂಪಾಯಿ ದಾಟಿದೆ ಎಂಬ ಮಾಹಿತಿಯನ್ನು ಮುಖ್ಯಮಂತ್ರಿ ಬಸವರಾಜ ಅವರು ಬೊಮ್ಮಾಯಿ ಟ್ವೀಟ್ ಮೂಲಕ ಹಂಚಿಕೊಂಡಿದ್ದು, ರಾಜ್ಯದ ತೆರಿಗೆ ಸಂಗ್ರಹದಲ್ಲಿನ ಪ್ರಗತಿಯನ್ನು ಸಮರ್ಥಿಸಿಕೊಂಡಿದ್ದಾರೆ. ಕರ್ನಾಟಕದ ಮಾಸಿಕ ಜಿಎಸ್‌ಟಿ ಸಂಗ್ರಹವು ಸತತವಾಗಿ 3 ತಿಂಗಳುಗಳಿಂದ 10 ಸಾವಿರ ಕೋಟಿ ರೂಪಾಯಿಗಳನ್ನು ದಾಟಿದೆ.ಸದ್ಯ ನಾವು ಜಿಎಸ್‌ಟಿ ಸಂಗ್ರಹದಲ್ಲಿ ಮಹಾರಾಷ್ಟ್ರಕ್ಕಿಂತ ಸ್ವಲ್ಪ ಹಿಂದೆ ಇದ್ದೇವೆ. ಇದು ನಮ್ಮ ರಾಜ್ಯದ ತೆರಿಗೆ ಸಂಗ್ರಹ ವಿಚಾರದಲ್ಲಿ ಸಕಾರಾತ್ಮಕ ಬೆಳವಣಿಗೆ. ನಾವು ಉತ್ತಮ ಬೆಳವಣಿಗೆಯ ಪಥದಲ್ಲಿದ್ದೇವೆ ಎನ್ನುವುದಕ್ಕೆ ನಿದರ್ಶನ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

ಈ ಹಿಂದೆ ಇದ್ದ ಕೋವಿಡ್-ಪ್ರೇರಿತ ಮಂದಗತಿಯ ಋಣಾತ್ಮಕ ಪ್ರಭಾವವನ್ನು ಮೀರಿದ್ದೇವೆ ಎಂಬುದನ್ನು ನಮ್ಮ ಜಿಎಸ್‌ಟಿ ಸಂಗ್ರಹ ಕಳೆದ ಮೂರು ತಿಂಗಳಿನ ಸಂಗ್ರಹದ ಪ್ರಮಾಣವೇ ಸಾಬೀತುಪಡಿಸುತ್ತದೆ. ಅಧಿಕ ಜಿಎಸ್‌ಟಿ ಸಂಗ್ರಹದ ಮೂಲಕ ರಾಷ್ಟ್ರೀಯ ಆರ್ಥಿಕತೆಯನ್ನು ಉತ್ತೇಜಿಸುತ್ತಿರುವುದಕ್ಕೆ ನಮಗೆ ಹೆಮ್ಮೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಸವನ್ನು ಹಂಚಿಕೊಂಡಿದ್ದಾರೆ.

  • Karnataka's monthly GST collection has crossed Rs 10k crore for 3 months in a row, just behind Maharashtra. The positive growth proves we are on the trajectory of good growth & well past the negative impact of the Covid-induced slowdown. Proud to be boosting national economy. pic.twitter.com/flkQci6nlQ

    — Basavaraj S Bommai (@BSBommai) January 4, 2023 " class="align-text-top noRightClick twitterSection" data=" ">

ಕೋವಿಡ್ ಬಳಿಕ ಜಿಎಸ್‍ಟಿ ಸಂಗ್ರಹ ಶೇ 30 ರಷ್ಟು ಹೆಚ್ಚಳ: ಕೋವಿಡ್ ಅವಧಿ ನಂತರ ರಾಜ್ಯದ ಜಿಎಸ್‍ಟಿ ಸಂಗ್ರಹ ಶೇ 30 ರಷ್ಟು ಹೆಚ್ಚಳವಾಗಿದೆ. 2022-23ನೇ ಹಣಕಾಸಿನ ಮಧ್ಯವಾರ್ಷಿಕ ಪರಿಶೀಲನಾ ವರದಿಯನ್ನು ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿದ್ದ ವರದಿಯಲ್ಲಿ ಇದು ಉಲ್ಲೇಖವಾಗಿದೆ. ಕೋವಿಡ್ ಅವಧಿಯಲ್ಲಿ (2021-22) ಕರ್ನಾಟಕ ರಾಜ್ಯದ ಜಿಎಸ್‍ಟಿ ಸಂಗ್ರಹ ಶೇ.10 ರಷ್ಟು ಹೆಚ್ಚಾಗಿತ್ತು. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 2022-23ರ ಪ್ರಥಮ ಅರ್ಧ ವಾರ್ಷಿಕದಲ್ಲಿ ಶೇ.30 ರಷ್ಟು ಜಿಎಸ್‍ಟಿ ಸಂಗ್ರಹ ಏರಿಕೆಯಾಗಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ.

2022-23ರ ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕದಲ್ಲೇ 21,480 ಕೋಟಿ ರೂ. ವಿದೇಶಿ ನೇರ ಬಂಡವಾಳ ಹರಿದುಬಂದಿದೆ. 2022ರ ಏಪ್ರಿಲ್‍ನಲ್ಲಿದ್ದ ಶೇ.6.39 ರಷ್ಟಿದ್ದ ಹಣದುಬ್ಬರ 2022ರ ಸೆಪ್ಟೆಂಬರ್ ವೇಳೆಗೆ 5.81ಕ್ಕೆ ಇಳಿಕೆಯಾಗಿದೆ. ಈ ಅವಧಿಯಲ್ಲಿ ದೇಶದ ಹಣದುಬ್ಬರ 7.4 ರಷ್ಟಿತ್ತು ಎಂಬ ಅಂಶಗಳು ವರದಿಯಲ್ಲಿವೆ. ಪ್ರಸಕ್ತ ಸಾಲಿನಲ್ಲಿ ರಾಜ್ಯ ಸರ್ಕಾರವು 2.65 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದು, ಬಜೆಟ್‍ನಲ್ಲಿ ಜಿಎಸ್‍ಡಿಪಿಯನ್ನು ಪ್ರಸಕ್ತ ಬೆಲೆಗಳಲ್ಲಿ 18,85,750 ಕೋಟಿ ರೂ. ಎಂದು ಘೋಷಿಸಿತ್ತು.

ಕೇಂದ್ರ ಸರ್ಕಾರ 2022-23ರಲ್ಲಿ ರಾಜ್ಯದ ಜಿಎಸ್‍ಡಿಪಿ 21,81,217 ಕೋಟಿ ರೂ. ಎಂದು ಹೇಳಿದೆ. ಅದರಂತೆ ಜಿಎಸ್‍ಡಿಪಿ ಪರಿಷ್ಕರಿಸಿದ್ದು, ಜಿಎಸ್‍ಡಿಪಿಯ ಶೇ.2.82 ರಷ್ಟು ವಿತ್ತೀಯ ಹಾಗೂ ಶೇ.0.67 ರಷ್ಟು ರಾಜಸ್ವ ಕೊರತೆ ಉಂಟಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ರಾಜ್ಯವಾರು ಜಿಎಸ್​ಟಿ ಸಂಗ್ರಹವನ್ನು ನೋಡುವುದಾದರೆ ಮಹರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ ನಂತರದ ಸ್ಥಾನದಲ್ಲಿ ಕರ್ನಾಟಕ ಹೆಚ್ಚಿನ ಜಿಎಸ್​ಟಿ ಸಂಗ್ರಹ ಮಾಡುತ್ತಿರುವ ರಾಜ್ಯವಾಗಿ ಹೊರಹೊಮ್ಮಿದೆ.

ಇದನ್ನೂಓದಿ:1998ರ ರಸ್ತೆ ಕಾಮಗಾರಿ ಯೋಜನೆ: 5 ಕೋಟಿ ಬಾಕಿ ಹಣಕ್ಕೆ 300 ಕೋಟಿ ಬಡ್ಡಿ ಪಾವತಿಸಲು ಸರ್ಕಾರಕ್ಕೆ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.