ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ ನೈರುತ್ಯ ಮಾನ್ಸೂನ್ ದುರ್ಬಲವಾಗಿದ್ದು, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಕೆಲವು ಭಾಗಗಳಲ್ಲಿ ಮಾತ್ರ ಮಳೆಯಾಗಿದೆ. ಕರಾವಳಿ ಜಿಲ್ಲೆಗಳ ಬಹುತೇಕ ಸ್ಥಳಗಳಲ್ಲಿ ವ್ಯಾಪಕ ಮಳೆ ಮುಂದುವರೆದಿದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಕ ನಿರ್ದೇಶಕ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.
ಆಗುಂಬೆಯಲ್ಲಿ 8 ಸೆಂ.ಮೀ., ತಾಳಗುಪ್ಪದಲ್ಲಿ 6 ಸೆಂ.ಮೀ., ಹೊನ್ನಾವರದಲ್ಲಿ 5 ಸೆಂ.ಮೀ., ತೀರ್ಥಹಳ್ಳಿಯಲ್ಲಿ 4 ಸೆಂ.ಮೀ., ದಕ್ಷಿಣ ಕನ್ನಡದ ಮಣಿ, ಕಾರ್ಕಳ, ಕೊಲ್ಲೂರು, ಉತ್ತರ ಕನ್ನಡದ ಸಿದ್ದಾಪುರ, ಬೆಳಗಾವಿಯ ಲೋಂಡ, ಲಿಂಗನಮಕ್ಕಿ, ಶೃಂಗೇರಿ, ಕೊಟ್ಟಿಗೆಹಾರದಲ್ಲಿ ತಲಾ 3 ಸೆಂ.ಮೀ. ಮೂಡಬಿದ್ರೆ, ಬಂಟ್ವಾಳ, ಸುಬ್ರಮಣ್ಯ, ಕುಂದಾಪುರ, ಉಡುಪಿಯ ಸಿದ್ದಾಪುರ, ಭಟ್ಕಳ, ಕದ್ರ, ಉತ್ತರ ಕನ್ನಡದ ಯಲ್ಲಾಪುರ, ಬೆಳವಾಡಿ, ತ್ಯಾಗರ್ತಿ, ಜಯಪುರ, ಸಕಲೇಶಪುರದಲ್ಲಿ ತಲಾ 2 ಸೆಂ.ಮೀ. ಮಳೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ:ಕೊಡಗಿನಲ್ಲಿ ಮಳೆಗಾಲದಲ್ಲೇ ಕುಡಿಯುವ ನೀರಿಗೆ ಪರದಾಟ