ETV Bharat / state

ಮತದಾನ ತರಬೇತಿ ಕಾರ್ಯಾಗಾರಕ್ಕೆ ಏಳು ಶಾಸಕರ ಗೈರು: ಮುರ್ಮು ಸಭೆಗೆ ಗೈರಾದವರಿಗೆ ಕಾರಣ ಕೇಳಿದ ಬಿಜೆಪಿ

author img

By

Published : Jul 17, 2022, 6:23 PM IST

ರಾಷ್ಟ್ರಪತಿ ಚುನಾವಣೆ ಹಿನ್ನೆಲೆ ಬಿಜೆಪಿ ಮತಗಳು ಅಸಿಂಧುವಾಗಬಾರದೆಂದು ರಾಜ್ಯ ಬಿಜೆಪಿ ಬೆಂಗಳೂರಿನಲ್ಲಿ ಅಣಕು ಮತದಾನವನ್ನು ಏರ್ಪಡಿಸಿದ್ದು, ಈ ಕಾರ್ಯಾಗಾರಕ್ಕೆ ಏಳು ಶಾಸಕರು ಗೈರಾಗಿದ್ದಾರೆ.

mock-voting-workshop-by-state-bjp-in-banglore
ಮತದಾನ ತರಬೇತಿ ಕಾರ್ಯಾಗಾರಕ್ಕೆ ಏಳು ಶಾಸಕರ ಗೈರು:ಮುರ್ಮು ಸಭೆಗೆ ಗೈರಾದವರಿಂದ ಕಾರಣ ಕೇಳಿದ ಬಿಜೆಪಿ..!

ಬೆಂಗಳೂರು : ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಮತ ಅಸಿಂಧುವಾಗಬಾರದು ಎಂದು ಇಡೀ ದೇಶದಲ್ಲಿ ಅಣಕು ಮತದಾನವನ್ನು ಏರ್ಪಡಿಸಿ ಬಿಜೆಪಿಯಿಂದ ತರಬೇತಿ ನೀಡಲಾಗುತ್ತಿದ್ದು, ರಾಜ್ಯದಲ್ಲಿ ನಡೆದ ತರಬೇತಿ ಕಾರ್ಯಾಗಾರಕ್ಕೆ ಪೂರ್ವಾನುಮತಿಯೊಂದಿಗೆ ಏಳು ಶಾಸಕರು ಗೈರಾಗಿದ್ದಾರೆ.

ನಗರದ ಶಾಂಗ್ರಿಲಾ ಹೋಟೆಲ್ ನಲ್ಲಿ ಬಿಜೆಪಿ ಶಾಸಕರಿಗೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದು, ಏಳು ಶಾಸಕರು ಹೊರತುಪಡಿಸಿ ಇತರ ಶಾಸಕರು ಹೋಟೆಲ್ ನಲ್ಲಿ ಬೀಡುಬಿಟ್ಟಿದ್ದಾರೆ. ಹೋಟೆಲ್ ನಿಂದಲೇ ಬಸ್ ಮೂಲಕ ಎಲ್ಲ ಶಾಸಕರು ನೇರವಾಗಿ ವಿಧಾನಸೌಧಕ್ಕೆ ತೆರಳಿ ಮತ ಚಲಾವಣೆ ಮಾಡಲಿದ್ದಾರೆ. ಅದಕ್ಕೂ ಮುನ್ನ ಇಂದು ಅಣಕು ಮತದಾನ ತರಬೇತಿ ನೀಡಲಾಯಿತು. ಯಾವ ರೀತಿ ಮತ ಚಲಾಯಿಸಬೇಕು ಎಂದು ಪ್ರಾತ್ಯಕ್ಷಿಕೆ ಮೂಲಕ ತೋರಿಸಿ ಮತದಾನ ಮಾಡುವ ಬಗೆ ಕುರಿತು ತರಬೇತಿ ನೀಡಲಾಯಿತು.

mock-voting-workshop-by-state-bjp-in-banglore
ರಾಜ್ಯ ಬಿಜೆಪಿಯಿಂದ ಕಾರ್ಯಾಗಾರ
ಕಾರ್ಯಾಗಾರಕ್ಕೆ 7 ಶಾಸಕರು ಗೈರು : ಇಂದಿನ ತರಬೇತಿ ಕಾರ್ಯಾಗಾರಕ್ಕೆ 7 ಶಾಸಕರು ಗೈರಾಗಿದ್ದಾರೆ. ಅನಾರೋಗ್ಯದ ಕಾರಣದಿಂದ ಪೂರ್ವಾನುಮತಿ ಪಡೆದುಕೊಂಡಿದ್ದು, ನಾಳೆ ನೇರವಾಗಿ ವಿಧಾನಸೌಧಕ್ಕೆ ಆಗಮಿಸಿ ಮತ ಚಲಾಯಿಸುವುದಾಗಿ ತಿಳಿಸಿದ್ದಾರೆ. ಇದಕ್ಕೆ ಪಕ್ಷದ ನಾಯಕರು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಮುರ್ಮು ಸಭೆಗೆ ಗೈರಾದ 14 ಶಾಸಕರ ವಿವರಣೆ ಕೇಳಿದ ಬಿಜೆಪಿ : ಕಳೆದ ಭಾನುವಾರ ಮತಯಾಚನೆಗೆ ಆಗಮಿಸಿದ್ದ ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಸಭೆಗೆ ಪೂರ್ವಾನುಮತಿ ಪಡೆಯದೆ ಗೈರಾಗಿದ್ದ 14 ಶಾಸಕರಿಗೆ ಬಿಜೆಪಿ ರಾಜ್ಯ ಘಟಕ ವಿವರಣೆ ನೀಡುವಂತೆ ಮೌಖಿಕ ಸೂಚನೆ ನೀಡಿದೆ. ದೂರವಾಣಿ ಮೂಲಕ ಶಾಸಕರ ಸಂಪರ್ಕ ಮಾಡಿದ ರಾಜ್ಯ ಘಟಕ ಕಾರಣ ನೀಡುವಂತೆ ಸೂಚಿಸಿದೆ ಎನ್ನಲಾಗಿದೆ. ಆದರೆ ಈ ಕುರಿತು ಯಾವುದೇ ನೋಟಿಸ್ ಜಾರಿಗೊಳಿಸಲಾಗಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಓದಿ : ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷ-ಪ್ರತಿಪಕ್ಷಗಳ ಜುಗಲ್ ಬಂದಿ ಇದ್ದರೆ ದೇಶಕ್ಕೆ ಶ್ರೇಯಸ್ಸು: ಹೆಚ್​ಡಿಕೆ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.