ETV Bharat / state

ಮೋದಿ ಸರ್ಕಾರದಿಂದ ಸಹಕಾರಿ ಸಂಸ್ಥೆಗಳ ನಾಶಪಡಿಸುವ ಪ್ರಯತ್ನ: ಗೌರವ್ ವಲ್ಲಭ್ - ಸಹಕಾರ ಇಲಾಖೆ

ಮೋದಿ ಹಾಗೂ ಅಮಿತ್ ಶಾ ಅವರು ನಂದಿನಿ ಉತ್ಪನ್ನದ ರುಚಿ ನೋಡಬೇಕು. ಕರ್ನಾಟಕದ ಹೆಮ್ಮೆಯ ಸಂಸ್ಥೆ ಕೆಎಂಎಫ್‌ನ ನಂದಿನಿ ಬ್ರ್ಯಾಂಡ್ ಬೆಳೆಯಲು ರೈತರ, ಕಾರ್ಮಿಕರ ಪರಿಶ್ರಮ ಇದೆ ಎಂದು ಎಐಸಿಸಿ ವಕ್ತಾರ ಗೌರವ್ ವಲ್ಲಭ್ ಹೇಳಿದರು.

AICC spokesperson Gaurav Vallabh spoke at the press conference.
ಎಐಸಿಸಿ ವಕ್ತಾರ ಗೌರವ್ ವಲ್ಲಭ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
author img

By

Published : Apr 9, 2023, 7:48 PM IST

ಗೌರವ್ ವಲ್ಲಭ್ ಆರೋಪ

ಬೆಂಗಳೂರು: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರತಿ ರಾಜ್ಯಗಳಲ್ಲಿ ಅದರದೇ ಆದ ಹೆಮ್ಮೆಯ ಸಂಸ್ಥೆಗಳನ್ನು ನಾಶ ಮಾಡಲು ಮುಂದಾಗುತ್ತಿದೆ ಎಂದು ಎಐಸಿಸಿ ವಕ್ತಾರ ಗೌರವ್ ವಲ್ಲಭ್ ಆರೋಪಿಸಿದರು. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದಕ್ಕೆ ಸೂಕ್ತ ಉದಾಹರಣೆಯೇ ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್​ ನಂದಿನಿ ಸಂಸ್ಥೆಯ ವಿರುದ್ಧದ ದಾಳಿ. ನಂದಿನಿ ಉತ್ಪನ್ನಗಳಲ್ಲಿ ಯಾವ ದೋಷವಿದೆ? ಈ ಉತ್ಪನ್ನಗಳ ಮೇಲೆ ಕನ್ನಡ ಭಾಷೆ ಬಳಸಲಾಗಿದೆ ಎಂಬುದು ನಿಮ್ಮ ಸಮಸ್ಯೆಯೇ ಎಂದು ಪ್ರಶ್ನಿಸಿದರು.

ಮೋದಿ ಹಾಗೂ ಅಮಿತ್ ಶಾ ಅವರು ನಂದಿನಿ ಉತ್ಪನ್ನದ ರುಚಿ ನೋಡಬೇಕು. ಇದು ಕರ್ನಾಟಕದ ಹೆಮ್ಮೆ. ಆರೂವರೆ ಕೋಟಿ ಜನರ ನಂದಿನಿಯನ್ನೂ ಯಾಕೆ ತುಳಿಯಲು ಹೊರಟಿದ್ದೀರಿ? ಇದರಿಂದ ಏನು ಸಾಧಿಸಲು ಹೊರಟಿದ್ದೀರಿ? ಅಮಿತ್ ಶಾ ಅವರೇ ಸಹಕಾರಿ ಸಚಿವಾಲಯದ ಮೂಲ ಉದ್ದೇಶವೇನು? ನೀವು ಸಹಕಾರ ಕ್ಷೇತ್ರದಲ್ಲೂ ಸ್ಪರ್ಧೆ ತರಲು ಹೊರಟಿದ್ದೀರಿ. ಉದ್ದೇಶಪೂರ್ವಕವಾಗಿ ಇದನ್ನು ಯಾಕೆ ಮಾಡುತ್ತಿದ್ದೀರಿ. ನಂದಿನಿ ಆಶ್ರಯದಲ್ಲಿ ಸುಮಾರು 2 ಕೋಟಿ ಜನರು ಆಶ್ರಯ ಪಡೆದಿದ್ದಾರೆ ಎಂದರು.

ಮೋದಿ ಅವರೇ ಇನ್ನು ಒಂದು ತಿಂಗಳು ಮೂರು ದಿನಗಳು ಮಾತ್ರ ಬಾಕಿ ಇವೆ. ನಂತರ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ನಂತರ ಕರ್ನಾಟಕದ ಹೆಮ್ಮೆಯ ಸಂಸ್ಥೆಗಳನ್ನು ಯಾರೂ ಕೂಡ ಮುಟ್ಟಲು ಸಾಧ್ಯವಿಲ್ಲ. ದೆಹಲಿಯಲ್ಲಿ ಕೂತು ಕರ್ನಾಟಕದ ಸಂಸ್ಥೆಗಳ ಭವಿಷ್ಯ ನಿರ್ಧರಿಸಲು ಬಿಡುವುದಿಲ್ಲ.

ನಂದಿನಿ ಬ್ರ್ಯಾಂಡ್ ರೈತರು, ಕಾರ್ಮಿಕರ ಪರಿಶ್ರಮದ ಫಲ. ಪ್ರತಿಯೊಬ್ಬ ಕನ್ನಡಿಗನೂ ಈ ಬ್ರ್ಯಾಂಡ್ ಬಗ್ಗೆ ಹೆಮ್ಮೆ ಹೊಂದಿದ್ದಾನೆ. ಮೋದಿ ಅವರು ಒಮ್ಮೆ ಇದರ ರುಚಿ ನೋಡಲಿ, ಅವರು ತಮ್ಮ ನಿಲುವು ಬದಲಿಸಬಹುದು. ರಾಜ್ಯದಿಂದ ಆಯ್ಕೆಯಾಗಿರುವ ಸಂಸದರೂ ಇದಕ್ಕೆ ಉತ್ತೇಜನ ನೀಡುತ್ತಿರುವುದು ಆಘಾತಕಾರಿ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.

ಇದನ್ನೂಓದಿ:ನಂದಿನಿ ಹಾಲನ್ನೇ ಬಳಸಲು ನಿರ್ಧರಿಸಿದ ಬೆಂಗಳೂರು ಹೊಟೇಲ್ ಸಂಘ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.