ETV Bharat / state

ನನಗೆ ಇನ್ಸಲ್ಟ್ ಮಾಡ್ತೀರಾ?.. ಸಿಎಂ ಆಪ್ತ ಸಹಾಯಕ, ಪೊಲೀಸರ ವಿರುದ್ಧ ರೇಗಾಡಿದ ರೇಣುಕಾಚಾರ್ಯ

author img

By

Published : Aug 7, 2021, 7:39 AM IST

ಬೆಂಗಳೂರಿನ ಸಿಎಂ ನಿವಾಸಕ್ಕೆ ಆಗಮಿಸಿದ ಶಾಸಕ ರೇಣುಕಾಚಾರ್ಯ, ಅಲ್ಲಿನ ಸಿಬ್ಬಂದಿ ವಿರುದ್ಧ ಗರಂ ಆಗಿದ್ದಾರೆ ಎಂದು ತಿಳಿದುಬಂದಿದೆ.

Renukacharya outrage
ರೇಣುಕಾಚಾರ್ಯ ಆಕ್ರೋಶ

ಬೆಂಗಳೂರು : "ನನಗೆ ಇನ್ಸಲ್ಟ್​ ಮಾಡ್ತೀರಾ?" ಎಂದು ಸಿಎಂ ಆಪ್ತ ಸಹಾಯಕ ಮತ್ತು ಭದ್ರತಾ ಸಿಬ್ಬಂದಿ ಮೇಲೆ ಶುಕ್ರವಾರ ಹೊನ್ನಾಳಿ ಶಾಸಕ ರೇಣುಕಾಚಾರ್ಯ ರೇಗಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಆರ್.ಟಿ ನಗರದಲ್ಲಿರುವ ಸಿಎಂ ನಿವಾಸಕ್ಕೆ ಶಾಸಕರ ರೇಣುಕಾಚಾರ್ಯ ಆಗಮಿಸಿದ್ದರು. ಈ ವೇಳೆ ಅವರನ್ನು ಪೊಲೀಸರು ತಡೆದಿದ್ದರು. ಇದರಿಂದ ಕೋಪಗೊಂಡ ರೇಣುಕಾಚಾರ್ಯ, ಪೊಲೀಸರು ಹಾಗೂ ಸಿಎಂ ಆಪ್ತ ಸಹಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗ್ತಿದೆ.

ಓದಿ : ನನಗೆ ಅತೃಪ್ತಿ ಇಲ್ಲ, ನಾನು ತೃಪ್ತ: ರೇಣುಕಾಚಾರ್ಯ

"ನಾನೊಬ್ಬ ಶಾಸಕ, ನನಗೆ ಇನ್ಸಲ್ಟ್ ಮಾಡ್ತೀರಾ? ಇದು ಎರಡನೇ ಸಲ ಈ ರೀತಿ ಆಗ್ತಿರೋದು. ಹೀಗಾದರೆ, ನಾನು ಇಲ್ಲಿಗೆ ಬರೋದೇ ಇಲ್ಲ" ಎಂದು ರೇಣುಕಾಚಾರ್ಯ ಕೂಗಾಡಿದ್ದಾರೆ. ನಂತರ ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಗಮನಕ್ಕೆ ತಂದು, "ಇನ್ಮುಂದೆ ಈ ರೀತಿ ಆದರೆ, ನಾನು ಇತ್ತ ಬರೋದನ್ನೇ ಬಿಡುತ್ತೇನೆ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.