ಬೆಂಗಳೂರು: ವಿಧಾನಸೌಧ ಆವರಣದಲ್ಲಿ ಕಂತೆ ಕಂತೆ ಹಣ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ ಅಧಿಕಾರಿಗಳು ಸಂದಿಗ್ಧತೆಯಲ್ಲಿ ಸಿಲುಕಿದ್ದಾರೆ.
ವಿಧಾನಸೌಧದಲ್ಲಿ ಪತ್ತೆಯಾದ ಹಣ ಸಚಿವ ಪುಟ್ಟರಂಗಶೆಟ್ಟಿ ಕಚೇರಿಯವರಿಗೆ ಸೇರಿದ್ದು ಎಂದು ತನಿಖೆ ವೇಳೆ ತಿಳಿದುಬಂದಿತ್ತು. ಆದರೆ ಸಚಿವರು ಮಾತ್ರ ತನಗೂ ಅದಕ್ಕೂ ಸಂಬಂಧವೇ ಇಲ್ಲ ಎಂದು ವಾದಿಸುತ್ತಿದ್ದಾರೆ. ಪ್ರಕರಣಕ್ಕೆ ಹೇಗಾದರೂ ತಾರ್ಕಿಕ ಅಂತ್ಯ ಕೊಡಬೇಕೆಂದು ಕಾರ್ಯಾಚರಣೆಗಿಳಿದ ಎಸಿಬಿಗೆ ಇದರಿಂದ ತಲೆನೋವು ಶುರುವಾಗಿದೆ ಎನ್ನಲಾಗ್ತಿದೆ.
ವಿಧಾನಸೌಧಕ್ಕೆ ಅಷ್ಟೊಂದು ಹಣ ತಂದಿದ್ದ ಆರೋಪಿ ಮೋಹನ್ ಅನ್ನ ಅಂದೇ ಬಂಧಿಲಾಗಿತ್ತು. ತನಿಖೆ ವೇಳೆ ಆರೋಪಿ ಸಚಿವ ಪುಟ್ಟರಂಗಶೆಟ್ಟಿ ಹೆಸರು ಹೇಳಿದ್ದ. ಈ ಕಾರಣದಿಂದ ಎಸಿಬಿ ಅಧಿಕಾರಿಗಳು ಪುಟ್ಟರಂಗಶೆಟ್ಟಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೊಟಿಸ್ ನೀಡಿದ್ದರು. ಆದರೆ ಸಚಿವರು ಇದನ್ನು ಸಾರಾಸಗಟಾಗಿ ತಳ್ಳಿಹಾಕಿದ್ದರು. ತನಿಖೆ ವೇಳೆ ಆ ಹಣ ಪುಟ್ಟರಂಗಶೆಟ್ಟಿ ಕಚೇರಿಯವರಿಗೆ ಸೇರಿದ್ದು ಎಂಬುದು ಬಯಾಲಾಗಿತ್ತು. ಇಷ್ಟಾದರೂ ಸಚಿವರು ಇದ್ಯಾವುದನ್ನೂ ಒಪ್ಪುತ್ತಿಲ್ಲ.
ಮತ್ತೊಂದೆಡೆ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಬೇಕಾದರೂ ಎಸಿಬಿಗೆ ಎಲ್ಲವೂ ಸ್ಪಷ್ಟವಾಗಬೇಕು. ಆದರೆ ಯಾವುದೇ ರೀತಿಯಲ್ಲೂ ತಾರ್ಕಿಕ ಸ್ಪಷ್ಟನೆ ಎಂಬುದು ಇಲ್ಲವಾಗಿದೆ ಎಂದು ಎಸಿಬಿ ಉನ್ನತ ಮೂಲಗಳು ತಿಳಿಸಿವೆ.