ETV Bharat / state

ಮೇಲ್ಮನೆ ಉಪಚುನಾವಣೆ: ಸವದಿಗೆ ಮಣೆ ಹಾಕಿದ ಹೈಕಮಾಂಡ್!

ಶಾಸಕರಾಗಿ ಚುನಾಯಿತರಾಗಿರುವ ರಿಜ್ವಾನ್ ಅರ್ಷದ್​ರಿಂದ‌ ತೆರವಾಗಿರುವ ಪರಿಷತ್ ಸ್ಥಾನದ ಉಪ ಚುನಾವಣೆಗೆ ಬಿಜೆಪಿ ಹೈಕಮಾಂಡ್ ಲಕ್ಷ್ಮಣ ಸವದಿಗೆ‌ ಟಿಕೆಟ್ ‌ನೀಡಿದೆ.

author img

By

Published : Feb 1, 2020, 10:35 PM IST

BJP decided to give ticket to laxman savadi
ಲಕ್ಷ್ಮಣ ಸವದಿ

ಬೆಂಗಳೂರು: ಕೊನೆಗೂ ವಿಧಾನ ಪರಿಷತ್ ಉಪ ಚುನಾವಣೆಗೆ ಯಾರು ಸ್ಪರ್ಧಿಸುತ್ತಾರೆ ಎಂಬ ಗೊಂದಲಕ್ಕೆ ಬಿಜೆಪಿ ಹೈಕಮಾಂಡ್ ತೆರೆ ಎಳೆದಿದೆ.

ಶಾಸಕರಾಗಿ ಚುನಾಯಿತರಾಗಿರುವ ರಿಜ್ವಾನ್ ಅರ್ಷದ್​ರಿಂದ‌ ತೆರವಾಗಿರುವ ಪರಿಷತ್ ಸ್ಥಾನದ ಉಪ ಚುನಾವಣೆಗೆ ಬಿಜೆಪಿ ಹೈಕಮಾಂಡ್ ಲಕ್ಷ್ಮಣ ಸವದಿಗೆ‌ ಟಿಕೆಟ್ ‌ನೀಡಿದೆ. ಆ ಮೂಲಕ ಲಕ್ಷ್ಮಣ್ ಸವದಿ ಹಾಗೂ ಆರ್.ಶಂಕರ್​​ ಇಬ್ಬರಲ್ಲಿ ಯಾರಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ಗೊಂದಲಕ್ಕೆ ಇದೀಗ ತೆರೆ ಬಿದ್ದಿದೆ.

ವಿಧಾನ ಪರಿಷತ್ ಉಪಚುನಾವಣೆಯಲ್ಲಿ ಲಕ್ಷ್ಮಣ್ ಸವದಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಸಚಿವ ಸ್ಥಾನ ಉಳಿಸಿಕೊಳ್ಳಲು ಲಕ್ಷ್ಮಣ್ ಸವದಿ ಆರು ತಿಂಗಳಲ್ಲಿ ಚುನಾಯಿತರಾಗುವುದು ಅನಿವಾರ್ಯವಾಗಿತ್ತು. ಅದರಂತೆ ಸಚಿವರಾಗಿ ಮುಂದುವರಿಯಲು ಸವದಿ ಫೆ.20ರೊಳಗೆ ಚುನಾಯಿತರಾಗಬೇಕಾಗಿತ್ತು. ಹೀಗಾಗಿ ಸವದಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿದೆ.

ಫೆ.17ಕ್ಕೆ ವಿಧಾ‌ಪರಿಷತ್​​ಗೆ ಉಪಚುನಾವಣೆ ನಡೆಯಲಿದೆ. ಫೆ.6 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಈಗ ಪರಿಷತ್ ಸದಸ್ಯನಾಗಿ ಚುನಾಯಿತರಾಗುವವರ ಅವಧಿ ಜೂನ್ 14, 2022ರವರೆಗೆ ಇರಲಿದೆ. ವಿಧಾನಸಭೆಯಲ್ಲಿನ ಸಂಖ್ಯಾಬಲವನ್ನು ನೋಡಿದರೆ ಬಿಜೆಪಿ ಮೇಲುಗೈ ಹೊಂದಿದೆ.

Intro:Body:KN_BNG_08_PARISHATHBYELECTION_SAVADITICKET_SCRIPT_7201951

ಮೇಲ್ಮನೆ ಉಪಚುನಾವಣೆ: ಸವದಿಗೆ ಮಣೆ ಹಾಕಿದ ಹೈ ಕಮಾಂಡ್!

ಬೆಂಗಳೂರು: ಕೊನೆಗೂ ವಿಧಾನ ಪರಿಷತ್ ಉಪಚುನಾವಣೆಗೆ ಯಾರು ಸ್ಪರ್ಧಿಸುತ್ತಾರೆ ಎಂಬ ಗೊಂದಲಕ್ಕೆ ಬಿಜೆಪಿ ಹೈ ಕಮಾಂಡ್ ತೆರೆ ಎಳೆದಿದೆ.

ಶಾಸಕಾರಾಗಿ ಚುನಾಯಿತರಗಿರುವ ರಿಜ್ವಾನ್ ಅರ್ಷದ್ ರಿಂದ‌ ತೆರವಾಗಿರುವ ಪರಿಷತ್ ಸ್ಥಾನದ ಉಪಚುನಾವಣೆಗೆ ಬಿಜೆಪಿ ಹೈ ಕಮಾಂಡ್ ಲಕ್ಷ್ಮಣ ಸವದಿಗೆ‌ ಟಿಕೆಟ್ ‌ನೀಡಿದೆ. ಆ ಮೂಲಕ ಡಿಸಿಎಂ ಲಕ್ಷ್ಮಣ್ ಸವದಿಗೆ ಟಿಕೆಟ್ ನೀಡಲಾಗುತ್ತಾ ಅಥವಾ ಆರ್.ಶಂಕರ್ ಗೆ ಟಿಕೆಟ್ ನೀಡಲಾಗುತ್ತಾ ಎಂಬ ಗೊಂದಲಕ್ಕೆ ಇದೀಗ ತೆರೆ ಬಿದ್ದಿದೆ. ಕೇಂದ್ರ ಬಿಜೆಪಿ ಚುನಾವಣಾ ಸಮಿತಿ ಲಕ್ಷ್ಮಣ್ ಸವದಿಗೆ ಟಿಕೆಟ್ ನೀಡಲು ನಿರ್ಧರಿಸಿದೆ.

ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಲಕ್ಷ್ಮಣ್ ಸವದಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಸಚಿವ ಸ್ಥಾನ ಉಳಿಸಿಕೊಳ್ಳಲು ಲಕ್ಷ್ಮಣ್ ಸವದಿ ಆರು ತಿಂಗಳಲ್ಲಿ ಚುನಾಯಿತರಾಗುವುದು ಅನಿವಾರ್ಯವಾಗಿತ್ತು. ಅದರಂತೆ ಸಚಿವರಾಗಿ ಮುಂದುವರಿಯಲು ಸವದಿ ಫೆ.20ರೊಳಗೆ ಚುನಾಯಿತರಾಗಬೇಕಾಗಿತ್ತು. ಹೀಗಾಗಿ ಸವದಿಗೆ ಬಿಜೆಪಿ ಹೈ ಕಮಾಂಡ್ ಟಿಕೆಟ್ ನೀಡಿದೆ.

ಫೆ.17ಕ್ಕೆ ವಿಧಾ‌ಪರಿಷತ್ ಗೆ ಉಪಚುನಾವಣೆ ನಡೆಯಲಿದೆ. ಫೆ.6 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಈಗ ಪರಿಷತ್ ಸದಸ್ಯನಾಗಿ ಚುನಾಯಿತರಾಗುವವರ ಅವಧಿ ಜೂನ್ 14, 2022ರ ವರೆಗೆ ಇರಲಿದೆ. ವಿಧಾನಸಭೆಯಲ್ಲಿನ ಸಂಖ್ಯಾಬಲವನ್ನು ನೋಡಿದರೆ ಬಿಜೆಪಿಗೆ ಮೇಲುಗೈ ಹೊಂದಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.