ETV Bharat / state

ಅತೃಪ್ತರ ರಾಜೀನಾಮೆ ಪರ್ವ: ಅಧಿವೇಶನ ಮುಂದೂಡಲು ದೋಸ್ತಿಗಳ ಚಿಂತನೆ - Allied government

ಶಾಸಕರ ರಾಜೀನಾಮೆ ಪ್ರಹಸನ ಆರಂಭವಾದ ಬಳಿಕ ಹಲವು ರೀತಿಯ ರಾಜಕೀಯ ಚರ್ಚೆಗಳು ನಡೆಯುತ್ತಿವೆ. ಸದ್ಯದ ಪರಿಸ್ಥಿತಿಯಿಂದ ಪಾರಾಗಲು ಮೈತ್ರಿ ಸರ್ಕಾರದ ನಾಯಕರು ಮತ್ತೊಂದು ಸುತ್ತಿನ ಮಾತುಕತೆಗೆ ಮುಂದಾಗಿದ್ದಾರೆ.

ಸಂಗ್ರಹ ಚಿತ್ರ
author img

By

Published : Jul 8, 2019, 10:06 AM IST

ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆ ಪರ್ವದಿಂದ ಮೈತ್ರಿ ಸರ್ಕಾರಕ್ಕೆ ಕುತ್ತು ಬಂದಿರುವುದರಿಂದ ಶುಕ್ರವಾರ 12 ರಿಂದ ಆರಂಭವಾಗಬೇಕಿದ್ದ ವಿದಾನಮಂಡಳ ಅಧಿವೇಶನ ಮುಂದೂಡುವ ಸಾಧ್ಯತೆಗಳಿವೆ.

ರಾಜಕೀಯ ಪರಿಸ್ಥಿತಿ ಹತೋಟಿಯಲ್ಲಿ ಇಲ್ಲದ್ದರಿಂದ ಅಧಿವೇಶನ ಮುಂದೂಡುವುದು ಉತ್ತಮ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಹೇಳಲಾಗಿದ್ದು, ದೋಸ್ತಿ ಪಕ್ಷಗಳ ಮುಖಂಡರು ಅಧಿವೇಶನ ನಡೆಸದೇ ಸದ್ಯಕ್ಕೆ ಮುಂದೂಡುವ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ಅತೃಪ್ತ ಶಾಸಕರು ಮನಸ್ಸು ಬದಲಾಯಿಸದಿದ್ದರೆ ಸರ್ಕಾರಕ್ಕೆ ಸಂಕಷ್ಟ ಎದುರಾಗಲಿದೆ. ಅಧಿವೇಶನದ ಸಂದರ್ಭದಲ್ಲಿ ಪ್ರತಿಪಕ್ಷ ಬಿಜೆಪಿ ಮೈತ್ರಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಬಹುದು. ಈ ಸಂದರ್ಭದಲ್ಲಿ ಅತೃಪ್ತ ಶಾಸಕರು ಅಧಿವೇಶನಕ್ಕೆ ಗೈರಾದರೆ ಸರ್ಕಾರ ಬಹುಮತ ಕಳೆದುಕೊಂಡು ಪತನಗೊಳ್ಳಬಹುದು. ಈ ಹಿನ್ನೆಲೆಯಲ್ಲಿ ರಾಜಕೀಯ ಪರಿಸ್ಥಿತಿ ತಿಳಿಯಾಗುವ ತನಕ ಅಧಿವೇಶನ ಮುಂದೂಡುವುದು ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಹೇಳಲಾಗ್ತಿದೆ.

ಅಧಿವೇಶನ ಮುಂದೂಡಿದರೆ ಮೈತ್ರಿ ಪಕ್ಷಗಳಿಗೆ ಅತೃಪ್ತರ ಮನವೊಲಿಸಲು ಮತ್ತಷ್ಟು ಕಾಲ ಸಿಕ್ಕಂತಾಗುತ್ತದೆ. ಈ ಸಂದರ್ಭದಲ್ಲಿ ರಾಜೀನಾಮೆ ಸಲ್ಲಿಸಿರುವ ಶಾಸಕರ ರಾಜೀನಾಮೆ ವಾಪಸ್​ ತಗೆದುಕೊಳ್ಳುವಂತೆ ಮಾಡಿ ಸರ್ಕಾರ ಸುಭದ್ರ ಪಡಿಸಿಕೊಳ್ಳಲು ಯೋಜನೆ ರೂಪಿಸಲಾಗುತ್ತದೆ.

ಅಧಿವೇಶನ ಮುಂದೂಡಬೇಕಾದರೆ ಸಿಎಂ ಕುಮಾರಸ್ವಾಮಿ ಕ್ಯಾಬಿನೆಟ್ ಸಭೆ ಕರೆದು ಅಲ್ಲಿ ತೀರ್ಮಾನ ತಗೆದುಕೊಂಡು ಅಧಿವೇಶನ ದಿನಾಂಕ ಮುಂದೂಡಬೇಕಾಗುತ್ತದೆ.

Intro: ಅತೃಪ್ತರ ರಾಜೀನಾಮೆ ಪರ್ವ : ಅಧಿವೇಶನ ಮುಂದೂಡಲು
ದೋಸ್ತಿಗಳ ಚಿಂತನೆ

ಬೆಂಗಳೂರು : ಅತೃಪ್ತ ಶಾಸಕರ ರಾಜೀನಾಮೆ ಪರ್ವದಿಂದಾಗಿ ಮೈತ್ರಿ ಸರಕಾರಕ್ಕೇ ಕುತ್ತು ಬಂದಿರುವುದರಿಂದ ಶುಕ್ರವಾರ ೧೨ ರಿಂದ ಆರಂಭವಾಗುವ ವಿದಾನಮಂಡಳ ಅಧಿವೇಶನ ಮುಂದೂಡುವ ಸಾದ್ಯತೆಗಳಿವೆ.

ರಾಜಕೀಯ ಪರಿಸ್ಥಿತಿ ಹತೋಟಿಯಲ್ಲಿ ಇಲ್ಲದ್ದರಿಂದ ಅಧಿವೇಶನ ಮುಂದೂಡುವದು ಉತ್ತಮ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಹೇಳಲಾಗಿದ್ದು ದೋಸ್ತಿ ಪಕ್ಷಗಳ ಮುಖಂಡರು ಅಧಿವೇಶನ ನಡೆಸದೇ ಸದ್ಯಕ್ಕೆ ಮುಂದೂಡುವ ಸಾದ್ಯತೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ಅತೃಪ್ತ ಶಾಸಕರು ಮನಸ್ಸು ಬದಲಾಯಿಸದಿದ್ದರೆ ಸರಕಾರಕ್ಕೇ ಸಂಕಷ್ಟ ಎದುರಾಗಲಿದೆ. ಅಧಿವೇಶನದ ಸಂದರ್ಭದಲ್ಲಿ ಪ್ರತಿಪಕ್ಷ ಬಿಜೆಪಿ ಮೈತ್ರಿ ಸರಕಾರದ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಬಹುದು. ಈ ಸಂದರ್ಭದಲ್ಲಿ ಅತೃಪ್ತ ಶಾಸಕರು ಅಧಿವೇಶನಕ್ಕೆ ಗೈರಾದರೆ ಸರಕಾರ ಬಹುಮತ ಕಳೆದುಕೊಂಡು ಪತನಗೊಳ್ಳಬಹುದು. ಈ ಹಿನ್ನೆಲೆಯಲ್ಲಿ ರಾಜಕೀಯ ಪರಿಸ್ಥಿತಿ ತಿಳಿಯಾಗುವ ತನಕ ಅಧಿವೇಶನ ಮುಂದೂಡುವುದು ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಹೇಳಲಾಗಿದೆ.

Body: ಅಧಿವೇಶನ ಮುಂದೂಡಿದರೆ ಮೈತ್ರಿ ಪಕ್ಷಗಳಿಗೆ ಅತೃಪ್ತರ ಮನವೊಲಿಸಲು ಮತ್ತಷ್ಟು ಕಾಲ ಸಿಕ್ಕಹಾಗುತ್ತದೆ. ಈ ಸಂದರ್ಭದಲ್ಲಿ ರಾಜೀನಾಮೆ ಸಲ್ಲಿಸಿರುವ ಶಾಸಕರ ರಾಜೀನಾಮೆ ವಾಪಾಸ್ಸು ತಗೆದುಕೊಳ್ಳುವಂತೆ ಮಾಡಿ ಸರಕಾರ ಸುಭದ್ರ ಪಡಿಸಿಕೊಳ್ಳಲು ಯೋಜನೆ ರೂಪಿಸಲಾಗುತ್ತದೆ.

ಅಧಿವೇಶನ ಮುಂದೂಡಬೇಕಾದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಕ್ಯಾಬಿನೆಟ್ ಸಭೆ ಕರೆದು ಅಲ್ಲಿ ತೀರ್ಮಾನ ತಗೆದುಕೊಂಡು ಅಧಿವೇಶನ ದಿನಾಂಕ ಮುಂದೂಡಬೇಕಾಗುತ್ತದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.