ETV Bharat / state

ಕೊರೊನಾ ಲಸಿಕೆ ಕುರಿತು ಮೋದಿ ಐತಿಹಾಸಿಕ ತೀರ್ಮಾನ ನಿರೀಕ್ಷೆ: ಸಿಎಂ ಬಿಎಸ್​ವೈ ವಿಶ್ವಾಸ - ಪ್ರಧಾನಿ ಮೋದಿ ಸಭೆ

ಭಾರತಕ್ಕೆ ಕೊರೊನಾ ಲಸಿಕೆ ಆಗಮನದ ಹಿನ್ನೆಲೆ ರಾಜ್ಯ ಸರ್ಕಾರಗಳ ಸಿದ್ಧತೆ ಹಾಗೂ ಕೊರೊನಾ ಕ್ರಮಗಳ ಕುರಿತಂತೆ ಚರ್ಚಿಸಲು ಎಲ್ಲ ಸಿಎಂಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಲಿದ್ದಾರೆ. ವರ್ಚ್ಯುಯಲ್​ ಸಭೆಗೆ ವೇದಿಕೆ ಸಿದ್ಧವಾಗಿದ್ದು, ಸಿಎಂ ಬಿಎಸ್​ವೈ ಭಾಗಿಯಾಗಲಿದ್ದಾರೆ. ಈ ಹಿನ್ನೆಲೆ ಸಭೆ ನಿರೀಕ್ಷೆ ಹುಟ್ಟಿಸಿದೆ.

CM BSY
ಸಿಎಂ ಬಿಎಸ್​ವೈ
author img

By

Published : Nov 24, 2020, 10:59 AM IST

ಬೆಂಗಳೂರು: ಕೊರೊನಾ ಲಸಿಕೆ ಕುರಿತು ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧಕ್ಕೆ ತೆರಳುವ ಮುನ್ನ ಕಾವೇರಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ‌ ಮಾತನಾಡಿದ ಅವರು, ಕೊರೊನಾ ಸಂಕಷ್ಟದಲ್ಲಿರುವವರಿಗೆ ಸವಲತ್ತು ಸಿಗಬೇಕು ಈ ನಿಟ್ಟಿನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಸಂವಾದ ಮಾಡುತ್ತಿದ್ದಾರೆ ಅವರು ವಿಡಿಯೋ ಸಂವಾದದಲ್ಲಿ ಏನು ಘೋಷಣೆ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ ಎಂದರು.

ಸಚಿವ ಸಂಪುಟ ವಿಸ್ತರಣೆ ಕುರಿತು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಭೇಟಿ ವಿಚಾರ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿ ಅಲ್ಲಿಂದ ತೆರಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.