ಬೆಂಗಳೂರು: ನಗರದಲ್ಲಿ ಮೊಬೈಲ್ ಕಳ್ಳತನ ಮತ್ತು ಪಿಕ್ ಪಾಕೆಟ್ ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಬಯಲಿಗೆಳೆದಿದ್ದಾರೆ.
ಇತ್ತೀಚೆಗೆ ನಗರದಲ್ಲಿ ಹೆಚ್ಚಾಗುತ್ತಿದ್ದ ಮೊಬೈಲ್ ಕಳ್ಳರ ಬೆನ್ನುಬಿದ್ದ ಪೊಲೀಸರು ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿ 78 ಲಕ್ಷ ರೂ ಮೌಲ್ಯದ 512 ಮೊಬೈಲ್ಗಳನ್ನು ವಶಕ್ಕೆ ಪಡೆದಿದ್ದಾರೆ. ಅಫ್ಜಲ್ ಪಾಶಾ ಹಾಗು ಇಜಾಜ್ ಬಂಧಿತರು. ಏಳೆಂಟು ಜನರ ಗುಂಪು ರಚಿಸಿಕೊಂಡಿದ್ದ ಆರೋಪಿಗಳು ನಗರದಲ್ಲಿ ಮೊಬೈಲ್ಗಳನ್ನು ದೋಚಿ ಅವುಗಳನ್ನು ಹೈದರಾಬಾದ್, ಮುಂಬೈ ಸೇರಿದಂತೆ ಹಲವೆಡೆ ಮಾರಾಟ ಮಾಡುತ್ತಿದ್ದರು.
ಚಾಮರಾಜಪೇಟೆ, ಉಪ್ಪಾರಪೇಟೆ, ಮಾಗಡಿ ರಸ್ತೆ, ವೈಟ್ ಫೀಲ್ಡ್ ಸೇರಿದಂತೆ ನಗರದ ಹಲವೆಡೆ ಮೊಬೈಲ್ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. 512 ಮೊಬೈಲ್‌ಗಳ ಪೈಕಿ 110 ಮೊಬೈಲ್ ವಾರಸುದಾರರನ್ನು ಪತ್ತೆ ಹಚ್ಚಲಾಗಿದ್ದು, ಉಳಿದ ಮೊಬೈಲ್‌ಗಳ ಐಎಂಇಐ ನಂಬರ್‌ಸಹಿತ ಬೆಂಗಳೂರು ಪೊಲೀಸ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಸೂಕ್ತ ದಾಖಲೆಗಳೊಂದಿಗೆ ವಾರಸುದಾರರು ಹಿಂಪಡೆಯಬಹುದು ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದರು.
ಇದನ್ನೂ ಓದಿ: ಚಪ್ಪಲಿಯಲ್ಲಿ ಅಕ್ರಮ ಚಿನ್ನಸಾಗಾಟ: 17.43 ಲಕ್ಷ ರೂ ಮೌಲ್ಯದ ಚಿನ್ನ ವಶ