ETV Bharat / state

ಕಾಂಗ್ರೆಸ್ ಪಾದಯಾತ್ರೆ ವೇಸ್ಟ್ ಆಫ್ ಟೈಂ, ವೇಸ್ಟ್ ಆಫ್ ಮನಿ : ಎನ್.ರವಿಕುಮಾರ್

ಮೇಕೆದಾಟು, ಎತ್ತಿನಹೊಳೆ, ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ ಕೊಡುಗೆ ಶೂನ್ಯ. ಮೇಕೆದಾಟುವಿನ ಡಿಪಿಆರ್ ಮಾಡಿದ್ದು ಹೆಚ್​​ ಡಿ ಕುಮಾರಸ್ವಾಮಿ. ಯೋಜನೆ ಪ್ರಾರಂಭ ಮಾಡಿದ್ದು ಬಿಜೆಪಿ. ಈಗ ಕಾಂಗ್ರೆಸ್ ನವರು ಅದು ಮಾಡಿ ಇದು ಮಾಡಿ ಅಂತಾರೆ ಎಂದು ಎನ್.ರವಿಕುಮಾರ್ ಕಿಡಿ ಕಾರಿದರು..

ಎನ್.ರವಿಕುಮಾರ್
ಎನ್.ರವಿಕುಮಾರ್
author img

By

Published : Feb 26, 2022, 7:21 PM IST

ಬೆಂಗಳೂರು : ಕಾಂಗ್ರೆಸ್ ಪಾದಯಾತ್ರೆ ವೇಸ್ಟ್ ಆಫ್ ಟೈಂ, ವೇಸ್ಟ್ ಆಫ್ ಮನಿ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್​ ಪಾದಯಾತ್ರೆ ವಿರುದ್ಧ ಎನ್.ರವಿಕುಮಾರ್ ವಾಗ್ದಾಳಿ

ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​​ನವರು ಸದನದ ಕಲಾಪ ಹಾಳು ಮಾಡಿದರು. ಜನವಿರೋಧಿಯಾಗಿ ನಡೆದುಕೊಂಡರು. ತಮ್ಮ ಪಾದಯಾತ್ರೆ ಬಗ್ಗೆಯೂ ಸದನದಲ್ಲಿ ಕಾಂಗ್ರೆಸ್ ಚರ್ಚಿಸಲಿಲ್ಲ. ಮೇಕೆದಾಟು, ಎತ್ತಿನಹೊಳೆ, ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ ಕೊಡುಗೆ ಶೂನ್ಯ. ಮೇಕೆದಾಟುವಿನ ಡಿಪಿಆರ್ ಮಾಡಿದ್ದು ಹೆಚ್​​ ಡಿ ಕುಮಾರಸ್ವಾಮಿ. ಯೋಜನೆ ಪ್ರಾರಂಭ ಮಾಡಿದ್ದು ಬಿಜೆಪಿ. ಈಗ ಕಾಂಗ್ರೆಸ್ ನವರು ಅದು ಮಾಡಿ ಇದು ಮಾಡಿ ಅಂತಾರೆ ಎಂದು ಕಿಡಿ ಕಾರಿದರು.

ಇದನ್ನೂ ಓದಿ : ಹಾಲು ಕುಡಿದು ಸಾಯುವವರಿಗೆ ಯಾರಾದರೂ ವಿಷ ಹಾಕಿ ಕೊಲ್ಲುತ್ತಾರೆಯೇ: ಸಿದ್ದರಾಮಯ್ಯ,ಡಿಕೆಶಿ ವಿರುದ್ಧ ಕಾರಜೋಳ ವ್ಯಂಗ್ಯ

ಮೇಕೆದಾಟು ಯೋಜನೆಗೆ ಸಮಯ ಬೇಕಾಗುತ್ತದೆ. ಡಿಕೆಶಿ ಯವರದ್ದು ಹಸಿ ಸುಳ್ಳು ಹೇಳುವ ಜಾಯಮಾನ. ನಾವು ಮೇಕೆದಾಟು ಬಗ್ಗೆ ಏನು ಮಾಡಿದ್ವಿ ಅಂತ ಜಾಹೀರಾತು ಮಾಡಿದ್ದೆವು. ಈಗ ಅದೇ ಜಾಹೀರಾತು ಜನರ ಮುಂದಿಡುತ್ತೇವೆ ಎಂದರು‌.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.