ETV Bharat / state

'ಆ ತರಹದ' ಯಾವುದೇ ವಿಡಿಯೋ ನಾನು ನೋಡಿಲ್ಲ: ಪರಿಷತ್‌ ಕೈ ಸದಸ್ಯ ಪ್ರಕಾಶ್ ರಾಥೋಡ್‌ - Mobile Viewing in the vidhana Parishad council session

ಸದನದಲ್ಲಿ ಮೊಬೈಲ್ ಬಳಕೆ ಮಾಡಬಾರದು ಎನ್ನುವ ನಿಯಮವಿದ್ದರೂ ಅದನ್ನು ನಿರ್ಲಕ್ಷಿಸಿರುವ ಕಾಂಗ್ರೆಸ್‌ ಸದಸ್ಯ ಪ್ರಕಾಶ್ ರಾಥೋಡ್ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಸದನದಲ್ಲಿ ಅವರು ಮೊಬೈಲ್‌ ನೋಡುತ್ತಿದ್ದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ರಾಥೋಡ್‌ ಇದೀಗ ಸ್ಪಷ್ಟನೆ ನೀಡಿದ್ದಾರೆ.

prakash-rathore
ಪ್ರಕಾಶ್ ರಾಥೋಡ್
author img

By

Published : Jan 29, 2021, 3:44 PM IST

Updated : Jan 29, 2021, 7:15 PM IST

ಬೆಂಗಳೂರು: ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪ ನಡೆಯುತ್ತಿದ್ದ ವೇಳೆ ಕಾಂಗ್ರೆಸ್‌ ಸದಸ್ಯ ಪ್ರಕಾಶ್ ರಾಥೋಡ್ ಮೊಬೈಲ್‌ನಲ್ಲಿ ಗ್ಯಾಲರಿ ವೀಕ್ಷಣೆ ಮಾಡುತ್ತಿದ್ದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದನದಲ್ಲಿ ಮೊಬೈಲ್ ಬಳಕೆ ಮಾಡಬಾರದು ಎನ್ನುವ ನಿಯಮವಿದ್ದರೂ ಅದನ್ನು ನಿರ್ಲಕ್ಷಿಸಿರುವ ಅವರು ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ವಿಧಾನ ಪರಿಷತ್​ ಸದಸ್ಯ ಪ್ರಕಾಶ್ ರಾಥೋಡ್ ಸ್ಪಷ್ಟನೆ

ಈ ಕುರಿತು ಸ್ಪಷ್ಟೀಕರಣ ನೀಡಿದ ರಾಥೋಡ್, ಸಾಮಾನ್ಯವಾಗಿ ಸದನದಲ್ಲಿ ಮೊಬೈಲ್ ನೋಡೋದೇ ಇಲ್ಲ. ಪ್ರಶ್ನೆ ಕೇಳಬೇಕಿತ್ತು, ಹಾಗಾಗಿ ಮೊಬೈಲ್ ಚೆಕ್ ಮಾಡುತ್ತಿದ್ದೆ. ಆಗ ಸ್ಟೋರೇಜ್ ಫುಲ್ ಆಗಿತ್ತು, ಹೀಗಾಗಿ ಡಿಲೀಟ್ ಮಾಡುತ್ತಿದ್ದೆ ಎಂದಿದ್ದಾರೆ.

ನಾನು ಯಾವುದೇ ಅನ್ಯ ಚಿತ್ರಗಳನ್ನು ನೋಡಲಿಲ್ಲ. ಮೊಬೈಲ್‌ನಲ್ಲಿ ಕೆಲವು ಮೆಸೇಜ್‌ಗಳು ಹೆಚ್ಚಾಗಿದ್ದವು, ಅದನ್ನು ಡಿಲೀಟ್ ಮಾಡುತ್ತಿದ್ದೆ. ದಯಮಾಡಿ ತಪ್ಪು ಮಾಹಿತಿ ಕೊಡಬಾರದು. ನಾನು ಯಾವುದೇ ಚಿತ್ರವನ್ನು ನೋಡಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸದನದಲ್ಲಿ ಗದ್ದಲ ಪ್ರಕರಣ: ಮಧ್ಯಂತರ ವರದಿಯಲ್ಲೇನಿದೆ ಗೊತ್ತಾ?

Last Updated : Jan 29, 2021, 7:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.