ETV Bharat / state

ಸಿಸಿಬಿ ಅಧಿಕಾರಿಗಳಿಗೆ ತಲೆನೋವಾಗಿದ್ಯಾ ಮೊಬೈಲ್​ ರಿಟ್ರೀವ್ ಕೆಲಸ? - Sandalwood Drug case

ಸ್ಯಾಂಡಲ್​ವುಡ್​ಗೆ ಡ್ರಗ್​ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 42 ಮೊಬೈಲ್​ಗಳನ್ನು ಜಪ್ತಿ ಮಾಡಲಾಗಿದೆಯಂತೆ. ಹೊಸ ಫೀಚರ್​ಗಳನ್ನು ಒಳಗೊಂಡ ಮೊಬೈಲ್​ಗಳನ್ನು ರಿಟ್ರೀವ್​ ಮಾಡಲು ಮಡಿವಾಳದ ಎಫ್​ಎಸ್​ಎಲ್‌ಗೆ ಸಾಧ್ಯವಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ಹೈದರಾಬಾದ್ ಅಥವಾ ಕೇರಳದ ತ್ರಿವೆಂಡಂನಲ್ಲಿರುವ ಎಫ್​ಎಸ್​ಎಲ್​ಗೆ ಈ ಮೊಬೈಲ್​ಗಳನ್ನು ಕಳುಹಿಸುವುದು ಅನಿವಾರ್ಯವಾಗಿದೆಯಂತೆ.

ಸಿಸಿಬಿ ಅಧಿಕಾರಿಗಳಿಗೆ ತಲೆನೋವಾಗಿದ್ಯಾ ಮೊಬೈಲ್​ ರಿಟ್ರೀವ್.!?

author img

By

Published : Oct 16, 2020, 12:34 PM IST

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್​ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಹಲವರ ವಿಚಾರಣೆ ನಡೆಸಿದ್ದಾರೆ. ಆದರೆ ಮಹತ್ವದ ಮಾಹಿತಿಗಳನ್ನು ಕಲೆ ಹಾಕಲು ಅತಿ ಮುಖ್ಯವಾಗಿರುವ ಮೊಬೈಲ್​ಗಳನ್ನು ರಿಟ್ರೀವ್​ ಮಾಡುವುದು ತಲೆನೋವಾಗಿ ಪರಿಣಮಿಸಿದೆಯಂತೆ.

ಇಲ್ಲಿಯವರೆಗೆ ಪ್ರಕರಣದಲ್ಲಿ 15ಕ್ಕೂ ಹೆಚ್ಚು ಆರೋಪಿಗಳನ್ನು ಈ ಪ್ರಕರಣದಲ್ಲಿ ಬಂಧಿಸಿದ್ದು, ಈ ವೇಳೆ ಸುಮಾರು 42 ಮೊಬೈಲ್​ಗಳನ್ನು ಜಪ್ತಿ ಮಾಡಲಾಗಿದೆ. ಆದರೆ ಇಷ್ಟು ಮೊಬೈಲ್​​ಗಳಲ್ಲಿ ಒಂದಷ್ಟು ಫೋನ್​ಗಳು ಹೊಸ ಫೀಚರ್​ಗಳನ್ನು ಒಳಗೊಂಡಿವೆ. ಇಂತಹ ಮೊಬೈಲ್​ಗಳಿಂದ ದಾಖಲೆಗಳನ್ನು ಹೊರ ತೆಗೆಯುವ ಕೆಲಸ ಮಡಿವಾಳದ ಎಫ್​ಎಸ್​ಎಲ್‌ನಿಂದ ಸಾಧ್ಯವಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ಹೈದರಾಬಾದ್ ಅಥವಾ ಕೇರಳದ ತ್ರಿವೆಂಡಂ ಬಳಿ ಇರುವ ಎಫ್​ಎಸ್​ಎಲ್​ಗೆ ಈ ಮೊಬೈಲ್​ಗಳನ್ನು ಕಳುಹಿಸುವುದು ಅನಿವಾರ್ಯವಾಗಿದೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ ವಿಚಾರಣೆಗೆ ಹಾಜರಾದ ನಟ ದಿಗಂತ್, ಐಂದ್ರಿತಾ ರೇ, ಅಕುಲ್ ಬಾಲಾಜಿ, ನಟ ಸಂತೋಷ್ ಮೊಬೈಲ್ ಸೇರಿದಂತೆ ಕೆಲ ಪೆಡ್ಲರ್​ಗಳ ಮೊಬೈಲ್ ರಿಟ್ರೀವ್ ಆಗದೆ ಹಾಗೆಯೇ ಉಳಿದಿವೆಯಂತೆ. ಹೀಗಾಗಿ ಕೆಲವರು ಡ್ರಗ್ ಮಾಫಿಯಾದಲ್ಲಿ ಭಾಗಿಯಾಗಿರುವುದಕ್ಕೆ ಸಾಕ್ಷ್ಯಗಳನ್ನು ಕಲೆ ಹಾಕುವುದಕ್ಕೆ ಸಿಸಿಬಿ ಅಧಿಕಾರಿಗಳು ಕಷ್ಟಪಡುವಂತಾಗಿದೆ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.