ETV Bharat / state

ತನಿಖೆಗೆ ಅಸಹಕಾರ ಆರೋಪ: ಲೋಕೋಪಯೋಗಿ ಇಲಾಖೆ ಕಿರಿಯ ಅಭಿಯಂತರ ಅರೆಸ್ಟ್

author img

By

Published : Jan 5, 2023, 10:07 PM IST

Updated : Jan 5, 2023, 10:52 PM IST

ದಾಖಲಾತಿ ಇಲ್ಲದ 10.50 ಲಕ್ಷ ಹಣ ಪತ್ತೆ ಪ್ರಕರಣ- ಪೊಲೀಸರ ತನಿಖೆಗೆ ಸಹಕರಿಸದ ಆರೋಪ- ಕಿರಿಯ ಇಂಜಿನಿಯರ್​ ಅರೆಸ್ಟ್​

money found in vidhansoudha an Engineer arrest by police in bengaluru
ತನಿಖೆಗೆ ಅಸಹಕಾರ ಆರೋಪ: ಲೋಕೋಪಯೋಗಿ ಇಲಾಖೆ ಕಿರಿಯ ಅಭಿಯಂತರ ಅರೆಸ್ಟ್
ತನಿಖೆಗೆ ಅಸಹಕಾರ ಆರೋಪ: ಲೋಕೋಪಯೋಗಿ ಇಲಾಖೆ ಕಿರಿಯ ಅಭಿಯಂತರ ಅರೆಸ್ಟ್

ಬೆಂಗಳೂರು: ಲೋಕೋಪಯೋಗಿ ಇಲಾಖೆಯ ಕಿರಿಯ ಅಭಿಯಂತರ ಜಗದೀಶ್ ಎಂಬುವರ ಬ್ಯಾಗ್​ನಲ್ಲಿ‌ ದೊರೆತ ದಾಖಲಾತಿ ಇಲ್ಲದ 10.50 ಲಕ್ಷ ಹಣ‌ ಪತ್ತೆ ಸಂಬಂಧ‌ ಪ್ರಕರಣ ದಾಖಲಿಸಿಕೊಂಡಿದ್ದ ವಿಧಾನಸೌಧ ಪೊಲೀಸರು ತನಿಖೆಗೆ‌ ಸಹಕರಿಸದ ಆರೋಪದಡಿ ಸರ್ಕಾರಿ ನೌಕರನನ್ನು ಬಂಧಿಸಿದ್ದಾರೆ.

ಮಂಡ್ಯ ಮೂಲದ‌ ಜಗದೀಶ್, ಲೋಕೋಪಯೋಗಿ ಇಲಾಖೆಯಲ್ಲಿ ಕೆಲಸ‌ ಮಾಡುತ್ತಿದ್ದು ಬುಧವಾರ ತಮ್ಮ ಕಾರಿನ ಮುಖಾಂತರ ಹಣವಿರುವ ಬ್ಯಾಗ್ ಸಮೇತ ವಿಕಾಸಸೌಧಕ್ಕೆ ಬಂದಿದ್ದರು. ವೆಸ್ಟ್ ಗೇಟ್ ಬಳಿ ಇವರನ್ನು ತಡೆದು‌ ಭದ್ರತಾ ಸಿಬ್ಬಂದಿ ಪರಿಶೀಲಿಸಿದಾಗ ದಾಖಲಾತಿವಿಲ್ಲದ 10.50 ಲಕ್ಷ ಹಣ ಪತ್ತೆಯಾಗಿತ್ತು. ಹಣದ ಮೂಲದ ಬಗ್ಗೆ ನಿಖರ ಮಾಹಿತಿ ನೀಡದ ಕಾರಣ ವಿಕಾಸಸೌಧ ಭದ್ರತಾ ವಿಭಾಗದ‌ ಸಿಬ್ಬಂದಿ ವಿಧಾನಸೌಧ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ದೂರು‌ ಆಧರಿಸಿ ಪ್ರಕರಣ ದಾಖಲಿಸಿಕೊಂಡು ಇಂದು ವಿಚಾರಣೆಗೆ ಬರುವಂತೆ‌ ನೋಟಿಸ್ ಜಾರಿ ಮಾಡಿದ್ದರು.

ಪೊಲೀಸರ ಸೂಚನೆಯಂತೆ ವಕೀಲರೊಂದಿಗೆ ಠಾಣೆಗೆ ಬಂದು ಹಾಜರಾಗಿದ್ದ ಜಗದೀಶ್ ಅವರನ್ನು ಮೂರು ಗಂಟೆಗಳ ಕಾಲ ಪೊಲೀಸರು ವಿಚಾರಣೆ‌‌ ನಡೆಸಿದರು. ವಿಚಾರಣೆ ವೇಳೆ‌ ಹಣದ ಮೂಲದ ಯಾವುದೇ‌ ಸಮಂಜಸವಾದ ಉತ್ತರ ನೀಡಿಲ್ಲ. ಯಾವುದೇ ದಾಖಲಾತಿ ಒದಗಿಸಿಲ್ಲ. ಯಾರಿಗೆ ಹಣ ಕೊಡಬೇಕು‌? ಎಲ್ಲಿಂದ ಹಣ ಬಂದಿದೆ ಎಂಬುದರ ಬಗ್ಗೆ ಅನುಮಾನಾಸ್ಪದವಾಗಿ ಹೇಳಿಕೆ ನೀಡಿದ್ದಾರೆ. ಪೊಲೀಸರ ತನಿಖೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ‌ ಕರ್ನಾಟಕ ಪೊಲೀಸ್ ಕಾಯ್ದೆಯ 98, ಸಿಆರ್ ಪಿಸಿ ಕಾಯ್ದೆ 41 ಡಿ ಹಾಗೂ 102ರಡಿ ಬಂಧಿಸಲಾಗಿದೆ. ಶುಕ್ರವಾರ ಕೋರ್ಟ್ ಗೆ ಹಾಜರುಪಡಿಸಿ ಪೊಲೀಸ್ ಕಸ್ಟಡಿ ಪಡೆದು ವಿಚಾರಣೆ ಮುಂದುವರೆಸಲಾಗುವುದು ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ ಗೌಡ ಅವರು ತಿಳಿಸಿದ್ದಾರೆ.

ಬುಧವಾರ ಸಂಜೆ‌ ಆಗಿದ್ದೇನು?: ಆರೋಪಿ ಜಗದೀಶ್ ಅವರನ್ನು ಬುಧವಾರ ವಿಧಾನಸೌಧ ಬಳಿ ಭದ್ರತಾ ತಪಾಸಣೆ ನಡೆಸಿದಾಗ ಅವರು ತಂದಿದ್ದ ಬ್ಯಾಗ್ ಪರಿಶೀಲನೆ ವೇಳೆ ಲಕ್ಷಾಂತರ ರೂಪಾಯಿ ಹಣ ಪತ್ತೆಯಾಗಿತ್ತು. ಈ ಬಗ್ಗೆ ಜಗದೀಶ್ ಅವರನ್ನು ಪ್ರಶ್ನಿಸಿದ ಪೊಲೀಸರಿಗೆ ಸಮಂಜಸವಾದ ಉತ್ತರ ನೀಡಿಲ್ಲ. ಅಲ್ಲದೆ ಸೂಕ್ತ ದಾಖಲಾತಿ ಇಲ್ಲದಿರುವುದನ್ನು ಖಚಿತಪಡಿಸಿಕೊಂಡ ಸಿಬ್ಬಂದಿ ವಿಧಾನಸೌಧ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಹಣದ ಬ್ಯಾಗ್ ಜೊತೆ ಜಗದೀಶ್ ನನ್ನ ವಶಕ್ಕೆ ಪಡೆದುಕೊಂಡ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದರು ಮಂಡ್ಯಕ್ಕೆ ತೆಗೆದುಕೊಂಡು ಹೋಗಲು ತಂದಿದ್ದೇನೆ. ಕೆಲವು ಬಿಲ್ ಕ್ಲಿಯರ್ ಮಾಡಿಸಿಕೊಳ್ಳಲು ಹಣ ತೆಗೆದುಕೊಂಡು ಬಂದಿರುವುದಾಗಿ ಜಗದೀಶ್ ಹೇಳಿಕ ನೀಡಿರುವುದಾಗಿ ತಿಳಿದುಬಂದಿತ್ತು. ಜಗದೀಶ್ ಹೇಳಿಕೆ ಪರಾಮರ್ಶೆ ನಡೆಸಿದ ಪೊಲೀಸರಿಗೆ ಪತ್ತೆಯಾಗಿರುವ ಹಣಕ್ಕೆ ಯಾವುದೇ ಬಿಲ್ ಇಲ್ಲದಿರವುದನ್ನು ಖಚಿತಪಡಿಸಿಕೊಂಡು ಹಣ ಜಪ್ತಿ ಮಾಡಿದ್ದರು.

ಸಿಎಂ ಖಡಕ್​ ಹೇಳಿಕೆ.. ಈ ಕುರಿತು ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಈ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಬಂಧಿಸುತ್ತೇವೆ ಮತ್ತು ಸೂಕ್ತ ರೀತಿಯಲ್ಲಿ ತನಿಖೆ ನಡೆಸುತ್ತೇವೆ. ಪ್ರತಿಪಕ್ಷದವರು ಆರೋಪ ಮಾಡುವ ಮುನ್ನ ತಮ್ಮ ಅಧಿಕಾರಾವಧಿಯಲ್ಲಿ ಏನಾಗುತ್ತು ಎಂಬುದನ್ನು ಹಿಂದಿರುಗಿ ನೋಡಿಕೊಳ್ಳಲಿ. ಮಾಜಿ ಸಚಿವ ಪುಟ್ಟರಂಗ ಶೆಟ್ಟಿ ಅವರಿಗೆ ಅಂದು ವ್ಯಕ್ತಿಯೋರ್ವ 25 ಲಕ್ಷ ರೂಪಾಯಿ ಕೊಡಲು ವಿಧಾನಸೌಧ ಆವರಣಕ್ಕೆ ಬಂದಿದ್ದ ಆ ಪ್ರಕರಣ ಏನಾಯಿತು ಅನ್ನೋದರ ಬಗ್ಗೆ ಉತ್ತರಿಸಲಿ. ನಮ್ಮ ಪೊಲೀಸರು ಆರೋಪಿಯನ್ನು ಗೇಟ್​ನಲ್ಲೇ ತಡೆದು ನಿಲ್ಲಿಸಿ ದುಡ್ಡಿನ ಸಹಿತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ಹೇಳಿದ್ದರು.

ಲೋಕೋಪಯೋಗಿ ಇಲಾಖೆ ಸಚಿವ ಸಿ ಸಿ ಪಾಟೀಲ್​ ಅವರು ಪ್ರತಿಕ್ರಿಯಿಸಿ, ಈ ಹಣವನ್ನು ತಮಗೆ ಕೊಡಲು ಆ ಇಂಜಿನಿಯರ್​ ಬಂದಿದ್ದರು ಎಂಬ ಆರೋಪವನ್ನು ತಳ್ಳಿಹಾಕಿದ್ದಾರೆ. ಈ ಬಗ್ಗೆ ಪೊಲೀಸರು ಸೂಕ್ತ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ ಸ್ಫೋಟ ಪ್ರಕರಣ: 6 ಕಡೆ ಎನ್​ಐಎ ದಾಳಿ, ಇಬ್ಬರು ಐಸಿಸ್ ಸಕ್ರಿಯ ಸದಸ್ಯರ ಬಂಧನ

Last Updated : Jan 5, 2023, 10:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.