ETV Bharat / state

ಕೋವಿಡ್ ಭ್ರಷ್ಟಾಚಾರ ಮಾಹಿತಿಯನ್ನು ಯತ್ನಾಳ್ ಕೇಂದ್ರ ನಾಯಕರ ಬದಲು ತನಿಖಾ ಆಯೋಗಕ್ಕೆ ನೀಡಲಿ: ದಿನೇಶ್ ಗುಂಡೂರಾವ್ - ತನಿಖಾ ಆಯೋಗ

ಕೋವಿಡ್ ಭ್ರಷ್ಟರ ಬಗ್ಗೆ ಯತ್ನಾಳ್ ತನಿಖಾ ಆಯೋಗಕ್ಕೆ ಮಾಹಿತಿ ನೀಡುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.

yatnal-should-inform-to-commission-of-inquiry-about-covid-corruption-dinesh-gundurao
ಕೋವಿಡ್ ಭ್ರಷ್ಟಾಚಾರ ಮಾಹಿತಿ ಯತ್ನಾಳ್ ಕೇಂದ್ರ ನಾಯಕರ ಬದಲು ತನಿಖಾ ಆಯೋಗಕ್ಕೆ ನೀಡಲಿ: ದಿನೇಶ್ ಗುಂಡೂರಾವ್
author img

By ETV Bharat Karnataka Team

Published : Jan 10, 2024, 12:37 PM IST

ಬೆಂಗಳೂರು: ಕೋವಿಡ್ ವೇಳೆ ಕಾಯಕ ಮರೆತು ಕಳಂಕದ ಕೆಲಸ ಮಾಡಿದ ಭ್ರಷ್ಟರ ಮಾಹಿತಿಯನ್ನು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮ ಕೇಂದ್ರ ನಾಯಕರಿಗೆ ನೀಡಿದರೆ ಏನು ಪ್ರಯೋಜನ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕೇಂದ್ರ ನಾಯಕರ ಸಹಕಾರವಿಲ್ಲದೇ 40 ಸಾವಿರ ಕೋಟಿ ರೂ. ಕೋವಿಡ್ ಭ್ರಷ್ಟಾಚಾರ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರದಲ್ಲಿ ನಡೆದಿರುತ್ತಾ?. ಕೋವಿಡ್ ಭ್ರಷ್ಟಾಚಾರದ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮಲ್ಲಿರುವ ಮಾಹಿತಿ, ದಾಖಲೆಗಳನ್ನು ಕೇಂದ್ರ ನಾಯಕರಿಗೆ ನೀಡುವ ಬದಲು ಜಸ್ಟಿಸ್ ಕುನ್ನಾ ಅವರ ತನಿಖಾ ಆಯೋಗಕ್ಕೆ ನೀಡಲಿ ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಹಿಂದಿನ ಸರ್ಕಾರದಲ್ಲಿ ಕೊರೊನಾ ವೇಳೆ ₹40 ಸಾವಿರ ಕೋಟಿ ಅವ್ಯವಹಾರ: ಯತ್ನಾಳ್ ಗಂಭೀರ ಆರೋಪ

ಬಸವೇಶ್ವರರ ಅನುಯಾಯಿ ಎಂದು ಹೇಳಿಕೊಳ್ಳುವ ಬಸನಗೌಡ ಯತ್ನಾಳ್ ಅವರು ಅಂತರಂಗ ಶುದ್ಧಿ, ಬಹಿರಂಗ ಶುದ್ಧಿ ಎರಡನ್ನೂ ಪಾಲಿಸಬೇಕು. ನಾಲ್ಕು ಗೋಡೆಗಳ ಮಧ್ಯೆ ಕೇಂದ್ರ ನಾಯಕರಿಗಷ್ಟೇ ಮಾಹಿತಿ ನೀಡಿದ್ದೇನೆ ಎಂದರೆ, ಅದರಿಂದ ಪ್ರಯೋಜನವಿಲ್ಲ ಎಂದು ದಿನೇಶ್ ಗುಂಡೂರಾವ್ ತಮ್ಮ ಪೋಸ್ಟ್​​ನಲ್ಲಿ ಉಲ್ಲೇಖಿಸಿದ್ದಾರೆ.

yatnal-should-inform-to-commission-of-inquiry-about-covid-corruption-dinesh-gundurao
ಸಚಿವ ದಿನೇಶ್ ಗುಂಡೂರಾವ್ ಪೋಸ್ಟ್​​

ಬಸವಣ್ಣನವರ ವಚನ ಪ್ರಸ್ತಾಪಿಸಿರುವ ಸಚಿವರು, ಕೋವಿಡ್ ವೇಳೆ ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಶ್ರೇಷ್ಠ ಸಂದೇಶವನ್ನು ಪಾಲಿಸಬೇಕಿತ್ತು. ಆದರೆ, ಜನರ ಜೀವ ಉಳಿಸಲು ಹೋರಾಟ ನಡೆಯುತ್ತಿದ್ದಾಗ ಬರೀ ಕಳಂಕದ ಕೆಲಸದಲ್ಲಿ ತೊಡಗಿದ್ದು, ಅತ್ಯಂತ ಅಮಾನವೀಯ ಎಂದು ಆರೋಗ್ಯ ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿಯದ್ದು 40% ಸರ್ಕಾರ, ನಮ್ಮ ಆರೋಪಕ್ಕೆ ಯತ್ನಾಳ್ ಸಾಕ್ಷ್ಯ ಒದಗಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.