ಬೆಂಗಳೂರು : ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಅಕ್ರಮ ಮೊಬೈಲ್ ಬಳಕೆ ನಿಯಂತ್ರಣ ಸಂಬಂಧ ಬಿಇಎಲ್ನ ಹಿರಿಯ ಅಧಿಕಾರಿಗಳೊಂದಿಗೆ ವಿಕಾಸಸೌಧದಲ್ಲಿ ಇಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಅತ್ಯಾಧುನಿಕ ಮೊಬೈಲ್ ಜಾಮರ್ಗಳ ಪ್ರಾತ್ಯಕ್ಷಿಕೆಯನ್ನು ಬಿಇಎಲ್ನ ಹಿರಿಯ ಅಧಿಕಾರಿಗಳು ನೀಡಿದರು.
ರಾಜ್ಯದಲ್ಲಿರುವ ಎಲ್ಲಾ ಕೇಂದ್ರ ಕಾರಾಗೃಹಗಳಲ್ಲಿ ಮೊಬೈಲ್ ಜಾಮರ್ ಅಳವಡಿಸಲು ಪ್ರಸ್ತಾವನೆಯನ್ನು ಸರ್ಕಾರ ಬಿಇಎಲ್ಗೆ ನೀಡಿದೆ. 4G ಹಾಗೂ 5G ತರಾಂಗಂತರಗಳನ್ನು ನಿರ್ಬಂಧಗೊಳಿಸುವ ತಂತ್ರಜ್ಞಾನ ಪ್ರಾತ್ಯಕ್ಷಿಕೆಯನ್ನು ಬಿಇಎಲ್ನ ಗುಲ್ಶನ್ ಮಂಡ್ಲೇ ಮತ್ತು ರಾಧೆ ಶ್ಯಾಮ್ ಕುಮವಾಟ್ ಅವರು ಸಚಿವರಿಗೆ ನೀಡಿದರು.
ಈ ಸಭೆಯಲ್ಲಿ ಪೊಲೀಸ್ ಮಹಾ ನಿರ್ದೇಶಕ (ಕಾರಾಗೃಹ) ಅಲೋಕ್ ಮೋಹನ್, ಮಾಲಿನಿ ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ : ಪರಪ್ಪನ ಅಗ್ರಹಾರ ಜೈಲಿಗೆ ಗೃಹ ಸಚಿವ ದಿಢಿರ್ ಭೇಟಿ: ಅತ್ಯಾಧುನಿಕ ಮೊಬೈಲ್ ಜಾಮರ್ ಅಳವಡಿಕೆಗೆ ನಿರ್ಧಾರ ಎಂದ ಜ್ಞಾನೇಂದ್ರ