ಬೆಂಗಳೂರು: ನಲವತ್ತು ಪರ್ಸೆಂಟ್ ಅನ್ನುವವರು ದಾಖಲೆ ಕೊಡಲಿ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಇತ್ತಲ್ಲ ಆಗ ಯಾಕೆ ಹೇಳಲಿಲ್ಲ? ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ ಪಿ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜಕಾರಣಿ ಅಂದರೆ ಆರೋಪ ಮಾಡ್ತೀರಾ. ನಮ್ಮ ಸರ್ಕಾರ ಪಾರದರ್ಶಕವಾಗಿ ನಡೆಯುತ್ತಿದೆ. ಇಲ್ಲಸಲ್ಲದ ಆರೋಪ ಮಾಡುವುದು ಸರಿನಾ?. ಹಾಗಾದರೆ ಶಾಸಕರೆಲ್ಲ ಭ್ರಷ್ಟಾಚಾರಿಗಳಾ?. ಕಳಂಕಿತರಾ?. ಇದೆಲ್ಲಾ ಷಡ್ಯಂತ್ರ ಎಂದು ಕಿಡಿಕಾರಿದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳ್ತಾರಲ್ಲಾ, ದಾಖಲೆ ಬಿಡುಗಡೆ ಮಾಡಲಿ. ನಾನು ಅದನ್ನೇ ಸವಾಲು ಹಾಕುತ್ತೇನೆ. 2013 ರಿಂದ 18 ರವರೆಗೂ ಕಾಂಗ್ರೆಸ್ ಅಧಿಕಾರದಲ್ಲಿ ಇತ್ತು. ಅದರ ದಾಖಲೆ ಬಿಡುಗಡೆ ಮಾಡಲಿ ನೋಡೋಣ ಎಂದರು.
ಇದನ್ನೂ ಓದಿ: ಗುತ್ತಿಗೆದಾರರ ಆರೋಪದ ಹಿಂದೆ ಕಾಂಗ್ರೆಸ್ ರಾಜಕೀಯ ಇದೆ : ಸಚಿವ ಸುಧಾಕರ್