ETV Bharat / state

'ಸತ್ತೀದ್ದೀವಿ, ಶವ ಸಂಸ್ಕಾರ ಮಾಡದೇ ಸರ್ಕಲ್​ನಲ್ಲಿ ಬಿಸಾಡಿದ್ದಾರೆ'... ಹೈಕಮಾಂಡ್​ ವಿರುದ್ಧ ಇಬ್ರಾಹಿಂ ಕಿಡಿ - ಕೆ.ಸಿ. ವೇಣುಗೋಪಾಲ್ ಸಿ.ಎಂ. ಇಬ್ರಾಹಿಂ ಗರಂ

ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಸ್ಥಾನ ಕೈ ತಪ್ಪಿದ್ದಕ್ಕೆ, ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ
ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ
author img

By

Published : Dec 17, 2019, 6:16 PM IST

ಬೆಂಗಳೂರು: ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಸ್ಥಾನ ಕೈ ತಪ್ಪಿದ್ದಕ್ಕೆ, ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕಾರಣದಿಂದಾಗಿ ಉಪಚುನಾವಣೆ ಪ್ರಚಾರದಲ್ಲಿ ನಾನು ಪಾಲ್ಗೊಂಡಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಪರಿಷತ್​ನಲ್ಲಿ ನಾನು ಹಿರಿಯ ನಾಯಕನಿದ್ದೇನೆ. ಆದರೂ ಕೂಡ ನನಗೆ ವಿಪಕ್ಷ ಸ್ಥಾನಕ್ಕೆ ಅವಕಾಶ ಕೊಡಲಿಲ್ಲ. ನಾವು ದುಡಿದು ಓಟು ಹಾಕಿಸಬೇಕು, ಆದರೆ ನಿರ್ಧಾರ ತಗೋಳೊದ್ರಲ್ಲಿ ನಾವಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವಿರೋಧ ಮಾಡೋದು ನಾವು, ಭಾಷಣ ಮಾಡೋದು ನಾವು, ವಿರೋಧ ಕಟ್ಕೊಳ್ಳೋದು ನಾವು, ಅಧಿಕಾರ ಅನುಭವಿಸೋದಕ್ಕೆ ಖುರ್ಚಿ ಮೇಲೆ ಕೂರುವುದಕ್ಕೆ ಬೇರೆಯವರಾ ಎಂದು ಪ್ರಶ್ನೆ ಮಾಡಿದರು.

ಸತ್ತಿದ್ದೀವಿ ಅಂದ ಮೇಲೆ ಶವ ಸಂಸ್ಕಾರನಾದರೂ ಮಾಡಬೇಕಲ್ಲ, ಶವ ಸಂಸ್ಕಾರವೂ ಮಾಡದೇ ಸರ್ಕಲ್​ನಲ್ಲಿ ಶವ ಬಿಸಾಡಿದ್ದಾರೆ. ಎಷ್ಟು ದಿನ ಅಂತ ದುಡಿಯೋದು ಎಂದು ಕೇಳಿದರು.

ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ

ಕಾಂಗ್ರೆಸ್ ಹೈಕಮಾಂಡ್ ಅಲ್ಪ ಸಂಖ್ಯಾತ ಸಮುದಾಯದ ಕೈ ಹಿಡಿಲಿಲ್ಲ. ಕೆ.ಸಿ. ವೇಣುಗೋಪಾಲ್ ನಮ್ಮ ಪರವಾಗಿ ಮಾತನಾಡಬಹುದಿತ್ತು. ಕಾಂಗ್ರೆಸ್ ನಾಯಕರೂ ಯಾರೂ ಮಾತನಾಡಲೇ ಇಲ್ಲ. ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ವಿರುದ್ಧ ನನ್ನ ಸಿಟ್ಟಲ್ಲ, ಕಾಂಗ್ರೆಸ್ ಪಕ್ಷದ ವಿರುದ್ಧ ನನ್ನ ಸಿಟ್ಟು ಎಂದರು.

ಅಲ್ಪಸಂಖ್ಯಾತ ಸಮಾಜ ಶೇ. 15 - 16 ರಷ್ಟು ಇದೆ. ಅಲ್ಪಸಂಖ್ಯಾತ ಸಮಾಜ ಬೇರೆಯವರ ಜೊತೆಗೆ ಗುರುತಿಸಿಕೊಂಡಿದೆ. ಅನೇಕ ಕಡೆ ಯಡಿಯೂರಪ್ಪನವರಿಗೆ ಅಲ್ಪಸಂಖ್ಯಾತ ಸಮಾಜ ಮತ ಹಾಕಿದೆ ಎಂದರು.

Intro:newsBody:ಪರಿಷತ್ ಪ್ರತಿಪಕ್ಷದ ನಾಯಕ ಸ್ಥಾನ ತಪ್ಪಿದ್ದಕ್ಕೆ ಹೈಕಮಾಂಡ್ ವಿರುದ್ಧ ಕಿಡಿಕಾರಿದ ಸಿಎಂ ಇಬ್ರಾಹಿಂ

ಬೆಂಗಳೂರು: ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಸ್ಥಾನ ಕೈತಪ್ಪಿದ್ದಕ್ಕೆ ವಿಧಾನಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಂದು ಸಿದ್ದರಾಮಯ್ಯ ನಿವಾಸ ಕಾವೇರಿಗೆ ಆಗಮಿಸಿ ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿ ತೆರಳುವ ಸಂದರ್ಭ ಸುದ್ದಿಗಾರರ ಎದುರು ಪಕ್ಷದ ಹೈಕಮಾಂಡ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ವಿರುದ್ಧ ತೀವ್ರವಾಗಿ ಹರಿಹಾಯ್ದ ಇಬ್ರಾಹಿಂ ತಮಗೆ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಸ್ಥಾನ ಕೈತಪ್ಪಿದ್ದಕ್ಕೆ ಉಪ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳಲು ಎಂದು ಸ್ಪಷ್ಟವಾಗಿ ತಿಳಿಸಿದರು.
ಉಪಚುನಾವಣೆಯಲ್ಲಿ ಕೆಲಸ ಮಾಡಿಲ್ಲ
ಮೊದಲೇ ನಾನು ಹೇಳಿದ್ದೆ ಉಪಚುನಾವಣೆಯಲ್ಲಿ ಕೆಲಸ ಮಾಡೋದಿಲ್ಲ ಅಂತ. ನನ್ನ ಕೈಲಾದಂತ ದೇವರು ಕೊಟ್ಟಂತ ಶಕ್ತಿ ಪ್ರಕಾರ ಮೊದಲೆಲ್ಲ ಕೆಲಸ ಮಾಡಿದ್ದೆ. ಈ ಮೊದಲೇ ನಾನು ಹೇಳಿದ್ದೆ ಕಾಂಗ್ರೆಸ್ಗೆ ಉತ್ತಮ ಫಲಿತಾಂಶ ಬರಲ್ಲ ಅಂತ. ಹಾಗೆ ಆಗಿದೆ. ವೀರಶೈವ ಸಮುದಾಯ ಯಡಿಯೂರಪ್ಪ ಕೈ ಹಿಡಿದಿದೆ, ಗೆದ್ದಿದ್ದಾರೆ. ಮೈನಸ್ ಯಡಿಯೂರಪ್ಪ ಬಿಜೆಪಿ ನಥಿಂಗ್. ಜೆಡಿಎಸ್ ನವರಿಗೆ ಒಕ್ಕಲಿಗ ಶಕ್ತಿ ಇತ್ತು, ಆದರೆ ಈಗ ಕೈ ಹಿಡಿಲಿಲ್ಲ. ಎರಡು ಪ್ರಬಲ ಸಮುದಾಯಗಳು ಬಿಜೆಪಿ ಪರ ನಿಂತವು. ವಾಸ್ತವಾಂಶ ಸತ್ಯಾಂತ ಹೇಳೋದಕ್ಕೆ ನಮ್ಮಲ್ಲಿ ಯಾರೂ ತಯಾರಿಲ್ಲ. ನಾವು ದುಡಿದು ಓಟು ಹಾಕಿಸಬೇಕು, ಆದರೆ ಡಿಸಿಷನ್ ತಗೋಳೊದ್ರಲ್ಲಿ ನಾವಿಲ್ಲ ಎಂದು ಬೇಸರ ತೋಡಿಕೊಂಡರು.
ಈ ಪದ್ದತಿ ಸರಿಯಿಲ್ಲ, ಅವಕಾಶ ಸಿಕ್ಕಾಗ ಓಟು ಹಾಕ್ತೀನಿ ಅಂದಿದ್ದೆ. ಕೌನ್ಸಿಲ್ ಸೀನಿಯರ್ ಮೋಸ್ಟ್ ಯಾರು? ಕೌನ್ಸಿಲ್ ನಲ್ಲಿ ಅಪೋಸಿಷನ್ ಲೀಡರ್ ಯಾರಾಗಬೇಕಿತ್ತು? ಶೇರ್ ಹಾಕಿದವರಿಗೆ ಶೇರ್ ಸರ್ಟಿಫಿಕೇಟ್ ಇಲ್ಲ. ವಿರೋಧ ಮಾಡೋದು ನಾವು, ಭಾಷಣ ಮಾಡೋದು ನಾವು, ವಿರೋಧ ಕಟ್ಕೊಳ್ಳೋದು ನಾವು, ಅಧಿಕಾರ ಅನುಭವಿಸೋದಕ್ಕೆ ಖುರ್ಚಿ ಮೇಲೆ ಕೂರುವುದಕ್ಕೆ ಬೇರೆಯವರಾ? ಸತ್ತಿದ್ದೀವಿ ಅಂದಮೇಲೆ ಶವ ಸಂಸ್ಕಾರನಾದ್ರೂ ಮಾಡಬೇಕಲ್ಲ, ಶವ ಸಂಸ್ಕಾರವೂ ಮಾಡದೇ ಸರ್ಕಲ್ ನಲ್ಲಿ ಶವ ಬಿಸಾಡಿ ಹೋದ್ರೆ ಹೇಗೆ?ಅದಕ್ಕಿಂತ ಮನೆ ಸಾವೇ ಬೆಸ್ಟು ಅನಿಸುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಹೈಕಮಾಂಡ್ ಅಲ್ಪ ಸಂಖ್ಯಾತ ಸಮುದಾಯದ ಕೈ ಹಿಡಿಲಿಲ್ಲ. ಕೆ.ಸಿ. ವೇಣುಗೋಪಾಲ್ ನಮ್ಮ ಪರವಾಗಿ ಮಾತನಾಡಬಹುದಿತ್ತು. ಕಾಂಗ್ರೆಸ್ ನಾಯಕರೂ ಯಾರೂ ಮಾತನಾಡಲೇ ಇಲ್ಲ. ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ವಿರುದ್ಧ ನನ್ನ ಸಿಟ್ಟಲ್ಲ, ಕಾಂಗ್ರೆಸ್ ಪಕ್ಷದ ವಿರುದ್ಧ ನನ್ನ ಸಿಟ್ಟು. ಅಲ್ಪ ಸಂಖ್ಯಾತ ಸಮಾಜ ಶೇ.15-16 ರಷ್ಟಿದೆ. ಈ ಸಾರಿ ಅಲ್ಪ ಸಂಖ್ಯಾತ ಸಮಾಜ ಬೇರೆಯವರ ಜೊತೆಗೆ ಗುರುತಿಸಿಕೊಂಡಿದೆ. ಅನೇಕ ಕಡೆ ಯಡಿಯೂರಪ್ಪ ಗೆ ಅಲ್ಪ ಸಂಖ್ಯಾತ ಸಮಾಜ ಓಟು ಹಾಕಿದೆ. ಹಳೆ ಮೈಸೂರು ಭಾಗದಲ್ಲೂ ಕೂಡ ಏನಾಗಿದೆ ನೋಡಬಹುದು. ಪಕ್ಷ ಕಟ್ಟುವಂಥದ್ದು ಕಷ್ಟ ಅಂತಲ್ಲ, ಆದರೆ ಮನಸ್ಸು ಮಾಡಬೇಕಷ್ಟೇ. ಪಕ್ಷ ಬಿಟ್ಟು ನಾವೆಲ್ಲಿ ಹೋಗಿದ್ದೇವೆ, ಎಷ್ಟು ದಿನ ಅಂತ ದುಡಿಯೋದ್ರಿ, ಅದಕ್ಕೊಂದು ಲಿಮಿಟ್ ಇಲ್ಲವೇನ್ರಿ ಎಂದು ಪ್ರಶ್ನಿಸಿದರು.
ಜನರನ್ನು ತಂದು ಭಾಷಣ ಮಾಡಲ್ಲ
ನಾನು ತಂದ ಜನಕ್ಕೆ ಭಾಷಣ ಮಾಡಲ್ಲ, ಬಂದಿರುವ ಜನಕ್ಕೆ ಭಾಷಣ ಮಾಡ್ತೇನೆ. ಕಾಂಗ್ರೆಸ್ ಪ್ರಚಾರಕ್ಕೆ ಮೊನ್ನೆ ಸೇರಿದವರೆಲ್ಲ ಬಂದ ಜನ ಅಲ್ಲ, ತಂದ ಜನ. ಹೀಗಾಗಿ ತಂದ ಜನರಿಂದ ಓಟು ಸಿಕ್ಕಿಲ್ಲ. ಜನರು ತಾವೇ ಬಂದರೆ ಪಕ್ಷ ಕಟ್ಟಬಹುದು. ನಾನು ಇವತ್ತೂ ಹೋಗಿ ಒಂದು ಕಡೆ ನಿಂತು ಬಾಯಿ ಬಡಕೊಂಡ್ರೆ 5000 ಜನ ಸೇರ್ತಾರೆ. ನಾನು ಕಟುವಾಗಿ ಮಾತನಾಡಿಕೊಂಡೇ ಬಂದಿದ್ದೇನೆ. ಇದೆಲ್ಲವನ್ನೂ ಕಾಂಗ್ರೆಸ್ ಪಕ್ಷ ಮಾಡಬೇಕಿತ್ತು, ಆದರೆ ಮಾಡ್ತಿಲ್ಲ ಎಂದು ಹೇಳಿದರು.
ಎರಡು ಮೋಸಂಬಿ ಒಂದು ಸಾಲು
ಸ್ಟಾರ್ ಕ್ಯಾಂಪೇನರ್ ಸ್ಟಾರ್ ಕ್ಯಾಂಪೇನರ್ ಅಂತ ಹೇಳೋದು, ಕರೆದು ಭಾಷಣ ಮಾಡಿಸೋದು. ಮನೆ ಕಟ್ಟಿಸಿಕೊಳ್ಳೋದು, ಆಮೇಲೆ ಎರಡು ಮೂಸಂಬಿ ಹಣ್ಣು ಒಂದು ಶಾಲು ಹಾಕಿ ಹೊರಗೆ ಕಳಿಸೋದು. ಮನೆ ಕಟ್ಟಿದೋರು ಹೊರಗೆ ಕಟ್ಟಿಸಿಕೊಂಡವರು ಒಳಗೆ. ನಮಗೆ ಈ ಪದ್ದತಿ ಸರಿ ಅನ್ಸಲ್ಲ, ನಾನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಮನೆಯಲ್ಲಿರ್ತೀವಿ, ಅವಕಾಶ ಬಂದಾಗ ಓಟು ಹಾಕ್ತೀವಿ. ಇದನ್ನೇ ಹೇಳಿ ಹೋಗಿದ್ದೆ ನಾನು, ರಿಸಲ್ಟ್ ಬಂದಾಗ ಏನಾಗಿದೆ ಗೊತ್ತಲ್ಲ ಎಂದರು.Conclusion:news
ETV Bharat Logo

Copyright © 2025 Ushodaya Enterprises Pvt. Ltd., All Rights Reserved.