ETV Bharat / state

ಶಾಸಕರ ಇಚ್ಛಾಶಕ್ತಿ ಕೊರತೆ.. ವೆಚ್ಚವಾಗದೆ ಉಳಿದ 976 ಕೋಟಿ ರೂ. ಶಾಸಕರ ನಿಧಿ - MLA's reluctance to submit action plan

ಶಾಸಕರ ನಿಧಿಯಡಿ ಬಿಡುಗಡೆಯಾದ ಅನುದಾನ ಸಂಬಂಧ ಶಾಸಕರು ಕ್ರಿಯಾ ಯೋಜನೆ ಸಲ್ಲಿಸಲು ನಿರಾಸಕ್ತಿ ತೋರುತ್ತಿದ್ದಾರೆ. 2019–20ನೇ ಸಾಲಿನಲ್ಲಿ ಕೇವಲ 52 ಶಾಸಕರು ಮತ್ತು 7 ವಿಧಾನ ಪರಿಷತ್‌ ಸದಸ್ಯರು ಮಾತ್ರ ಕ್ರಿಯಾ ಯೋಜನೆ ಸಲ್ಲಿಸಿದ್ದಾರೆ.

pending mla fund
ಕ್ರಿಯಾ ಯೋಜನೆ ಸಲ್ಲಿಸಲು ಶಾಸಕರ ನಿರಾಸಕ್ತಿ
author img

By

Published : Jan 23, 2021, 4:23 PM IST

ಬೆಂಗಳೂರು: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಕಾಮಗಾರಿಗಳ ಪ್ರಗತಿ ಆಮೆಗತಿಯಲ್ಲಿ ಸಾಗುತ್ತಿದೆ. ಎರಡು ವರ್ಷವಾದರೂ ಬಹುತೇಕ ಕಾಮಗಾರಿಗಳು ಆರಂಭಗೊಳ್ಳದೇ ಹಾಗೇ ಉಳಿದುಕೊಂಡಿದ್ದು, ಬಿಡುಗಡೆ ಮಾಡಿದ ಕೋಟ್ಯಾಂತರ ರೂ.ವೆಚ್ಚವಾಗದೇ ಜಿಲ್ಲಾಧಿಕಾರಿಗಳ ವೈಯಕ್ತಿಕ ಠೇವಣಿ (ಪಿಡಿ) ಖಾತೆಯಲ್ಲಿ ಕೊಳೆಯುತ್ತಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.

remaining MLA fund
ವೆಚ್ಚವಾಗದೇ ಹಾಗೇ ಉಳಿದಿರುವ ಶಾಸಕರ ನಿಧಿ

ಶಾಸಕರ ನಿಧಿಯಡಿ ಬಿಡುಗಡೆಯಾಗುತ್ತಿರುವ ಅನುದಾನ ಬಳಕೆಯಾಗದೇ ಹಾಗೇ ಉಳಿದುಕೊಂಡಿದೆ. ಅಲ್ಪ ಪ್ರಮಾಣದ ಕಾಮಗಾರಿಗಳಷ್ಟೇ ಪೂರ್ಣಗೊಂಡಿದ್ದು, ಹಲವು ಕಾಮಗಾರಿಗಳು ಹಾಗೇ ಉಳಿದುಕೊಂಡಿದೆ. ಇದರಲ್ಲಿ ಎರಡು ವರ್ಷಗಳಿಂದಲೂ ಹಲವು ಕಾಮಗಾರಿಗಳು ಪೂರ್ಣಗೊಳ್ಳದೇ ಹಾಗೇ ಉಳಿದುಕೊಂಡಿದೆ. ಇತ್ತ ಜನಪ್ರತಿನಿಧಿಗಳು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಅನುದಾನ ಬಿಡುಗಡೆಯಾಗುತ್ತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಆದರೆ ಅತ್ತ ಕಾಮಗಾರಿ ಸಂಬಂಧ ಕ್ರಿಯಾ ಯೋಜನೆ ಸಲ್ಲಿಸಲು ಶಾಸಕರು ನಿರಾಸಕ್ತಿ ತೋರುತ್ತಿದ್ದಾರೆ. ಹೀಗಾಗಿ ನೂರಾರು ಕೋಟಿ ಶಾಸಕರ ನಿಧಿ ಮೊತ್ತ ವೆಚ್ಚವಾಗದೇ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಉಳಿದುಕೊಂಡಿದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

pending mla fund
ವೆಚ್ಚವಾಗದೇ ಹಾಗೇ ಉಳಿದಿರುವ ಶಾಸಕರ ನಿಧಿ

ವಿನಿಯೋಗವಾಗದೆ ಕೊಳೆಯುತ್ತಿದೆ ಶಾಸಕರ ನಿಧಿ:
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಸರ್ಕಾರ ಅನುದಾನ ಬಿಡುಗಡೆ ಮಾಡಿದರೂ ಅದರ ಬಳಕೆ ಮಾತ್ರ ಅಷ್ಟಕ್ಕಷ್ಟೇ. ಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ನೀಡಿರುವ ಅಂಕಿಅಂಶದ ಪ್ರಕಾರ 2020-21ನೇ ಸಾಲಿನಲ್ಲಿ ಡಿಸೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಿರುವ ಶಾಸಕರ ನಿಧಿ ಮೊತ್ತದಲ್ಲಿ 761.76 ಕೋಟಿ ರೂ. ವೆಚ್ಚವಾಗದೇ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಉಳಿದುಕೊಂಡಿದೆ.

ಈ ಪೈಕಿ ಹಿಂದಿನ ಆರ್ಥಿಕ ವರ್ಷದ ಕೊನೆಗೆ 672 ಕೋಟಿ ರೂ. ವೆಚ್ಚವಾಗದೇ ಉಳಿದುಕೊಂಡಿದೆ. ಈ ಆರ್ಥಿಕ ಸಾಲಿನಲ್ಲಿ 296 ಕೋಟಿ ರೂ. ಶಾಸಕರ ನಿಧಿಯ ಅನುದಾನ ಬಿಡುಗಡೆ ಮಾಡಲಾಗಿದೆ. ಆ ಮೂಲಕ ಒಟ್ಟು 976 ಕೋಟಿ ರೂ. ಅನುದಾನ ಡಿಸಿಗಳ ಪಿಡಿ ಖಾತೆಯಲ್ಲಿ ಇತ್ತು. ಏ. 2020ರಿಂದ ಡಿಸೆಂಬರ್ ಅಂತ್ಯದವರೆಗೆ 214.29 ಕೋಟಿ ರೂ. ಶಾಸಕರ‌ ನಿಧಿ ವೆಚ್ಚವಾಗಿದೆ. ಹೀಗಾಗಿ ಡಿಸೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಿರುವ ಶಾಸಕರ ನಿಧಿ ಮೊತ್ತದಲ್ಲಿ 761.76 ಕೋಟಿ ರೂ. ವೆಚ್ಚವಾಗದೇ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಉಳಿದುಕೊಂಡಿದೆ.

ಪ್ರಸಕ್ತ ಸಾಲಿನಲ್ಲಿ ಬಿಡುಗಡೆಯಾದ ಶಾಸಕರ ನಿಧಿ:

ಪ್ರಸಕ್ತ ಸಾಲಿನಲ್ಲಿ ಪ್ರತಿ ಶಾಸಕರಿಗೆ ತಲಾ 1 ಕೋಟಿ ರೂ.ನಂತೆ ಅನುದಾನ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಅದರಂತೆ ತಲಾ 50 ಲಕ್ಷ ರೂ.ನಂತೆ ಮೊದಲ‌ ಕಂತಿನ ಅನುದಾನ 142.47 ಕೋಟಿ ರೂ.ಗಳನ್ನು ಸೆ. 18ರಂದು ಬಿಡುಗಡೆ ಮಾಡಲಾಗಿತ್ತು.

2ನೇ ಕಂತಿನ ಅನುದಾನ 154.80 ಕೋಟಿಯನ್ನು ಸರ್ಕಾರ ನ. 9ರಂದು ಬಿಡುಗಡೆ ಮಾಡಿದೆ. ಕ್ಷೇತ್ರಾಭಿವೃದ್ಧಿಗೆ ಅನುದಾನ ಬಿಡುಗಡೆ ಆಗುತ್ತಿಲ್ಲ ಎಂದು ಬಿಜೆಪಿ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆ ಜನವರಿ ಮೊದಲ ವಾರದಲ್ಲಿ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಾಗಿ ತಲಾ 50 ಲಕ್ಷ ರೂ.ನಂತೆ 3ನೇ ಕಂತಿನಲ್ಲಿ ತಕ್ಷಣ ಒಟ್ಟು 150 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ಸಿಎಂ ಯಡಿಯೂರಪ್ಪ ಆರ್ಥಿಕ ಇಲಾಖೆಗೆ ಸೂಚನೆ ನೀಡಿದ್ದಾರೆ.

ಎರಡು ವರ್ಷವಾದರೂ ಆರಂಭಗೊಳ್ಳದ ಕಾಮಗಾರಿ:

ಶಾಸಕರ ನಿಧಿಯಡಿ ಬಿಡುಗಡೆಯಾದ ಅನುದಾನ ಸಂಬಂಧ ಶಾಸಕರು ಕ್ರಿಯಾಯೋಜನೆ ಸಲ್ಲಿಸಲು ನಿರಾಸಕ್ತಿ ತೋರುತ್ತಿದ್ದಾರೆ. 2019–20ನೇ ಸಾಲಿನಲ್ಲಿ ಕೇವಲ 52 ಶಾಸಕರು ಮತ್ತು 7 ವಿಧಾನ ಪರಿಷತ್‌ ಸದಸ್ಯರು ಮಾತ್ರ ಕ್ರಿಯಾ ಯೋಜನೆ ಸಲ್ಲಿಸಿದ್ದಾರೆ. ಈ ಸಾಲಿನಲ್ಲಿ 300 ಕೋಟಿ ರೂ.ನಲ್ಲಿ ಹೊಸ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ರೂಪಿಸಲು ರಾಜ್ಯ ಸರ್ಕಾರ ಈಗಾಗಲೇ ಸೂಚನೆ ನೀಡಿದೆ.

ಶಾಸಕರ ನಿಧಿಯಡಿ ಎರಡು ವರ್ಷವಾದರೂ ಒಟ್ಟು 20,265 ಕಾಮಗಾರಿಗಳು ಪ್ರಾರಂಭವಾಗದೇ ಹಾಗೇ ಉಳಿದುಕೊಂಡಿದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ನೀಡಿರುವ ಅಂಕಿಅಂಶದಲ್ಲಿ ಬಯಲಾಗಿದೆ. ಡಿಸೆಂಬರ್ ಅಂತ್ಯದವರೆಗೆ ಶಾಸಕರ ನಿಧಿಯಡಿ 37,562 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿತ್ತು. ಈ ಪೈಕಿ 12,345 ಕಾಮಗಾರಿಗಳು ಪೂರ್ಣಗೊಂಡಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.