ETV Bharat / state

ಕಾಂಗ್ರೆಸ್​ನಲ್ಲಿ ಭವಿಷ್ಯವಿಲ್ಲ, ಸ್ನೇಹಿತರು ನನ್ನ ದಾರಿ ಹಿಡಿದರೆ ಸಂತೋಷ: ಛಲವಾದಿ

ವಿಧಾನಸಭೆಯಿಂದ ವಿಧಾನ ಪರಿಷತ್​ಗೆ ಅವಿರೋಧವಾಗಿ ಆಯ್ಕೆಯಾಗಿದ್ದ ಏಳು ಮಂದಿ ಇಂದು ಪ್ರಮಾಣವಚನ ಸ್ವೀಕರಿಸಿದರು. ನಂತರ ಮಾಧ್ಯಮದವರೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

MLC Chalavadi narayanaswamy
ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ
author img

By

Published : Jun 16, 2022, 3:49 PM IST

ಬೆಂಗಳೂರು: "ಕಾಂಗ್ರೆಸ್​ನಲ್ಲಿ ಭವಿಷ್ಯ ಇಲ್ಲ. ಅಲ್ಲೇ ಇದ್ದಿದ್ದರೆ ನನ್ನ ಭವಿಷ್ಯ ಹಾಳಾಗುತ್ತಿತ್ತು" ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿದರು. ವಿಧಾನಸೌಧದಲ್ಲಿ ಇ‌ಂದು ವಿಧಾನ ಪರಿಷತ್ ನೂತನ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಜೆಪಿಗೆ ಬಂದು ಬೆಳೆಯುತ್ತಿದ್ದೇನೆ. ಕಾಂಗ್ರೆಸ್‌ ಪಕ್ಷದಲ್ಲಿರುವ ನನ್ನ ಸ್ನೇಹಿತರು ನನ್ನ ದಾರಿ ಹಿಡಿದರೆ ಸಂತೋಷಪಡುತ್ತೇನೆ. ಸ್ವಾಗತ ಕೋರುವುದಾಗಿ ಸಂದೇಶ ಕೊಡುತ್ತಿದ್ದೇನೆ" ಎಂದರು.

"1977-78ರಿಂದಲೂ ನಾನು ರಾಜಕಾರಣಿ. ನಾನು ಬಹಳ ವರ್ಷ ಕಾಂಗ್ರೆಸ್​ನಲ್ಲಿ ದುಡಿದಿದ್ದೇನೆ. ಅಲ್ಲಿ ಪ್ರಮುಖ ನಾಯಕರ ಕುಟುಂಬಕ್ಕೆ ಮಾತ್ರ ಅವಕಾಶ. ಕಾಂಗ್ರೆಸ್​ನಲ್ಲಿ ವಂಚನೆಗೆ ಒಳಗಾಗಿದ್ದೆ ಎಂದು ಆರೋಪಿಸಿದ ಅವರು, ಈಗ ಬಿಜೆಪಿ ನನಗೆ ಸೂಕ್ತ ಸ್ಥಾನ ನೀಡಿದೆ" ಎಂದು ಕೃತಜ್ಞತೆ ಸಲ್ಲಿಸಿದರು.

ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಮಾತನಾಡಿ, "ಜೆಡಿಎಸ್​ನ ಹಿರಿಯರು ಎಲ್ಲರೂ ಸೇರಿ ನನ್ನ ಮೇಲೆ ನಂಬಿಕೆ ಇಟ್ಟು ಜವಾಬ್ದಾರಿ ನೀಡಿದ್ದಾರೆ. ಎರಡನೇ ಬಾರಿಗೆ ಪರಿಷತ್ ಸದಸ್ಯನಾಗಿ ಕೆಲಸ ಮಾಡುವ ಅವಕಾಶ ಕೊಟ್ಟಿದ್ದಾರೆ. ಅವಕಾಶ ಸದ್ಭಳಕೆ ಮಾಡಿಕೊಂಡು ಜನಸೇವೆ ಮಾಡುತ್ತೇನೆ" ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್ ಮಾತನಾಡಿ, "ಮೇಲ್ಮನೆ ಚಿಂತಕರ ಚಾವಡಿ‌. ಸಾಮಾನ್ಯ ಕಾರ್ಯಕರ್ತನಾದ ನನ್ನನ್ನು ಪಕ್ಷ ಗುರುತಿಸಿದೆ. ಪಕ್ಷ ವಿಶಿಷ್ಟ ಎನ್ನುವುದಕ್ಕೆ ನಾನೇ ಉದಾಹರಣೆ. ತಳ ಮಟ್ಟದ ಕಾರ್ಯಕರ್ತ ನಾನು. ಸಮಾಜದ ಸಮಸ್ಯೆಗಳು, ಹಿಂದುಳಿದವರು, ನೇಕಾರರ ಸಮಸ್ಯೆಗಳ ಪರಿಹಾರಕ್ಕೆ ನಿರಂತರ ಹೋರಾಟ ಮಾಡುತ್ತೇನೆ" ಎಂದರು.

ಇದನ್ನೂ ಓದಿ: ವಿಧಾನಪರಿಷತ್ ಏಳು ನೂತನ ಸದಸ್ಯರಿಂದ ಪ್ರಮಾಣವಚನ ಸ್ವೀಕಾರ

ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್, "ಮೇಲ್ಮನೆ ಸದಸ್ಯನಾಗಿರುವುದು ನನಗೆ ಸುದಿನ. ಜೀವನದಲ್ಲಿ ದೊಡ್ಡ ದಿನ. ಪದವಿಯೆಂದು ಭಾವಿಸುತ್ತಿಲ್ಲ. ಬದಲಿಗೆ ಸೇವೆ ಮಾಡಲು ಸಿಕ್ಕ ಅವಕಾಶ" ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.