ETV Bharat / state

ಪಿಎಫ್​ಐ ನಿಷೇಧಿಸುವ ಮೊದಲು RSS, ಬಜರಂಗದಳ ನಿಷೇಧಿಸಿ: ಶಾಸಕ ಜಮೀರ್ ಅಹ್ಮದ್

ಮೊದಲಿನಿಂದಲೂ ಹಿಂದೂ-ಮುಸ್ಲಿಂರು ಸಹಬಾಳ್ವೆ ನಡೆಸಿಕೊಂಡು ಬಂದಿದ್ದೇವೆ. ಆದರೆ, ಬಿಜೆಪಿ ಸರ್ಕಾರ ನಮ್ಮ ಬಾಂಧವ್ಯದ ಮಧ್ಯೆ ಒಡಕು ಮೂಡಿಸುವ ಕಾರ್ಯಕ್ಕೆ ಮುಂದಾಗಿದೆ ಎಂದು ಶಾಸಕ ಜಮೀರ್​ ಅಹ್ಮದ್​ ಖಾನ್​ ಆರೋಪಿಸಿದ್ದಾರೆ.

ಪಿಎಫ್​ಐ ನಿಷೇಧಿಸುವ ಮೊದಲು RSS, ಭಜರಂಗದಳ  ನಿಷೇಧಿಸಿ: ಶಾಸಕ ಜಮೀರ್ ಅಹ್ಮದ್

author img

By

Published : Apr 4, 2022, 8:13 PM IST

Updated : Apr 4, 2022, 8:37 PM IST

ಬೆಂಗಳೂರು: ಸರ್ಕಾರ ಎಸ್​​ಡಿಪಿಐ ಮತ್ತು ಪಿಎಫ್​ಐ ನಿಷೇಧಿಸುವ ಬದಲು ಆರ್​​ಎಸ್‌ಎಸ್ ಮತ್ತು ಭಜರಂಗದಳವನ್ನು ನಿಷೇಧಿಸಲಿ ಎಂದು ಜಮೀರ್ ಅಹಮ್ಮದ್ ಆಗ್ರಹಿಸಿದ್ದಾರೆ. ಚಾಮರಾಜಪೇಟೆ ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು, ಇದುವರೆಗೂ ಶಾಂತಿ, ಸಮನ್ವಯತೆಯಿಂದ ಇದ್ದ ರಾಜ್ಯದಲ್ಲಿ ಹಿಜಾಬ್ ವಿಚಾರವಾಗಿ ವಿದ್ಯಾರ್ಥಿಗಳನ್ನು ಇಟ್ಟುಕೊಂಡು ರಾಜಕೀಯ ಮಾಡಲು ಹೊರಟಿದ್ದು ಯಾರು? ಎಂದು ಪ್ರಶ್ನಿಸಿದ್ದಾರೆ.

ಅಷ್ಟೇ ಅಲ್ಲ ಹಲಾಲ್ ವಿಚಾರವಾಗಿ ಗೊಂದಲ ಸೃಷ್ಟಿಸುತ್ತಿರುವವರು ಯಾರು?. ಯಾಕೆ ಪಿಎಫ್​ಐ, ಎಸ್​ಡಿಪಿಐ ಬ್ಯಾನ್ ಮಾಡಬೇಕು?. ಮೊದಲಿಗೆ ಆರ್​​​ ಎಸ್ಎಸ್ ಮತ್ತು ಭಜರಂಗದಳವನ್ನು ನಿಷೇಧಿಸಲಿ. ಬಳಿಕ ಪಿಎಫ್ ಐ ಮತ್ತು ಎಸ್​​ಡಿಪಿಐ ಬಗ್ಗೆ ಯೋಚನೆ ಮಾಡೋಣ ಎಂದು ಜಮೀರ್ ಅಹ್ಮದ್ ಖಾನ್ ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರ ಮಾರ್ಚ್ 4 ರಂದು ಘೋಷಣೆ ಮಾಡಿರುವ ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಅಲ್ಪಸಂಖ್ಯಾತರಿಗೆ 3,200 ಕೋಟಿ ರೂ. ಬಜೆಟ್ ಮೀಸಲಿಟ್ಟಿದ್ದರು.

ಆದರೆ, ಇದೀಗ ಬಿಜೆಪಿ ಸರ್ಕಾರ ಬಜೆಟ್ ನ್ನು 1,150 ಕೋಟಿ ರೂ. ಗೆ ಇಳಿಸಿದೆ. ಅದಕ್ಕಾಗಿ ಮುಸ್ಲಿಂ ರಾಜಕೀಯ ನಾಯಕರೆಲ್ಲರೂ ಸೇರಿ ಮುಖ್ಯಮಂತ್ರಿ ಬಸವರಾಜ ಮೊಮ್ಮಾಯಿ ಅವರನ್ನು ಭೇಟಿ ಮಾಡಿ ಅಲ್ಪಸಂಖ್ಯಾತರ ಬಜೆಟ್ ಮೊತ್ತ ಇಳಿಕೆ ಮಾಡದಂತೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು.

ಶಾಸಕ ಜಮೀರ್ ಅಹ್ಮದ್

ಮಸೀದಿ ಧ್ವನಿವರ್ಧಕ ನಿಷೇಧ ವಿಚಾರವಾಗಿ ಮಾತನಾಡಿದ ಅವರು, ರಾತ್ರಿ 12 ರಿಂದ ಬೆಳಗ್ಗೆ 6ರವರೆಗೆ ಜೋರಾಗಿ ಧ್ವನಿ ವರ್ದಕಗಳನ್ನು ಬಳಸದಂತೆ ನ್ಯಾಯಾಲಯದ ಆದೇಶವಿದೆ. ಆ ಪ್ರಕಾರ, ಮಸೀದಿಗಳಲ್ಲಿ 10 ಡೆಸಿಬಲ್​​ಗಿಂತ ಕಡಿಮೆ ಧ್ವನಿವರ್ಧಕಗಳನ್ನು ಬಳಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: ಯುವ ಇತಿಹಾಸಕಾರರೊಂದಿಗೆ ವಿಶೇಷ ಸಂಭಾಷಣೆ : ಈ ವಯಸ್ಸಲ್ಲೇ ಚಂದ್ರನೆತ್ತರದ ಸಾಧನೆ!

ಮೊದಲಿನಿಂದಲೂ ಹಿಂದೂ ಮುಸ್ಲಿಂ ಸಹಬಾಳ್ವೆ ನಡೆಸಿಕೊಂಡು ಬಂದಿದ್ದೇವೆ. ಆದರೆ, ಬಿಜೆಪಿ ಸರ್ಕಾರ ನಮ್ಮ ಬಾಂಧವ್ಯದ ಮಧ್ಯೆ ಒಡಕು ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದು, ಹಿಜಾಬ್ ಆಯಿತು. ಇದೀಗ ಹಲಾಲ್ ವಿಚಾರ ಎಳೆದು ತಂದು ಇಲ್ಲದ ಗೊಂದಲ ಸೃಷ್ಟಿಸಿ ಸರ್ಕಾರ ಏನು ಸಾಧಿಸಲು ಹೊರಟಿದೆ ತಿಳಿಯುತ್ತಿಲ್ಲ. ಇದರಿಂದ ಬಡ ವ್ಯಾಪಾರಿಗಳಿಗೆ ಆಗುವ ನಷ್ಟ ಭರಿಸುವವರು ಯಾರು ಎಂದು ಪ್ರಶ್ನಿಸಿದರು.

ಜಾತಿ ರಾಜಕಾರಣದಿಂದ ರಾಜ್ಯದ ಅಭಿವೃದ್ಧಿಗೆ ಪೆಟ್ಟು ಬೀಳುತ್ತದೆ. ಹೂಡಿಕೆದಾರರು ರಾಜ್ಯದಲ್ಲಿ ಹಣ ಹೂಡಿಕೆ ಮಾಡಲು ಮುಂದೆ ಬರುವುದಿಲ್ಲ. ಇದರಿಂದ ರಾಜ್ಯವು ಆರ್ಥಿಕವಾಗಿ ಹಿಂದೆ ಉಳಿಯುತ್ತದೆ ಎಂದು ಬಯೋಕಾನ್ ಸಂಸ್ಥೆ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ಮಾಡಿರುವ ಟ್ವೀಟ್​​​ ಬಗ್ಗೆ ಉಲ್ಲೇಖಿಸಿದ ಅವರು, ಇನ್ನಾದರೂ ಈ ಜಾತಿ ರಾಜಕಾರಣ ಬಿಟ್ಟು ಎಲ್ಲರೂ ಜೊತೆಯಾಗಿ ರಾಜ್ಯದ ಅಭಿವೃದ್ಧಿಗೆ ಪೂರಕವಾದ ಕಾರ್ಯಗಳನ್ನು ಮಾಡೋಣ ಎಂದು ಮನವಿ ಮಾಡಿದರು.

Last Updated : Apr 4, 2022, 8:37 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.