ETV Bharat / state

ಭಾರತ್ ಜೋಡೋ ಬಂದ ಪುಟ್ಟ ಹೋದ ಪುಟ್ಟ ಅಷ್ಟೇ.. ಬೊಜ್ಜು ಕರಗಿಸುವ ಯಾತ್ರೆ: ರೇಣುಕಾಚಾರ್ಯ ವ್ಯಂಗ್ಯ - ಮೋದಿ ಪ್ರಬುದ್ಧ ರಾಜಕಾರಣಿ

ಸಿದ್ದರಾಮಯ್ಯ ಅವರೇ 2023ರ ಚುನಾವಣೆ ಬರುತ್ತೆ ಕಾದು ನೋಡಿ. ಸ್ಟ್ರಾಂಗ್ ನಿವ್ಯಾರು ಅಲ್ಲ. ರಾಜ್ಯದ ಪ್ರಜ್ಞಾವಂತ ಮತದಾರ. ನೀವು ಮಾಡುತ್ತಿರುವ ಭಾರತ್​ ಜೋಡೋ ಯಾತ್ರೆ, ಕೇವಲ ಬೊಜ್ಜು ಕರಗಿಸುವ ಯಾತ್ರೆ ಎಂದು ಎಂ ಪಿ ರೇಣುಕಾಚಾರ್ಯ ಲೇವಡಿ ಮಾಡಿದರು.

Renukacharya
ರೇಣುಕಾಚಾರ್ಯ
author img

By

Published : Oct 13, 2022, 4:29 PM IST

ಬೆಂಗಳೂರು: ಭಾರತ್ ಜೋಡೋ ಬಂದ್ಯಾ ಪುಟ್ಟ ಹೋದ್ಯಾ ಪುಟ್ಟ ಅಷ್ಟೇ. ಬೊಜ್ಜು, ಕೊಬ್ಬು ಕರುಗಿಸುವ ಸಲುವಾಗಿ ಮಾಡ್ತಿದ್ದಾರೆ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಲೇವಡಿ ಮಾಡಿದರು.

ಮೋದಿ ವಿಶ್ವ ಗುರು: ವಿಧಾನಸೌಧದಲ್ಲಿ ‌ಮಾತನಾಡಿದ ಅವರು, ಇವತ್ತು ಓಡ್ತಾ ಇರುವ ರಾಹುಲ್ ಗಾಂಧಿ ಪುಕ್ಕಲು ಗುರು. ನಮ್ಮ ಮೋದಿ ವಿಶ್ವ ಗುರು. ಸಿದ್ದರಾಮಯ್ಯ ಕಾಂಗ್ರೆಸ್ ಸೇರುವ ಮೊದಲು ಸಮಾಜವಾದಿ. ಕುರ್ಚಿಗಾಗಿ ಪಕ್ಷ ಬದಲಾವಣೆ ಮಾಡಿದ್ರು. ಕೋಟಿ ಬೆಲೆಯ ವಾಚ್ ಕಟ್ಟಿದ್ರು. ಆಗ ಮಜವಾದಿ ಆದರು. ಅರ್ಕಾವತಿ ರೀಡೂ ಮಾಡಿದ್ರು‌ ಎಂದು ಟೀಕಿಸಿದರು.

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ

ಯಾರು ಸ್ಟ್ರಾಂಗ್ ಎನ್ನೋದನ್ನ ವಿಧಾನಸಭೆ ಚುನಾವಣೆಯಲ್ಲಿ ಜನ ತೀರ್ಮಾನ ಮಾಡ್ತಾರೆ. ಜನ ಸ್ಟ್ರಾಂಗ್. ನೆಹರು ಚೀನಾಕ್ಕೆ ಭೂಮಿ ಬಿಟ್ಟುಕೊಟ್ಟರಲ್ಲ, ನಿಮ್ಮ ನಾಯಕರು ಸ್ಟ್ರಾಂಗಾ?. ಪಾಕ್ ಆಕ್ರಮಿತ ಕಾಶ್ಮೀರ ಬಿಟ್ಟುಕೊಟ್ಟರಲ್ಲ, ಯಾರು ಸ್ಟ್ರಾಂಗ್? ಎಂದು ವಾಗ್ದಾಳಿ ನಡೆಸಿದರು.

ನಿಮ್ಮಲ್ಲಿ ಎಷ್ಟು ಹೊಂದಾಣಿಕೆ ಇದೆ ?: ಮೇಕೆದಾಟು ಪಾದಯಾತ್ರೆ ವೇಳೆ ಸಿದ್ದರಾಮಯ್ಯ ಮಾತನಾಡುವಾಗ, ಡಿ.ಕೆ.ಶಿವಕುಮಾರ್ ಸೆಲ್ಫಿ ಹೊಡೆಸಿಕೊಳ್ತಾ ನಿಂತಿದ್ರು. ಟಿಕೆಟ್ ಫೈನಲ್ ಮಾಡೋದು ನಾನೇ ಅಂದ್ರಲ್ಲ ಡಿಕೆಶಿ. ನಿಮ್ಮಲ್ಲಿ ಎಷ್ಟು ಹೊಂದಾಣಿಕೆ ಇದೆ ಎಂದು ಪ್ರಶ್ನಿಸಿದರು. ಯಡಿಯೂರಪ್ಪ ಕುರ್ಚಿ ಬಿಡುವಾಗ ಕಣ್ಣೀರು ಹಾಕಿದ್ದು ಭಾವೋದ್ವೇಗಕ್ಕೆ. ಪಾರ್ಟಿ ನೀಡಿದ್ದ ಅವಕಾಶಕ್ಕೆ. ಸೆಕೆಂಡ್ ಲೈನ್ ನಾಯಕರನ್ನು ಬೆಳೆಸಲು ಯಡಿಯೂರಪ್ಪ ರಾಜೀನಾಮೆ ನೀಡಿದರು ಎಂದು ಇದೇ ವೇಳೆ ತಿಳಿಸಿದರು.

ಮೋದಿ ಪ್ರಬುದ್ಧ ರಾಜಕಾರಣಿ: ಪ್ರಧಾನ ಮಂತ್ರಿ ಸುದ್ದಿಗೋಷ್ಠಿ ಮಾಡಲಿ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಮೋದಿಗೆ ಹೇಳುವಷ್ಟು ನಾವು ದೊಡ್ಡವರಲ್ಲ. ಮೋದಿಗೆ ಹೇಳುವಷ್ಟು ಶಕ್ತಿ ನಮಗ್ಯಾರಿಗೂ ಇಲ್ಲ. ಮೋದಿ ಪ್ರಬುದ್ಧ ರಾಜಕಾರಣಿ. ಎಲ್ಲ ಸಂದರ್ಭದಲ್ಲಿ ಮಾಧ್ಯಮಕ್ಕೆ ಮಾತನಾಡಲ್ಲ. ಮಾತು ಸಾಧನೆ ಅಲ್ಲ. ಸಾಧನೆ ಮಾತನಾಡುತ್ತೆ ಎಂದರು.

ಸಿದ್ದರಾಮಯ್ಯ ಅವರೇ 2023ರ ಚುನಾವಣೆ ಬರುತ್ತೆ ಕಾದು ನೋಡಿ. ಸ್ಟ್ರಾಂಗ್ ನಿವ್ಯಾರು ಅಲ್ಲ. ರಾಜ್ಯದ ಪ್ರಜ್ಞಾವಂತ ಮತದಾರ. ಮೋದಿ, ಸಂಘ ಪರಿವಾರ ಯಡಿಯೂರಪ್ಪ ಬಿಟ್ಟರೆ ಬೇರೆ ವಿಷಯದ ಬಗ್ಗೆ ಮಾತಾಡಲ್ಲ. ನಿಮಗೆ ಎಲ್ಲಿದೆ ಸಬ್ಜೆಕ್ಟ್.?. ಸಿದ್ದರಾಮಯ್ಯ ಸಮಾಜವಾದಿ ಪಾರ್ಟಿಯಲ್ಲಿ ಇದ್ದಾಗ ಗೌರವ ಇತ್ತು ಎಂದು ತಿಳಿಸಿದರು.

ಇದು ಜೋಡೋ ಅಲ್ಲ ತೋಡೋ: ರಾಜಕಾರಣದಲ್ಲಿ ರಾಹುಲ್ ಗಾಂಧಿ ಬಚ್ಚಾ ಎಂದು ಯಡಿಯೂರಪ್ಪ ಹೇಳಿದ್ದು ಸತ್ಯ. ರಾಜಕಾರಣದಲ್ಲಿ ಏನು ಮೆಚ್ಯುರೆಟಿ ಇಲ್ಲ. ಸಿದ್ದರಾಮಯ್ಯ ಕೈ ಹಿಡ್ಕೊಂಡು ಓಡ್ತಾರೆ. ಒಂದು ದಿನ ಸಿದ್ದರಾಮಯ್ಯ ಕೈ ಹಿಡ್ಕೊಂಡ್ ರಾಹುಲ್ ಗಾಂಧಿ ಹೋಗ್ತಾರೆ. ಇನ್ನೊಂದು ದಿನ ಡಿ ಕೆ ಶಿವಕುಮಾರ್ ಕೈ ಹಿಡ್ಕೊಂಡು ಓಡ್ತಾರೆ. ಇದು ಜೋಡೋ ಅಲ್ಲ ತೋಡೋ ಎಂದು ಕಿಡಿ ಕಾರಿದರು‌.

ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ: ಜನ ಸೇರಿಸದವರಿಗೆ ಟಿಕೆಟ್ ಕೈ ತಪ್ಪುವ ಆತಂಕ

ಯಡಿಯೂರಪ್ಪ ಬಿಟ್ಟರೆ ರಾಜ್ಯ ಬಿಜೆಪಿಯಲ್ಲಿ ಬೇರೆ ಲೀಡರ್ ಇಲ್ವಾ ಎಂಬ ಬಗ್ಗೆ ಮಾತನಾಡಿದ ಅವರು, ವಯಸ್ಸು ಕಾರಣವಲ್ಲ. ಯಡಿಯೂರಪ್ಪ ಮಾಸ್ ಲೀಡರ್. ದೇಶದಲ್ಲಿ ಮೋದಿಯಷ್ಟೇ ಕರ್ನಾಟಕದಲ್ಲಿ ಬಿಎಸ್​​​ವೈ ಮಾಸ್ ಲೀಡರ್. ಅವರು ಹೇಳಿದ್ರೆ 2023ಕ್ಕೆ‌ ಬಿಜೆಪಿ ಅಧಿಕಾರಕ್ಕೆ ಬರಬೇಕು 150 ಸೀಟು ಗೆಲ್ಲುವ ಸಂಕಲ್ಪ ಮಾಡಿದ್ದಾರೆ. ಹೀಗಾಗಿ ಯಡಿಯೂರಪ್ಪ ರಾಜ್ಯದ ಹಲವೆಡೆ ಪ್ರವಾಸ ಮಾಡುತ್ತಿದ್ದಾರೆ.

ನಾವು ಯಡಿಯೂರಪ್ಪ ಅವರ ಮಾರ್ಗದರ್ಶನ ತೆಗೆದುಕೊಳ್ಳುತ್ತೇವೆ. ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಪಾದಯಾತ್ರೆ ಕಾರಣ. ವಯಸ್ಸಿನ ಕಾರಣಕ್ಕೆ ಮೋದಿ ಅಮಿತ್ ಶಾ ಅವಕಾಶ ನೀಡಿದ್ರೂ, ಯಡಿಯೂರಪ್ಪ ಸ್ವತಃ ರಾಜೀನಾಮೆ ನೀಡಿದ್ರು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.