ETV Bharat / state

ಸಿಎಂ ಮೊದಲು ಬರ ಅಧ್ಯಯನ ನಡೆಸಲಿ, ಆ ಮೇಲೆ ಏನಾದ್ರೂ ಮಾಡಿಕೊಳ್ಳಲಿ - ವಿ.ಸೋಮಣ್ಣ - kannada news

ಒಂದು ವರ್ಷ ಆದ ಮೇಲೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಜ್ಞಾನೋದಯ ಆಗಿದೆ. ಮೊದಲು ಬರ ಪೀಡಿತ ಪ್ರದೇಶಗಳಿಗೆ ಪ್ರವಾಸ ಮಾಡಲಿ, ಆ ನಂತರ ಅವರು ಗ್ರಾಮ ವಾಸ್ತವ್ಯವಾದರೂ ಮಾಡಲಿ ಏನನ್ನಾದರೂ ಮಾಡಿಕೊಳ್ಳಲಿ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ವಿ.ಸೋಮಣ್ಣ
author img

By

Published : Jun 3, 2019, 8:49 PM IST

ಬೆಂಗಳೂರು: ಒಂದು ವರ್ಷ ಆದ ಮೇಲೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಜ್ಞಾನೋದಯ ಆಗಿದೆ. ಮೊದಲು ಬರ ಪೀಡಿತ ಪ್ರದೇಶಗಳಿಗೆ ಪ್ರವಾಸ ಮಾಡಲಿ, ಆ ನಂತರ ಅವರು ಗ್ರಾಮ ವಾಸ್ತವ್ಯವಾದರೂ ಮಾಡಲಿ, ಏನನ್ನಾದರೂ ಮಾಡಿಕೊಳ್ಳಲಿ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿ ನಿವಾಸಕ್ಕೆ ಕಾವೇರಿಪುರ ವಾರ್ಡ್​ನ ನೂತನ ಕಾರ್ಪೊರೇಟರ್ ಪಲ್ಲವಿ ಚನ್ನಪ್ಪ ಭೇಟಿ ನೀಡಿದರು. ಪಲ್ಲವಿ ಅವರಿಗೆ ಮಾಜಿ ಸಚಿವ ವಿ.ಸೋಮಣ್ಣ, ಮಾಜಿ ಮೇಯರ್ ಶಾಂತಕುಮಾರಿ ಸಾಥ್ ನೀಡಿದರು.

ಸಿಎಂ ಮೊದಲು ಬರ ಅಧ್ಯಯನ ನಡೆಸಲಿ : ವಿ.ಸೋಮಣ್ಣ

ಈ ವೇಳೆ ಮಾತನಾಡಿದ ವಿ. ಸೋಮಣ್ಣ, ಸಿಎಂಗೆ ಹೇಗೆ ಜ್ಞಾನೋದಯ ಆಯ್ತೋ ಗೊತ್ತಿಲ್ಲ‌. ತಾಜ್ ವೆಸ್ಟೆಂಡ್ ಹೋಟೆಲ್ ವಾಸ್ತವ್ಯ ತೊರೆಯುವ ಮೂಲಕ ತೆರಿಗೆದಾರರ ಹಣವನ್ನು ತಾರಾ ಹೋಟೆಲ್‌ಗೆ ಕಟ್ಟೋದನ್ನು ನಿಲ್ಲಿಸುತ್ತೇನೆ ಅಂತಾ ಹೇಳಿದ್ದಾರೆ. ಇದು ಸ್ವಾಗತಾರ್ಹ ಎಂದರು. ಸಿಎಂ ಗ್ರಾಮ ವಾಸ್ತವ್ಯ ಮುಂದೂಡಿ ಮೊದಲು ಬರ ಪೀಡಿತ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಹಾಗೂ ಕಾರ್ಯದರ್ಶಿಗಳನ್ನು ಕಳಿಸಿ ವಾಸ್ತವಾಂಶ ಅರಿಯಬೇಕು. ಆನಂತರ ಏನು ಬೇಕಾದರೂ ಮಾಡಲಿ‌ ಎಂದ ಸೋಮಣ್ಣ, ಸಿಎಂ ಆರೋಗ್ಯ ಚೆನ್ನಾಗಿರಲಿ, ಅವರೂ ಚೆನ್ನಾಗಿರಲಿ ಎಂದು ಹೇಳಿದರು.

Intro:ಬೆಂಗಳೂರು: ಒಂದು ವರ್ಷ ಆದ ಮೇಲೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಜ್ಞಾನೋದಯ ಆಗಿದೆ.ಮೊದಲು ಬರ ಪೀಡಿತ ಪ್ರದೇಶಗಳಿಗೆ ಪ್ರವಾಸ ಮಾಡಲಿ,ಆ ನಂತರ ಅವರು ಗ್ರಾಮ ವಾಸ್ತವ್ಯವಾದರೂ ಮಾಡಲಿ ಏನನ್ನಾದರೂ ಮಾಡಿಕೊಳ್ಳಲಿ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.Body:

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿ ನಿವಾಸಕ್ಕೆ ಕಾವೇರಿಪುರ ವಾರ್ಡ್ ನ ನೂತನ ಕಾರ್ಪೊರೇಟರ್ ಪಲ್ಲವಿ ಚನ್ನಪ್ಪ ಭೇಟಿ ನೀಡಿದರು. ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಗೆದ್ದ ನಂತರ‌ ಮೊದಲ ಬಾರಿಗೆ ಭೇಟಿ ನೀಡಿ ಯಡಿಯೂರಪ್ಪಗೆ ಅಭಿನಂದನೆ ಸಲ್ಲಿಸಿದರು. ಪಲ್ಲವಿ ಅವರಿಗೆ ಮಾಜಿ ಸಚಿವ ವಿ.ಸೋಮಣ್ಣ, ಮಾಜಿ ಮೇಯರ್ ಶಾಂತಕುಮಾರಿ ಸಾತ್ ನೀಡಿದರು.

ನಂತರ ಮಾತನಾಡಿದ ಸೋಮಣ್ಣ,ಸಿಎಂಗೆ ಹೇಗೆ ಜ್ಞಾನೋದಯ ಆಯ್ತೋ ಗೊತ್ತಿಲ್ಲ‌ ತಾಜ್ ವೆಸ್ಟೆಂಡ್ ಹೋಟೆಲ್ ವಾಸ್ತವ್ಯ ತೊರೆಯುವ ಮೂಲಕ ತೆರಿಗೆದಾರರ ಹಣವನ್ನು ತಾರಾ ಹೋಟೆಲ್ ಗೆ ಕಟ್ಟೋದನ್ನು ನಿಲ್ಲಿಸುತ್ತೇನೆ ಅಂತಾ ಹೇಳಿದ್ದಾರೆ ಇದು ಸ್ವಾಗತಾರ್ಹ ಎಂದರು.

ಸಿಎಂ ಗ್ರಾಮ ವಾಸ್ತವ್ಯ ಮುಂದೂಡಿ ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಕಾರ್ಯದರ್ಶಿಗಳನ್ನು ಕಳಿಸಿ ವಾಸ್ತವಾಂಶ ಅರಿಯಬೇಕು ಆನಂತರ ಏನೂ ಬೇಕಾದರೂ ಮಾಡಲಿ‌ ಅವರ ಅರೋಗ್ಯ ಚೆನ್ನಾಗಿರಲಿ, ಅವರೂ ಚೆನ್ನಾಗಿರಲಿ ಒಂದು ವರ್ಷದ ಬಳಿಕ ನಿದ್ದೆಯಿಂದ ಎದ್ದಿದ್ದಾರೆ ಎಂದು ಲೇವಡಿ ಮಾಡಿದರು.
Conclusion:-ಪ್ರಶಾಂತ್ ಕುಮಾರ್
ETV Bharat Logo

Copyright © 2024 Ushodaya Enterprises Pvt. Ltd., All Rights Reserved.